ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆ್ಯಷಸ್‌: ಆಸ್ಟ್ರೇಲಿಯಾ ಉತ್ತಮ ಆರಂಭ

Published : 30 ಜುಲೈ 2023, 17:43 IST
Last Updated : 30 ಜುಲೈ 2023, 17:43 IST
ಫಾಲೋ ಮಾಡಿ
Comments

ಲಂಡನ್‌: ಅಜೇಯ ಅರ್ಧಶತಕ ಗಳಿಸಿದ ಡೇವಿಡ್‌ ವಾರ್ನರ್‌ ಮತ್ತು ಉಸ್ಮಾನ್‌ ಖ್ವಾಜಾ ಅವರು ಆ್ಯಷಸ್‌ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನ ಕನಸಿಗೆ ಬಲ ತುಂಬಿದ್ದಾರೆ.

ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವಿಗೆ 384 ರನ್‌ಗಳ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ, ನಾಲ್ಕನೇ ದಿನವಾದ ಭಾನುವಾರದ ಆಟ ಮಳೆಯಿಂದಾಗಿ ಬೇಗನೇ ಕೊನೆಗೊಂಡಾಗ ವಿಕೆಟ್‌ ನಷ್ಟವಿಲ್ಲದೆ 135 ರನ್‌ ಗಳಿಸಿತ್ತು.

ಇದೀಗ ಅಂತಿಮ ದಿನವಾದ ಸೋಮವಾರ 249 ರನ್‌ ಗಳಿಸುವ ಸವಾಲು ಪ್ಯಾಟ್‌ ಕಮಿನ್ಸ್‌ ಬಳಗದ ಮುಂದಿದೆ. ಮಳೆ ಬಿಟ್ಟುನಿಂತರೆ, ಪಂದ್ಯ ರೋಚಕ ಅಂತ್ಯ ಕಾಣುವ ಸಾಧ್ಯತೆಯಿದೆ. ವಾರ್ನರ್‌ (ಬ್ಯಾಟಿಂಗ್‌ 58 ರನ್, 99 ಎ.) ಮತ್ತು ಖ್ವಾಜಾ (ಬ್ಯಾಟಿಂಗ್‌ 69, 130 ಎ.) ಅವರು ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇವರಿಬ್ಬರು ಇಂಗ್ಲೆಂಡ್‌ನ ವೇಗಿಗಳು ಮತ್ತು ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿನಿಂತರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಇಂಗ್ಲೆಂಡ್‌ 283. ಆಸ್ಟ್ರೇಲಿಯಾ 295. ಎರಡನೇ ಇನಿಂಗ್ಸ್: ಇಂಗ್ಲೆಂಡ್‌ 395. ಆಸ್ಟ್ರೇಲಿಯಾ 38 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 135 (ಡೇವಿಡ್‌ ವಾರ್ನರ್‌ ಬ್ಯಾಟಿಂಗ್‌ 58, ಉಸ್ಮಾನ್‌ ಖ್ವಾಜಾ ಬ್ಯಾಟಿಂಗ್‌ 69)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT