ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2022| ಪ್ಲೇಆಫ್‌, ಫೈನಲ್‌ ಪಂದ್ಯಗಳು ಎಲ್ಲಿ ನಡೆಯಲಿವೆ? ಇಲ್ಲಿದೆ ಮಾಹಿತಿ...

ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ಲೇಆಫ್ ಪಂದ್ಯಗಳನ್ನು ಅಹಮದಾಬಾದ್ ಮತ್ತು ಕೋಲ್ಕತ್ತದಲ್ಲಿ ಆಯೋಜಿಸಲಾಗಿದೆ. ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಖಚಿತಪಡಿಸಿದ್ದಾರೆ.

‘ಐಪಿಎಲ್ 2022ರ ಪ್ಲೇಆಫ್ ಪಂದ್ಯಗಳು ಅಹಮದಾಬಾದ್ ಮತ್ತು ಕೋಲ್ಕತ್ತದಲ್ಲಿ ನಡೆಯಲಿದೆ. ಈ ವಿಷಯ ಘೋಷಿಸಲು ನನಗೆ ಸಂತೋಷವಾಗಿದೆ. ಮೇ 24ರಂದು ಕ್ವಾಲಿಫೈಯರ್ 1 ಮತ್ತು ಮೇ 25 ರಂದು ಎಲಿಮಿನೇಟರ್ ಪಂದ್ಯ ಕೋಲ್ಕತ್ತದ ಈಡನ್ ಗಾರ್ಡನ್‌ ಮೈದಾನದಲ್ಲಿ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 27 ರಂದು ಕ್ವಾಲಿಫೈಯರ್ 2 ನಡೆಯಲಿದ್ದು, ಮೇ 29 ರಂದು ಮೆಗಾ ಫೈನಲ್ ಆಯೋಜನೆಗೊಳ್ಳಲಿದೆ’ ಎಂದು ಜಯ್‌ ಶಾ ಹೇಳಿದರು.

ಐಪಿಎಲ್‌ ಲೀಗ್‌ ಹಂತದ ಪಂದ್ಯಗಳಿಗೆ ಈ ವರೆಗೆ ಬಳಸಲಾದ ನಾಲ್ಕು ಮೈದಾನಗಳು ಮಹಾರಾಷ್ಟ್ರದಲ್ಲಿಯೇ ಇವೆ. ವಾಂಖೆಡೆ, ಬ್ರಬೋರ್ನ್, ಡಾ ಡಿವೈ ಪಾಟೀಲ್, ಎಂಸಿಎ ಮೈದಾನಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ.

ಮೇ 23 ರಿಂದ ಮೇ 28 ರವರೆಗೆ ನಡೆಯುವ ಮೂರು ತಂಡಗಳ ಮಹಿಳಾ ಟಿ20 ಟೂರ್ನಿಯನ್ನು ಪುಣೆಯಲ್ಲಿ ಆಯೋಜಿಸಲಾಗುವುದು ಎಂದು ಜಯ್ ಶಾ ಇದೇ ವೇಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT