ಬಾಸ್ಸೆಟೆರೆ: ಟಿ20 ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ನೀಡಿದ 206 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, 3 ವಿಕೆಟ್ ಅಂತರದ ಜಯ ಸಾಧಿಸಿದೆ.

ಇಲ್ಲಿನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್, ನಿಗದಿತ 20 ಓವರ್ಗಳಲ್ಲಿ 205 ರನ್ ಗಳಿಸಿತ್ತು. ಕಾಂಗರೂ ಪಡೆ, ಈ ಗುರಿಯನ್ನು ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ತಲುಪಿತು.

ಮಧ್ಯಮ ಕ್ರಮಾಂಕದ ಬಲ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿಂಡೀಸ್ಗೆ ಅಗ್ರಕ್ರಮಾಂಕದ ಬ್ಯಾಟರ್ಗಳು ಕೈಕೊಟ್ಟರು. ಆದರೆ, ಮಧ್ಯಮ ಕ್ರಮಾಂಕದ ಆಟಗಾರರು ಆಸರೆಯಾದರು.

ಶೆರ್ಫಾನೆ ರುಧರ್ಪೋರ್ಡ್ (31 ರನ್), ರೋಮನ್ ಪೊವೆಲ್ (28 ರನ್), ರೊಮಾರಿಯೊ ಶೆಫರ್ಡ್ (28 ರನ್), ಜೇಸನ್ ಹೋಲ್ಡರ್ (26 ರನ್) ಉಪಯುಕ್ತ ಆಟವಾಡಿದರು. ಹೀಗಾಗಿ, ತಂಡದ ಮೊತ್ತ ಇನ್ನೂರರ ಗಡಿ ದಾಟಿತು.

ಮ್ಯಾಕ್ಸ್ವೆಲ್ ಬೀಸಾಟ, ಇಂಗ್ಲಿಸ್–ಗ್ರೀನ್ ಅರ್ಧಶತಕ

ಸವಾಲಿನ ಗುರಿ ಬೆನ್ನತ್ತಿದ ಆಸಿಸ್ಗೆ ಗ್ಲೆನ್ ಮ್ಯಾಕ್ಸ್ವೆಲ್ ಬಿರುಸಿನ ಆರಂಭ ನೀಡಿದರು. ಅವರು ಕೇವಲ 18 ಎಸೆತಗಳಲ್ಲೇ 47 ರನ್ ಚಚ್ಚಿದರು. ಅವರ ಇನಿಂಗ್ಸ್ನಲ್ಲಿ 1 ಬೌಂಡರಿ ಮತ್ತು 6 ಸಿಕ್ಸರ್ಗಳಿದ್ದವು. ನಂತರ ಜೋಶ್ ಇಂಗ್ಲಿಸ್ (51 ರನ್) ಮತ್ತು ಕ್ಯಾಮರೂನ್ ಗ್ರೀನ್ (ಅಜೇಯ 55 ರನ್) ತಲಾ ಅರ್ಧಶತಕ ಸಿಡಿಸಿ ಜಯದ ಹಾದಿ ಸುಲಭ ಗೊಳಿಸಿದರು.

ಆಸಿಸ್, 19.2 ಓವರ್ಗಳಲ್ಲಿ 7 ವಿಕೆಟ್ಗೆ 206 ರನ್ ಗಳಿಸಿ ಜಯ ಸಾಧಿಸಿತು.

ಮ್ಯಾಕ್ಸ್ವೆಲ್ ಪಂದ್ಯಶ್ರೇಷ್ಠ ಎನಿಸಿಕೊಂಡರು.

ಕ್ಲೀನ್ಸ್ವೀಪ್ನತ್ತ ಹೆಜ್ಜೆ

ಐದು ಪಂದ್ಯಗಳ ಸರಣಿಯ ಮೊದಲ ನಾಲ್ಕೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ಅಂತಿಮ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡುವ ಲೆಕ್ಕಾಚಾರದಲ್ಲಿದೆ. ಇದಕ್ಕೂ ಮೊದಲು ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನೂ ಪ್ರವಾಸಿ ಪಡೆ 4–0 ಅಂತರದಿಂದ ಗೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.