ಲಾಹೋರ್: ಪಾಕಿಸ್ತಾನದ ಕರಾಚಿ, ಲಾಹೋರ್ ಹಾಗೂ ರಾವಲ್ಪಿಂಡಿಯಲ್ಲಿ ಫೆ. 19ರಿಂದ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ 17 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಲಾಹೋರ್ ಹಾಗೂ ರಾವಲ್ಪಿಂಡಿಯಲ್ಲಿ ನಡೆಯುವ ಪಂದ್ಯಗಳಲ್ಲಿ ಭಾಗವಹಿಸುವ ಕ್ರಿಕೆಟ್ ತಂಡಗಳ ಸದಸ್ಯರು ಉಳಿದುಕೊಳ್ಳಲು ಹೋಟೆಲ್ ಮತ್ತು ಭದ್ರತೆ ಒದಗಿಸುವ ಹೊಣೆಯನ್ನು ಪಂಜಾಬ್ ಸರ್ಕಾರ ನಿರ್ವಹಿಸಲಿದೆ. ಇದಕ್ಕಾಗಿ 12,500 ಭದ್ರತಾ ಸಿಬ್ಬಂದಿ ನಿಯೋಜನೆಗೆ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಲಾಹೋರ್ನಲ್ಲಿ ನಡೆಯುವ ಪಂದ್ಯಗಳಿಗೆ 7,600 ಪೊಲೀಸರು ಹಾಗೂ ಕಮಾಂಡೊ ಸಹಿತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 4,500 ಅಧಿಕಾರಿಗಳು ಹಾಗೂ ವಿಶೇಷ ಘಟಕದಿಂದ 411 ಸಿಬ್ಬಂದಿ ಭದ್ರತಾ ಹೊಣೆ ಹೊತ್ತಿದ್ದಾರೆ. ಸ್ನೈಪರ್ಸ್ ಮತ್ತು ವೈಮಾನಿಕ ನಿಗಾ ವ್ಯವಸ್ಥೆಯನ್ನೂ ಮಾಡಲಾಗಿದ್ದು, ರಕ್ಷಣಾ ಇಲಾಖೆಯು ಇದನ್ನು ನಿರ್ವಹಿಸಲಿದೆ ಎಂದೆನ್ನಲಾಗಿದೆ.

‘ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ಒದಗಿಸಲಾಗುವ ಭದ್ರತೆ ಕುರಿತು ಆಯುಕ್ತರು ಈಗಾಗಲೇ ಹಲವು ಬಾರಿ ಸಭೆ ನಡೆಸಿದ್ದಾರೆ. ಇನ್ನೂ ಹೆಚ್ಚುವರಿ 5 ಸಾವಿರ ಪೊಲೀಸರನ್ನು ನಿಯೋಜಿಸುವ ಯೋಜನೆ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

2023ರಲ್ಲಿ ಏಷ್ಯಾ ಕಪ್ ಆಯೋಜಿಸಿದ್ದ ಪಾಕಿಸ್ತಾನವು, ನಾಲ್ಕು ಪಂದ್ಯಗಳನ್ನಷ್ಟೇ ನಡೆಸಿತು. ಪಾಕಿಸ್ತಾನಕ್ಕೆ ತಂಡ ಕಳುಹಿಸಲು ಭಾರತ ನಿರಾಕರಿಸಿತ್ತು. ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದವು.

ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಇದರಲ್ಲಿ 11 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯನ್ನು ಲಾಹೋರ್ ಹಾಗೂ ಕರಾಚಿಯಲ್ಲಿ ಆಯೋಜಿಸಿತ್ತು. ಭಾರತ ಮಾತ್ರ ಈ ಟ್ರೋಫಿಯ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.