ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಎದುರಿನ ಏಕದಿನ ಕ್ರಿಕೆಟ್‌: ಪೆರೇರ ಬದಲಿಗೆ ಶನಕ ಶ್ರೀಲಂಕಾ ನಾಯಕ

ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ
Last Updated 16 ಜುಲೈ 2021, 14:00 IST
ಅಕ್ಷರ ಗಾತ್ರ

ಕೊಲಂಬೊ: ದಸುನ್ ಶನಕ, ಭಾರತದ ಎದುರಿನ ನಿಗದಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸುವರು. ಏಕದಿನ ಮತ್ತು ಟಿ20 ಸರಣಿಗಳಿಗೆ 25 ಆಟಗಾರರ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದುಗಾಯಗೊಂಡ ಕುಶಲ್ ಪೆರೇರ ಅವರನ್ನು ಕೈಬಿಡಲಾಗಿದೆ.

ಮೇ ತಿಂಗಳಲ್ಲಿ ಕುಶಲ್ ಪೆರೇರ ತಂಡದ ನಾಯಕನಾಗಿ ನೇಮಕವಾಗಿದ್ದರು. ಅವರ ನೇತೃತ್ವದಲ್ಲಿ ಶ್ರೀಲಂಕಾ ಆಡಿದ ಮೂರು ಸರಣಿಗಳಲ್ಲೂ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಶನಕ ಹೆಗಲಿಗೆ ನಾಯಕತ್ವದ ಹೊಣೆ ಹೊರಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಶನಕ, ಐದು ವರ್ಷಗಳಲ್ಲಿ ಲಂಕಾ ತಂಡಕ್ಕೆ ನೇಮಕವಾಗುತ್ತಿರುವ 10ನೇ ನಾಯಕ.

‘ಗಾಯಗೊಂಡಿರುವ ಕುಶಲ್ ಪೆರೇರ ಅವರಿಗೆ ಭಾರತ ಎದುರಿನ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ’ ಎಂದು ತಂಡವನ್ನು ಪ್ರಕಟಿಸುವ ಮೊದಲು ಶ್ರೀಲಂಕಾ ಕ್ರಿಕೆಟ್ ಹೊರಿಡಿಸಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು.

ಭಾರತ ಎದುರಿನ ಸರಣಿ ಭಾನುವಾರ ನಡೆಯುವ ಮೊದಲ ಏಕದಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಅಭ್ಯಾಸ ನಡೆಸುತ್ತಿದ್ದ ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕುಶಲ್ ಪೆರೇರ ಅವರ ಬಲಭಾಗದ ಭುಜಕ್ಕೆ ಗಾಯ ಆಗಿತ್ತು. ಇಂಗ್ಲೆಂಡ್‌ನಲ್ಲಿ ಬಯೊಬಬಲ್ ನಿಯಮಗಳನ್ನು ಉಲ್ಲಂಘಿಸಿದ ಕಾರಣತಂಡದ ಮತ್ತೊಬ್ಬ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಅವರ ಮೇಲೆ ನಿಷೇಧ ಹೇರಲಾಗಿದೆ.

ಹೀಗಾಗಿ ಯುವ ವಿಕೆಟ್‌ ಕೀಪರ್‌ಗಳಾದ ಮಿನೋದ್ ಭಾನುಕ ಲಾಹಿರು ಉದರ ಅವರಿಗೆ ಅವಕಾಶ ನೀಡಲಾಗಿದೆ. ಅಭ್ಯಾಸದ ಸಂದರ್ಭದಲ್ಲಿ ಎಡಗಾಲಿನ ಹಿಮ್ಮಡಿ ಉಳುಕಿದ ಕಾರಣದಿಂದ ಎಡಗೈ ವೇಗಿ ಬಿನುರ ಫರ್ನಾಂಡೊ ಏಕದಿನ ತಂಡಕ್ಕೆ ಲಭ್ಯರಿಲ್ಲ. ಟಿ20 ಸರಣಿಗೆ ಅವರನ್ನು ಪರಿಗಣಿಸಲಾಗಿದೆ.

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಆತಿಥೇಯರ ಎದುರಿನ ಟೆಸ್ಟ್ ಸರಣಿ ಆಗಸ್ಟ್ ನಾಲ್ಕರಿಂದ ನಡೆಯಲಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ನೇತೃತ್ವದ ಎರಡನೇ ತಂಡವನ್ನು ಶ್ರೀಲಂಕಾಕ್ಕೆ ಕಳುಹಿಸಲಾಗಿದೆ.

ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಧನಂಜಯ ಡಿ‘ಸಿಲ್ವ, ಆವಿಷ್ಕ ಫರ್ನಾಂಡೊ, ಭಾನುಕ ರಾಜಪಕ್ಸ, ಪಾತುಮ್ ನಿಸಾಂಕ, ಚರಿತ ಅಸಲಂಕ, ವನಿಂದು ಹಸರಂಗ, ಆಶೆನ್ ಬಂಡಾರ, ಮಿನೋದ್ ಭಾನುಕ, ಲಾಹಿರು ಉದರ, ರಮೇಶ್ ಮೆಂಡಿಸ್, ಚಮಿಕ ಕರುಣರತ್ನೆ, ಬಿನುರ ಫರ್ನಾಂಡೊ, ದುಷ್ಮಂತ ಚಮೀರ, ಲಕ್ಷಣ್ ಸಂಡಗನ್, ಅಕಿಲ ಧನಂಜಯ, ಶಿರಾನ್ ಫರ್ನಾಂಡೊ, ಧನಂಜಯ ಲಕ್ಷಣ್‌, ಇಶಾನ್ ಜಯರತ್ನೆ, ಪ್ರವೀಣ್ ಜಯವಿಕ್ರಮ, ಅಸಿತ ಫರ್ನಾಂಡೊ, ಕಾಸುನ್ ರಜಿತ, ಲಾಹಿರು ಕುಮಾರ, ಇಸುರು ಉಡಾನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT