ಶುಕ್ರವಾರ, ಮಾರ್ಚ್ 5, 2021
28 °C

ರೋಡ್ಸ್‌, ಜೋಶಿ ಕೈಬಿಟ್ಟ ಬಾಂಗ್ಲಾ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಎಂಟನೇ ಸ್ಥಾನ ಪಡೆದಿದ್ದನ್ನು ಅನುಸರಿಸಿ, ಸ್ಟೀವ್‌ ರೋಡ್ಸ್‌ ಅವರನ್ನು ಅವಧಿಗಿಂತ ಮೊದಲೇ ಮುಖ್ಯ ಕೋಚ್‌ ಹುದ್ದೆಯಿಂದ ಕೈಬಿಡಲು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ನಿರ್ಧರಿಸಿದೆ. 

ವೇಗದ ಬೌಲಿಂಗ್ ಕೋಚ್‌ ಕೋರ್ಟ್ನಿ ವಾಲ್ಷ್‌ ಮತ್ತು ಸ್ಪಿನ್‌ ಬೌಲಿಂಗ್‌ ಕೋಚ್‌ ಸುನೀಲ್‌ ಜೋಶಿ ಅವರ ಗುತ್ತಿಗೆ ಅವಧಿ ಯನ್ನೂ ಮುಂದುವರಿಸದಿರಲು ತೀರ್ಮಾನಿಸಲಾಗಿದೆ. ವಿಂಡೀಸ್‌ ವೇಗಿ ವಾಲ್ಷ್‌ 2016ರ ಆಗಸ್ಟ್‌ನಲ್ಲಿ ನೇಮಕಗೊಂಡಿದ್ದರೆ, ಜೋಶಿ, 2017ರ ಆಗಸ್ಟ್‌ನಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದರು.

ಬಾಂಗ್ಲಾ,ಸೆಮಿಫೈನಲ್‌ ತಲು ಪದಿದ್ದರೂ, ಸ್ಫೂರ್ತಿಯುತ ಹೋರಾಟದಿಂದ ಕ್ರಿಕೆಟ್‌ಪ್ರಿಯರ ಹೃದಯಗೆದ್ದಿತ್ತು. ದಕ್ಷಿಣ ಆಫ್ರಿಕ, ವೆಸ್ಟ್‌ ಇಂಡೀಸ್‌ ವಿರುದ್ಧ ಸ್ಮರಣೀಯ ಗೆಲುವು ದಾಖಲಿಸಿತ್ತು. 

‘ಪಾಕ್‌ ತಂಡದ ವಿರುದ್ಧದ ಪಂದ್ಯದ ನಂತರ ಮಂಡಳಿಯಿಂದ ಪರಾಮರ್ಶೆ ಸಭೆ ನಡೆದಿತ್ತು. ಆಲ್ಲಿ ಒಪ್ಪಂದ ಮುಂದುವರಿಸದಿರಲು ತೀರ್ಮಾನಿಸಲಾಯಿತು. ಪರಸ್ಪರರ ಸಮ್ಮತಿ ಮೇರೆಗೆ ಈ ನಿರ್ಧಾರಕ್ಕೆ ಬರಲಾಯಿತು. ಶ್ರೀಲಂಕಾ ವಿರುದ್ಧ ಸರಣಿಗೆ ಹೊಸ ಕೋಚ್‌ ತೀರ್ಮಾನ ಇನ್ನೂ ಆಗಿಲ್ಲ’ ಎಂದು ಬಿಸಿಬಿ ಸಿಇಒ ನಿಜಾಮುದ್ದೀನ್‌ ಚೌಧರಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು