ನವದೆಹಲಿ: ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೇಂದ್ರೀಯ ಗುತ್ತಿಗೆ ಪಟ್ಟಿಯ ಅತ್ಯುನ್ನತ ಕೆಟಗರಿ ಎ+ನಲ್ಲಿ ಉಳಿದುಕೊಂಡಿದ್ದಾರೆ. ಮಂಡಳಿ ಸೋಮವಾರ ಪ್ರಕಟಿಸಿದ ಪಟ್ಟಿಯಲ್ಲಿ ಒಟ್ಟು 34 ಮಂದಿ ಸ್ಥಾನ ಪಡೆದಿದ್ದಾರೆ.

ಕಳೆದ ಬಾರಿ ಐಪಿಎಲ್ಗೆ ಆದ್ಯತೆ ನೀಡಿ ದೇಶೀ ಕ್ರಿಕೆಟ್ ತಪ್ಪಿಸಿಕೊಂಡು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿ ಪಟ್ಟಿಯಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರು ಮರಳಿ ಸ್ಥಾನ ಪಡೆದಿದ್ದಾರೆ. ರಿಷಭ್ ಪಂತ್ ‘ಎ’ ಕೆಟಗರಿಯಲ್ಲಿ, ಅಯ್ಯರ್ ಬಿ ಕೆಟಗರಿ ಮತ್ತು ಇಶಾನ್ ಕಿಶನ್ ಸಿ ಕೆಟಗರಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಾರ್ಷಿಕ ₹7 ಕೋಟಿ ಸಂಭಾವನೆಯಿರುವ ಏ+ ದರ್ಜೆಯಲ್ಲಿ ಅಗ್ರಗಣ್ಯ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ, ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜ ಇದ್ದಾರೆ. ಎ ದರ್ಜೆಯಡಿ ಬರುವ ಆಟಗಾರರು ವಾರ್ಷಿಕ ₹5ಕೋಟಿ, ಬಿ ದರ್ಜೆಯಡಿ ಸ್ಥಾನ ಪಡೆದಿರುವ ಆಟಗಾರರು ಮೂರು ಕೋಟಿ ಮತ್ತು ಸಿ ದರ್ಜೆಯಡಿ ಸ್ಥಾನ ಪಡೆದಿರುವ ಆಟಗಾರರು ₹1ಕೋಟಿ ಪಡೆಯಲಿದ್ದಾರೆ.

‘ಸಿ’ ಕೆಟಗರಿ ಪಟ್ಟಿಯಲ್ಲಿ 19 ಆಟಗಾರರಿದ್ದಾರೆ. ಇವರಲ್ಲಿ ಐವರು ಇದೇ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ. ಅಭಿಷೇಕ್ ಶರ್ಮಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ ಮತ್ತು ಆಕಾಶ್ ದೀಪ್ ಈ ಐವರು.

ಈ ಪಟ್ಟಿಯಿಂದ ಹೊರಬಿದ್ದಿರುವ ಪ್ರಮುಖ ಆಟಗಾರ ಎಂದರೆ ಶಾರ್ದೂಲ್ ಠಾಕೂರ್. ಅವರು 2023ರ ಏಕದಿನ ವಿಶ್ವಕಪ್ನಲ್ಲಿ (ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯ) ಕೊನೆಯ ಬಾರಿ ಭಾರತ ತಂಡಕ್ಕೆ ಆಡಿದ್ದರು.

ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿ:

ಎ+ ದರ್ಜೆ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜ

ಎ ದರ್ಜೆ: ಮೊಹಮ್ಮದ್ ಸಿರಾಜ್, ಕೆ.ಎಲ್.ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಮತ್ತು ರಿಷಭ್ ಪಂತ್

ಬಿ ದರ್ಜೆ: ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್, ಮತ್ತು ಶ್ರೇಯಸ್ ಅಯ್ಯರ್

ಸಿ ದರ್ಜೆ: ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕವಾಡ್, ಶಿವಂ ದುಬೆ, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ರಜತ್ ಪಾಟೀದಾರ್, ಧ್ರುವ್ ಜುರೇಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.