ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಂತೆ ಕ್ಷೇತ್ರರಕ್ಷಣೆಯೂ ನಿರ್ಣಾಯಕವಾದದ್ದು. ಫೀಲ್ಡಿಂಗ್ ವೇಳೆ ಅತ್ಯುತ್ತಮ ನಿರ್ವಹಣೆ ತೋರುವ ತಂಡವು, ಎದುರಾಳಿಗಳ ಮೇಲೆ ಒತ್ತಡ ಸೃಷ್ಟಿಸಿ ಮೇಲುಗೈ ಸಾಧಿಸಿದ ಉದಾಹರಣೆಗಳು ಸಾಕಷ್ಟಿವೆ.

ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಆಟಗಾರರು ಅದ್ಭುತ ಕ್ಯಾಚ್ಗಳನ್ನು ಪಡೆಯುವ ಮೂಲಕ ಹೆಸರು ಮಾಡಿದ್ದಾರೆ. ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರಿಕಿ ಪಾಂಟಿಂಗ್, ಎಬಿ ಡಿ ವಿಲಿಯರ್ಸ್, ಮೊಹಮ್ಮದ್ ಕೈಫ್, ಸುರೇಶ್ ರೈನಾ, ಯುವರಾಜ್ ಸಿಂಗ್, ಫಾಫ್ ಡು ಪ್ಲೆಸಿ ಹಾಗೂ ಇನ್ನೂ ಆಡುತ್ತಿರುವ ರವೀಂದ್ರ ಜಡೇಜ, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಆ ಲಿಸ್ಟ್ನಲ್ಲಿ ಕಾಣಸಿಗುತ್ತಾರೆ. ಆದಾಗ್ಯೂ, ಕ್ರಿಕೆಟ್ ಜಗತ್ತಿನ ಶ್ರೇಷ್ಠ ಕ್ಷೇತ್ರರಕ್ಷಕರ ಕುರಿತು ಮಾತನಾಡುವಾಗ ನೆನಪಾಗುವ ಮೊದಲ ಹೆಸರು ಜಾಂಟಿ ರೋಡ್ಸ್.
.Champions Trophy Final | IND vs NZ: ಭಾರತದ ಮುಡಿಗೆ ಚಾಂಪಿಯನ್ಸ್ ಟ್ರೋಫಿ.Champions Trophy Final: IND vs NZ Highlights: 73 ಓವರ್ ಸ್ಪಿನ್ ದಾಳಿ!.
ದಿಗ್ಗಜ ಜಾಂಟಿ ಅವರನ್ನು ಆಧುನಿಕ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್ ಎಂಬ ಮಾತನ್ನು ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಒಪ್ಪಿಕೊಳ್ಳುತ್ತಾರೆ. ಆದರೆ, ಜಾಂಟಿ ಅವರು, ನ್ಯೂಜಿಲೆಂಡ್ನ ಗ್ಲೆನ್ ಫಿಲಿಪ್ಸ್ ತಮಗಿಂತಲೂ ಅದ್ಭುತವಾಗಿ ಕ್ಷೇತ್ರರಕ್ಷಣೆ ಮಾಡಬಲ್ಲರು ಎಂದು ಹೇಳಿದ್ದಾರೆ.

'ಸದ್ಯ ಫಿಲಿಪ್ಸ್ ಶ್ರೇಷ್ಠ'
ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ಪಡೆದ ಕ್ಯಾಚ್, ಕ್ರಿಕೆಟ್ ಜಗತ್ತಿನ ಹುಬ್ಬೇರಿಸಿತ್ತು.

ಭಾರತದ ಬ್ಯಾಟಿಂಗ್ ವೇಳೆ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟನರ್ ಹಾಕಿದ 19ನೇ ಓವರ್ನ 4ನೇ ಎಸೆತವನ್ನು ಶುಭಮನ್ ಗಿಲ್ ಕವರ್ಸ್ನತ್ತ ಬಲವಾಗಿ ಬಾರಿಸಿದ್ದರು. ತಮ್ಮ ತಲೆ ಮೇಲೆ ವೇಗವಾಗಿ ಹೋಗುತ್ತಿದ್ದ ಚೆಂಡನ್ನು ಮೇಲಕ್ಕೆ ಹಿಮ್ಮುಖವಾಗಿ ಜಿಗಿದು ಒಂದೇ ಕೈಯಲ್ಲಿ ಹಿಡಿದ ಫಿಲಿಪ್ಸ್, ಭಾರತಕ್ಕೆ ಆಘಾತ ನೀಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿಯೂ ಹರಿದಾಡುತ್ತಿದೆ.

ಈ ವಿಡಿಯೊವನ್ನು ಹಂಚಿಕೊಂಡಿರುವ ಅಭಿಮಾನಿಯೊಬ್ಬರು, 'ಕ್ಷಮಿಸಿ ಜಾಂಟಿ ರೋಡ್ಸ್, ಸದ್ಯ ಗ್ಲೆನ್ ಫಿಲಿಪ್ಸ್ ವಿಶ್ವ ಕ್ರಿಕೆಟ್ನ ಶ್ರೇಷ್ಠ ಫೀಲ್ಡರ್' ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಾಂಟಿ, 'ಕ್ಷಮೆ ಕೇಳುವ ಅಗತ್ಯವಿಲ್ಲ. ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ' ಎಂದಿದ್ದಾರೆ. ಆ ಮೂಲಕ, ಫಿಲಿಪ್ಸ್ ಅವರನ್ನು ಈ ಕಾಲಘಟ್ಟದ ಶ್ರೇಷ್ಠ ಫೀಲ್ಡರ್ ಎಂದು ಘೋಷಿಸಿದ್ದಾರೆ.

