ಕ್ರಿಕೆಟ್‌: ಡ್ರಾ ಪ‍ಂದ್ಯದಲ್ಲಿ ಕರ್ನಾಟಕ

7
ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌: ಶ್ರೀಜಿತ್‌, ಸುಜಿತ್ ದಿಟ್ಟ ಹೋರಾಟ

ಕ್ರಿಕೆಟ್‌: ಡ್ರಾ ಪ‍ಂದ್ಯದಲ್ಲಿ ಕರ್ನಾಟಕ

Published:
Updated:
Prajavani

ಹುಬ್ಬಳ್ಳಿ: ಕೊನೆಯ ದಿನದಾಟದಲ್ಲಿ ದಿಟ್ಟ ಆಟವಾಡಿದ ಕರ್ನಾಟಕ ತಂಡದ ಬ್ಯಾಟ್ಸ್‌ಮನ್‌ಗಳು 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮಧ್ಯಪ್ರದೇಶ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಸಫಲರಾದರು.

ಇಲ್ಲಿ ಶನಿವಾರ ಮುಕ್ತಾಯವಾದ ಪಂದ್ಯದಲ್ಲಿ ಕರ್ನಾಟಕ ಗೆಲುವು ಪಡೆಯಲು 411 ರನ್‌ಗಳ ಗುರಿ ಮುಟ್ಟಬೇಕಿತ್ತು. ಶುಕ್ರವಾರದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 70 ರನ್‌ ಗಳಿಸಿತ್ತು. ಆರಂಭದ ದಿನಗಳಲ್ಲಿ ಪಿಚ್‌ ಮಧ್ಯಮ ವೇಗದ ಬೌಲರ್‌ಗಳಿಗೆ ಅನುಕೂಲವಾಗಿದ್ದರಿಂದ ಮಧ್ಯಪ್ರದೇಶ ತಂಡ ಗೆಲುವಿನ ನಿರೀಕ್ಷೆಯಲ್ಲಿತ್ತು. ಕರ್ನಾಟಕದ ಉಳಿದ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿ ಗೆಲುವಿನ ಕೇಕೆ ಹಾಕುವ ಲೆಕ್ಕಾಚಾರ ಹೊಂದಿತ್ತು.

ಇದಕ್ಕೆ ರಾಜ್ಯ ತಂಡದ ಸುಜಿತ್‌ ಎನ್‌. ಗೌಡ (84), ಕೆ.ಎಲ್‌. ಶ್ರೀಜಿತ್‌ (94) ಮತ್ತು ಆದಿತ್ಯ ಸೋಮಣ್ಣ (ಔಟಾಗದೆ 44) ಅವಕಾಶ ಕೊಡಲಿಲ್ಲ.

ಕರ್ನಾಟಕ ಅಂತಿಮವಾಗಿ 24 ಪಾಯಿಂಟ್ಸ್‌ನಿಂದ ಎಂಟನೇ ಸ್ಥಾನ ಪಡೆಯಿತು. ಮಧ್ಯಪ್ರದೇಶ 22 ಪಾಯಿಂಟ್ಸ್‌ನಿಂದ 11ನೇ ಸ್ಥಾನ ಪಡೆದುಕೊಂಡಿತು.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ ಮೊದಲ ಇನಿಂಗ್ಸ್‌ 273 ಮತ್ತು ದ್ವಿತೀಯ ಇನಿಂಗ್ಸ್‌ 263. ಕರ್ನಾಟಕ ಪ್ರಥಮ ಇನಿಂಗ್ಸ್‌ 126 ಹಾಗೂ ದ್ವಿತೀಯ ಇನಿಂಗ್ಸ್‌ 119 ಓವರ್‌ಗಳಲ್ಲಿ 7 ವಿಕೆಟ್‌ಗೆ 319 (ಸುಜಿತ್‌ ಎನ್‌. ಗೌಡ 84, ಕೆ.ಎಲ್‌. ಶ್ರೀಜಿತ್‌ 94, ಎಸ್‌.ಎಸ್‌. ಸತೇರಿ 29, ಆದಿತ್ಯ ಸೋಮಣ್ಣ ಔಟಾಗದೆ 44; ಶುಭಮ್‌ ಕೈತಿವಾಸ್‌ 19ಕ್ಕೆ2, ಅನುಭವ ಅಗರವಾಲ್‌ 49ಕ್ಕೆ2, ರಾಹುಲ್‌ ಬಾಥಮ್‌ 68ಕ್ಕೆ2). ಫಲಿತಾಂಶ: ಡ್ರಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !