ಶುಕ್ರವಾರ, ನವೆಂಬರ್ 22, 2019
20 °C

ಭಾರತ 19 ವರ್ಷದೊಳಗಿನವರ ತಂಡಕ್ಕೆ ಏಷ್ಯಾ ಕಪ್

Published:
Updated:
Prajavani

ಕೊಲಂಬೊ: ಅಥರ್ವ ಅಂಕೋಲೆಕರ್ ( 28ಕ್ಕೆ5) ಅಮೋಘ ಬೌಲಿಂಗ್‌ ಬಲದಿಂದ ಭಾರತ 19 ವರ್ಷದೊಳಗಿನವರ ಕ್ರಿಕೆಟ್ ತಂಡವು ಶನಿವಾರ ಏಷ್ಯಾ ಕಪ್ ಗೆದ್ದಿತು.

ಫೈನಲ್‌ ಪಂದ್ಯದಲ್ಲಿ ಭಾರತದ ಯುವ ಬಳಗವು ಐದು ರನ್‌ಗಳಿಂದ ಬಾಂಗ್ಲಾದೇಶದ 19 ವರ್ಷದೊಳಗಿನವರ ತಂಡವನ್ನು ಸೋಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 32.4 ಓವರ್‌ಗಳಲ್ಲಿ 106 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡವನ್ನು ಭಾರತದ ಬೌಲರ್‌ಗಳು ಕೇವಲ 101 ರನ್‌ಗಳಿಗೆ ಕಟ್ಟಿಹಾಕಿದರು.

ಸಂಕ್ಷಿಪ್ತ ಸ್ಕೋರು: ಭಾರತ 19 ವರ್ಷದೊಳಗಿನವರು: 32.4 ಓವರ್‌ಗಳಲ್ಲಿ 106 (ಧ್ರುವ ಜುರೇಲ್ 33, ಶಾಶ್ವತ್ ರಾವತ್ 19, ಕರಣ್ ಲಾಲ್ 37, ಮೃತ್ಯುಂಜಯ್ ಚೌಧರಿ 18ಕ್ಕೆ3, ಶಮೀಮ್ ಹುಸೇನ್ 8ಕ್ಕೆ3, ಶಹೀನ್ ಆಲಂ 26ಕ್ಕೆ1) ಬಾಂಗ್ಲಾದೇಶ 19 ವರ್ಷದೊಳಗಿವರು: 33 ಓವರ್‌ಗಳಲ್ಲಿ 101 (ಅಕ್ಬರ್ ಅಲಿ 23, ಮೃತ್ಯುಂಜಯ್ ಚೌಧರಿ 21, ತೆಂಜಿಮ್ ಹಸನ್ ಸಕೀಬ್ 12, ರಕೀಬುಲ್ ಹಸನ್ ಔಟಾಗದೆ 11, ಆಕಾಶಸಿಂಗ್ 12ಕ್ಕೆ3, ವಿದ್ಯಾಧರ ಪಾಟೀಲ 25ಕ್ಕೆ1, ಅಥರ್ವ ಅಂಕೋಲೆಕರ್ 28ಕ್ಕೆ5, ಸುಷ್ಮಾ ಮಿಶ್ರಾ 27ಕ್ಕೆ1) ಫಲಿತಾಂಶ: ಭಾರತ 19 ವರ್ಷದೊಳಗಿನವರ ತಂಡಕ್ಕೆ 5 ರನ್ ಜಯ.

ಪ್ರತಿಕ್ರಿಯಿಸಿ (+)