ಒಂದಕ್ಕಿಂತ ಮತ್ತೊಂದು ಅದ್ಭುತ
ಅಸಾಧ್ಯವೆನಿಸುವ ಸಾಕಷ್ಟು ಕ್ಯಾಚ್ಗಳನ್ನು ಈ ಹಿಂದೆಯೂ ಪಡೆದು, ಕ್ರಿಕೆಟ್ ಜಗತ್ತು ತಮ್ಮತ್ತ ತಿರುಗಿ ನೋಡುವಂತೆ ಮಾಡಿರುವ ಫಿಲಿಪ್ಸ್, ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಅದನ್ನು ಪುನರಾವರ್ತಿಸಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಅವರ ಕ್ಯಾಚ್ ಪಡೆದದ್ದು ಅಮೋಘವಾಗಿತ್ತು. ವೇಗಿ ವಿಲಿಯಮ್ ಓರೂರ್ಕಿ ಎಸೆತದಲ್ಲಿ ರಿಜ್ವಾನ್ ಕಟ್ ಶಾಟ್ ಪ್ರಯೋಗಿಸಿದ್ದರು. ಚೆಂಡು ಬೌಂಡರಿಯತ್ತ ಸಾಗಿತ್ತು. ಆದರೆ, ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ನಿಂತಿದ್ದ ಫಿಲಿಪ್ಸ್, ಎಡಕ್ಕೆ ಜಿಗಿದು ಹಿಡಿದಿದ್ದರು.

ಅದನ್ನು ಕಂಡು ಅಚ್ಚರಿಗೊಂಡ ಸಾಕಷ್ಟು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ, 'ಕ್ರಿಕೆಟ್ ಲೋಕದ ಹಕ್ಕಿ ಫಿಲಿಪ್ಸ್' ಎಂದು ಹಾಡಿಹೊಗಳಿದ್ದರು. ಇಂತಹ ಕ್ಯಾಚನ್ನು ಪಡೆಯಲು ಇನ್ಯಾರಿಗೂ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಆ ಮಾತನ್ನು ಭಾರತ ವಿರುದ್ಧದ ಪಂದ್ಯದಲ್ಲಿ ಸುಳ್ಳಾಗಿಸಿದ್ದ ಫಿಲಿಪ್ಸ್, ಮತ್ತೊಮ್ಮೆ ಅಂತಹದ್ದೇ ಸಾಮರ್ಥ್ಯ ತೋರಿದ್ದರು.

ವೇಗದ ಬೌಲರ್ ಮ್ಯಾಟ್ ಹೆನ್ರಿ ಎಸೆತವನ್ನು ವಿರಾಟ್ ಕೊಹ್ಲಿ ಸಹ ರಿಜ್ವಾನ್ ಅವರಂತೆಯೇ ಕಟ್ ಮಾಡಿದ್ದರು. ರಿಜ್ವಾನ್ ಕ್ಯಾಚ್ ಪಡೆದ ಸ್ಥಳದಲ್ಲೇ (ಬ್ಯಾಕ್ವರ್ಡ್ ಪಾಯಿಂಟ್) ನಿಂತು ಈ ಬಾರಿ ಬಲಕ್ಕೆ ಜಿಗಿದ ಫಿಲಿಪ್ಸ್, ಮತ್ತೊಮ್ಮೆ ಒಂದೇ ಕೈಯಲ್ಲಿ ಮ್ಯಾಜಿಕ್ ಮಾಡಿದರು. ಅದನ್ನು ಕಂಡು ಕೊಹ್ಲಿ ಅವಕ್ಕಾದರು. ಇಡೀ ಕ್ರೀಡಾಂಗಣ ಸ್ತಬ್ಧವಾಯಿತು.

ಈ ಎರಡು ಕ್ಯಾಚ್ಗಳ ಕುರಿತ ಚರ್ಚೆ ನಡೆಯುತ್ತಿರುವಾಗಲೇ ಫೈನಲ್ ಪಂದ್ಯದಲ್ಲಿ ಶುಭಮನ್ ಗಿಲ್ ಅವರನ್ನು ಪೆವಿಲಿಯನ್ಗೆ ಅಟ್ಟಿದರು.

ಎಷ್ಟೇ ಕಠಿಣವಾದ ಕ್ಯಾಚ್ ಆದರೂ, ನಿರಾಯಾಸವಾಗಿ ಪಡೆಯುವುದು ಫಿಲಿಪ್ಸ್ಗೆ ಕರಗತವಾಗಿದೆ. ಒಮ್ಮೆ ಎಡಕ್ಕೆ, ಒಮ್ಮೆ ಬಲಕ್ಕೆ, ಮತ್ತೊಮ್ಮೆ ಹಿಮ್ಮುಖವಾಗಿ ಮೇಲಕ್ಕೆ ಜಿಗಿದು ಗಾಳಿಯಲ್ಲಿದ್ದಾಗಲೇ ಕ್ಯಾಚ್ಗಳನ್ನು ಪಡೆಯುವ ಅವರ ಕೌಶಲ ನೋಡುಗರ ಕಣ್ಣಿಗೆ ಹಬ್ಬದಂತಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.