ಮುಂಬೈ: ಸ್ಪಿನ್ ಬೌಲಿಂಗ್ ದಂತಕಥೆ, ಕನ್ನಡಿಗ ಬಿ.ಎಸ್. ಚಂದ್ರಶೇಖರ್ ಅವರಿಗೆ ಜೀವಮಾನ ಸಾಧನೆಗಾಗಿ ಸಿಯೆಟ್ ಕ್ರಿಕೆಟ್ ರೇಟಿಂಗ್ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಂಗಳವಾರ ರಾತ್ರಿ ನಡೆದ ಸಮಾರಂಭದಲ್ಲಿ ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಬ್ಯಾಟರ್ ಬ್ರಯನ್ ಲಾರಾ ಅವರಿಗೂ ಜೀವಮಾನ ಸಾಧನೆ ಗೌರವ ಪ್ರದಾನ ಮಾಡಲಾಯಿತು.

ಪ್ರಸ್ತುತ ಭಾರತ ಟಿ20 ತಂಡದ ವಿಕೆಟ್ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ವರ್ಷದ ಸಾಧಕರ ಗೌರವ ಗಳಿಸಿದರು.

ಭಾರತ ತಂಡದ ನಿಕಟಪೂರ್ವ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶೇಷ ಸ್ಮರಣಿಕೆ ನೀಡಲಾಯಿತು. ಈಚೆಗೆ ಅವರ ನಾಯಕತ್ವದಲ್ಲಿ ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದೇ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ್ದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರೂ ವಿಶೇಷ ಗೌರವಕ್ಕೆ ಪಾತ್ರರಾದರು.

ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿರುವ ಎರಡನೇ ಬ್ಯಾಟರ್ ಇಂಗ್ಲೆಂಡ್ನ ಜೋ ರೂಟ್ ಅವರಿಗೆ ಪುರುಷರ ವಿಭಾಗದ ಅಂತರರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿನೀಡಲಾಯಿತು. ಹ್ಯಾರಿ ಬ್ರೂಕ್ ವರ್ಷದ ಬ್ಯಾಟರ್, ಶ್ರೀಲಂಕಾದ ಪ್ರಭಾತ್ ಜಯಸುರಿಯಾ ಅವರಿಗೆ ವರ್ಷದ ಬೌಲರ್ ಗೌರವ ನೀಡಲಾಯಿತು.

ಭಾರತ ಮಹಿಳಾ ತಂಡದ ದೀಪ್ತಿ ಶರ್ಮಾ ಅವರಿಗೆ ವರ್ಷದ ಅಂತರರಾಷ್ಟ್ರೀಯ ಬೌಲರ್ ಹಾಗೂ ಸ್ಮೃತಿ ಮಂದಾನಗೆ ಉತ್ತಮ ಬ್ಯಾಟರ್ ಗೌರವ ಒಲಿಯಿತು.

ಕಳೆದ ರಣಜಿ ಟ್ರೋಫಿ ಕ್ರಿಕೆಟ್ ಋತುವಿನಲ್ಲಿ 69 ವಿಕೆಟ್ ಗಳಿಸಿದ ವಿದರ್ಭ ತಂಡದ ಹರ್ಷ್ ದುಬೆ ಅವರಿಗೆ ದೇಶಿ ಕ್ರಿಕೆಟ್ ಋತುವಿನ ವರ್ಷದ ಉತ್ತಮ ಆಟಗಾರ ಗೌರವ ಸಂದಿತು. ಮುಂಬೈನ ಅಂಗಕ್ರಿಷ್ ರಘುವಂಶಿ ಅವರಿಗೆ ‘ಉದಯೋನ್ಮುಖ ಆಟಗಾರ’ ಪ್ರಶಸ್ತಿ ಗಳಿಸಿದರು.

ದಿಗ್ಗಜ ಸ್ಪಿನ್ನರ್ ಚಂದ್ರಶೇಖರ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಖ್ಯಾತನಾಮ ಸ್ಪಿನ್ನರ್ಗಳಲ್ಲಿ ಬಿ.ಎಸ್. ಚಂದ್ರಶೇಖರ್ ಪ್ರಮುಖರು. ಮೂಲತಃ ಮೈಸೂರಿನ ಚಂದ್ರಶೇಖರ್ ಅವರ ತಮ್ಮ ಲೆಗ್ಸ್ಪಿನ್ ಮೋಡಿಯ ಮೂಲಕ ಭಾರತ ತಂಡದ ಹಲವು ಗೆಲುವುಗಳಿಗೆ ಕಾರಣರಾಗಿದ್ದಾರೆ. 1964–1979ರ ಅವಧಿಯಲ್ಲಿ ಚಂದ್ರಶೇಖರ್ ಅವರು 58 ಟೆಸ್ಟ್ಗಳಲ್ಲಿ ಆಡಿ 242 ವಿಕೆಟ್ ಗಳಿಸಿದ್ದಾರೆ. 246 ಪ್ರಥಮ ದರ್ಜೆ ಪಂದ್ಯಗಳಿಂದ 1063 ವಿಕೆಟ್ ಗಳಿಸಿದ್ದಾರೆ. ಒಂದು ಅಂತರರಾಷ್ಟ್ರೀಯ ಏಕದಿನ ಪಂದ್ಯ ಆಡಿದ್ದ ಅವರು 3 ವಿಕೆಟ್ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.