ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಯಂತಹ ಫಿನಿಶರ್‌ಗಾಗಿ ಹುಡುಕಾಟ ನಡೆಸುತ್ತಿದೆ ಆಸ್ಟ್ರೇಲಿಯಾ 

Last Updated 10 ಮಾರ್ಚ್ 2020, 13:46 IST
ಅಕ್ಷರ ಗಾತ್ರ

ದುಬೈ:ನಿಗದಿತ ಓವರ್‌ಗಳ ಕ್ರಿಕೆಟ್‌ ಮಾದರಿಗೆ ಭಾರತದ ಮಹೇಂದ್ರ ಸಿಂಗ್‌ ಧೋನಿಯಂತಹಅತ್ಯುತ್ತಮ ಫಿನಿಶರ್‌ಗಾಗಿ ಹುಡುಕಾಟ ನಡೆಸುತ್ತಿರುವುದಾಗಿಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಮುಖ್ಯ ಕೋಚ್‌ ಜಸ್ಟೀನ್‌ಲ್ಯಾಂಗರ್‌ ಹೇಳಿಕೊಂಡಿದ್ದಾರೆ.

ಮಾರ್ಚ್‌ 13ರಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಈ ಸರಣಿಯು ‘ಫಿನಿಶರ್‌’ ಅನ್ನು ಕಂಡುಕೊಳ್ಳಲು ನಮಗಿರುವ ಉತ್ತಮ ಅವಕಾಶ ಎಂದು ತಿಳಿಸಿದ್ದಾರೆ.

‘ಮ್ಯಾಚ್‌ ಫಿನಿಶಿಂಗ್‌ನಲ್ಲಿ ಪರಿಣತರಾಗಿದ್ದ ಮೈಕಲ್ ಬೆವನ್‌ ಅಥವಾ ಮೈಕ್ ಹಸ್ಸಿ ಅವರುಈ ಹಿಂದೆಅದೃಷ್ಟವಶಾತ್‌ನಮ್ಮ ತಂಡದಲ್ಲಿದ್ದರು. ಮಹೇಂದ್ರ ಸಿಂಗ್‌ ಧೋನಿ ಅತ್ಯುತ್ತಮ ಫಿನಿಶರ್‌. ಸದ್ಯ ಇಂಗ್ಲೆಂಡ್‌ ತಂಡದಲ್ಲಿ ಪ್ರತಿಭಾವಂತ ಆಟಗಾರ ಜಾಸ್ ಬಟ್ಲರ್ ಇದ್ದಾರೆ’ ಎಂದು ಲ್ಯಾಂಗರ್ ಹೇಳಿದ್ದಾರೆ.

ಮುಂದುವರಿದು, ‘ನನಗೆ ತಿಳಿದಂತೆ, ಪ್ರತಿಯೊಬ್ಬರೂ ಅತ್ಯುತ್ತಮ ಫಿನಿಶರ್‌ನತ್ತ ಚಿತ್ತ ನೆಟ್ಟಿದ್ದಾರೆ’ ಎಂದಿದ್ದಾರೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಮುಖಭಂಗ ಅನುಭವಿಸಿತ್ತು. ಈ ಟೂರ್ನಿಯ 2 ಮತ್ತು 3ನೇ ಪಂದ್ಯದಲ್ಲಿ ಆಸಿಸ್‌ ಪರ ಮಿಚೇಲ್‌ ಮಾರ್ಶ್‌ ಆರನೇ ಕ್ರಮಾಂಕದಲ್ಲಿ ಆಡಿದ್ದರು. ಕ್ರಮವಾಗಿ 32 ಮತ್ತು 36 ರನ್ ಗಳಿಸಿದ್ದರು.

ಹೀಗಾಗಿ ಮುಂಬರುವ ನ್ಯೂಜಿಲೆಂಡ್‌ ಸರಣಿ ಕುರಿತು ಮಾತನಾಡಿರುವ ಲ್ಯಾಂಗರ್‌, ‘ಫಿನಿಶರ್‌ ಸ್ಥಾನ ತುಂಬುವ ಅವಕಾಶವನ್ನು ಬಾಜಿಕೊಳ್ಳಲು, ಕೆಲವರ ಪಾಲಿಗೆ ಇದು ಅತ್ಯುತ್ತಮ ಅವಕಾಶವಾಗಲಿದೆ’ ಆಸಿಸ್ ಆಟಗಾರರನ್ನುದ್ದೇಶಿಸಿ ಹೇಳಿದ್ದಾರೆ.

2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಧೋನಿ, ಈ ವರ್ಷ ನಡೆಯಲಿರುವ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT