ಮಂಗಳವಾರ, ಏಪ್ರಿಲ್ 7, 2020
19 °C

ಸೋಂಕು ತಡೆಗೆ ಕ್ರಮ: ಸ್ವಯಂ ನಿರ್ಬಂಧ ಹೇರಿಕೊಂಡ ಆಫ್ರಿಕಾ, ಕಿವೀಸ್ ಕ್ರಿಕೆಟಿಗರು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್: ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟಿಗರು ಸ್ವಯಂ ನಿರ್ಬಂಧ ಹೇರಿಕೊಳ್ಳಲು ನಿರ್ಧರಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಆಟಗಾರರಿಗೆ 14 ದಿನಗಳ ಏಕಾಂತವಾಸ ಅನುಭವಿಸುವಂತೆ ವೈದ್ಯರು ಈಗಾಗಲೇ ಸಲಹೆ ನೀಡಿದೆ.

ಭಾರತ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯು ಅರ್ಧದಲ್ಲೇ ರದ್ದಾದ ಬಳಿಕ ಆಫ್ರಿಕನ್ನರು ಮಂಗಳವಾರ ತವರಿಗೆ ತೆರಳಿದ್ದರು. ಅವರನ್ನು ವೈದ್ಯರು ಬುಧವಾರ ಕೂಲಂಕಷವಾಗಿ ಪರೀಕ್ಷಿಸಿದ್ದರು. ಮುಖ್ಯ ವೈದ್ಯಾಧಿಕಾರಿ ಶುಯಬ್ ಮಾಂಜ್ರಾ ಅವರು ಆಟಗಾರರಿಗೆ ‘ಸೆಲ್ಫ್‌ ಕ್ವಾರೆಂಟೈನ್‌’ಗೆ (ಪ್ರತ್ಯೇಕ ವಾಸ) ಸಲಹೆ ನೀಡಿದ್ದಾರೆ. 

‘ಆಟಗಾರರು ಸ್ವತಃ ತಮ್ಮ ಮೇಲೆ ನಿರ್ಬಂಧ ಹೇರಿಕೊಳ್ಳುವುದು ಅನಿವಾರ್ಯವಾಗಿದೆ. ಅವರು ಸಾಮಾಜಿಕ ಚಟುವಟಿಕೆಗಳು ಮತ್ತು ಸಂಪರ್ಕವನ್ನು 14 ದಿನಗಳವರೆಗೆ ಕಡಿದುಕೊಳ್ಳಬೇಕು. ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರಲ್ಲಿ ತೋರಿಸಿಕೊಳ್ಳಬೇಕು. ಆ ಮೂಲಕ ಸೋಂಕು ಹರಡುವುದನ್ನು ಮತ್ತು ತಮಗೆ ಅಪಾಯವಾಗುವುದನ್ನು ತಪ್ಪಿಸಿಕೊಳ್ಳಬೇಕು’ ಎಂದು ಡಾ.ಮಾಂಜ್ರಾ ತಿಳಿಸಿದ್ದರು.

ಇದೀಗ ಆಸ್ಟ್ರೇಲಿಯಾ ಪ್ರವಾಸವನ್ನು ಮೊಟಕುಗೊಳಿಸಿರುವ ಕಿವೀಸ್‌ ಆಟಗಾರರು, 14 ದಿನಗಳ ಸ್ವಯಂ ಏಕಾಂತವಾಸಕ್ಕೆ ನಿರ್ಧರಿಸಿದ್ದಾರೆ. ಅಲ್ಲಿನ ಪ್ರಧಾನಿ ಜೆಸಿಂಡಾ ಆರ್ಡರ್ನ್‌ ಅವರು, ವಿದೇಶದಿಂದ ಮರಳಿದ ಎಲ್ಲರೂ ಸ್ವಯಂ ಪ್ರತ್ಯೇಕ ವಾಸ ನಡೆಸುವಂತೆ ಬುಧವಾರ ಕರೆ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು