ನವದೆಹಲಿ: ಜಸ್ಪ್ರೀತ್ ಬೂಮ್ರಾಈ ಕಾಲದ ಶ್ರೇಷ್ಠ ಬೌಲರ್ ಆಗಿದ್ದಾರೆ. ಅವರೀಗ ಕರಗತ ಮಾಡಿಕೊಂಡಿರುವ ಕಲೆಯನ್ನು ವರ್ಷಗಳ ಹಿಂದೆ ಪಾಕಿಸ್ತಾನದ ದಿಗ್ಗಜ ಬೌಲರ್ಗಳೂ ಹೊಂದಿದ್ದರು ಎಂದು ಮಾಜಿ ಬೌಲರ್ ಶೋಯಬ್ ಅಖ್ತರ್ ಹೇಳಿದ್ದಾರೆ.

’ಬೂಮ್ರಾ ಭಾರತದ ಅತಿ ಹೆಚ್ಚು ವೇಗದ ಬೌಲರ್ ಆಗಿದ್ದಾರೆ. ಪಿಚ್ ಮೇಲೆ ಹುಲ್ಲಿನ ಗರಿಕೆಗಳು ಇರುವ ಅಥವಾ ಇಲ್ಲದಿರುವ ಕುರಿತು ಅವರು ಯೋಚನೆ ಮಾಡುವುದಿಲ್ಲ. ಆದರೆ, ಗಾಳಿ ಬೀಸುವ ದಿಕ್ಕು ಮತ್ತು ವೇಗವನ್ನು ಅಂದಾಜು ಮಾಡುತ್ತಾರೆ. ಅದಕ್ಕೆ ತಕ್ಕಂತೆ ತಮ್ಮ ಎಸೆತಗಳನ್ನು ಪ್ರಯೋಗಿಸುತ್ತಾರೆ. ಗಾಳಿಯಲ್ಲಿಯೇ ತೇಲಾಡುವ ಎಸೆತಗಳು ಬ್ಯಾಟ್ಸ್ಮನ್ಗಳನ್ನು ವಂಚಿಸುತ್ತವೆ‘ ಎಂದು ಪಾಕ್ ತಂಡದ ಮಾಜಿ ಬೌಲರ್ ಅಭಿಪ್ರಾಯಪಟ್ಟಿದ್ದಾರೆ.

’ನಾನು, ವಾಸೀಂ ಅಕ್ರಂ ಮತ್ತು ವಕಾರ್ ಯೂನಿಸ್ ಕೂಡ ಇದೇ ರೀತಿಯ ತಂತ್ರವನ್ನು ಅನುಸರಿಸುತ್ತಿದ್ದೆವು‘ ಎಂದು ಸ್ಪೋರ್ಟ್ಸ್ ಟುಡೇ ಯೂಟ್ಯೂಬ್ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.