ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ದಿಕ್ ಆಟ; ಭಾರತಕ್ಕೆ ಸರಣಿ ಕಿರೀಟ

ಶಿಖರ್ ಧವನ್ ಅರ್ಧಶತಕ; ನಟರಾಜನ್‌ಗೆ ಎರಡು ವಿಕೆಟ್
Last Updated 6 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

ಸಿಡ್ನಿ: ವಿಜಯದ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಭಾರತ ಕ್ರಿಕೆಟ್ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಚುಟುಕು ಸರಣಿ ಜಯದ ಕಾಣಿಕೆ ನೀಡಿದರು.

’ಫಿನಿಷರ್‘ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪಾಂಡ್ಯ (ಅಜೇಯ 42; 22ಎಸೆತ, 3ಬೌಂಡರಿ, 2ಸಿಕ್ಸರ್) ಆಟದ ಬಲದಿಂದ ಭಾರತವು ಆಸ್ಟ್ರೇಲಿಯಾ ಎದುರು 6 ವಿಕೆಟ್‌‌ಗಳಿಂದ ಗೆದ್ದಿತು. 2–0ಯಿಂದ ಸರಣಿ ಕೈವಶ ಮಾಡಿಕೊಂಡಿತು.

ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್, ಹಂಗಾಮಿ ನಾಯಕ ಮ್ಯಾಥ್ಯೂ ವೇಡ್ (58; 32ಎ, 10ಬೌಂ, 1ಸಿ) ಮತ್ತು ಸ್ಟೀವ್ ಸ್ಮಿತ್ (46; 38ಎ, 3ಬೌಂ, 2ಸಿ) ಅಟದಿಂದ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 194 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 19.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 195 ರನ್ ಗಳಿಸಿತು.

ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ಭಾರತ ತಂಡವು ಟಿ20 ಸರಣಿ ಗೆದ್ದಿತ್ತು. ಕೊರೊನಾ ಕಾಲದಲ್ಲಿ ಆಡಿದ ಮೊದಲ ಚುಟುಕು ಸರಣಿಯಲ್ಲಿ ಗೆದ್ದ ಸಾಧನೆಯನ್ನು ವಿರಾಟ್ ಬಳಗ ಮಾಡಿದೆ.

ಉತ್ತಮ ಆರಂಭ: ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಕೆ.ಎಲ್. ರಾಹುಲ್ (30;22ಎ) ಮತ್ತು ಶಿಖರ್ ಧವನ್ (52; 36ಎ) ಉತ್ತಮ ಆರಂಭ ನೀಡಿದರು.

ಆರನೇ ಓವರ್‌ನಲ್ಲಿ ರಾಹುಲ್ ಔಟಾದಾಗ ಶಿಖರ್ ಜೊತೆಗೂಡಿದ ನಾಯಕ ವಿರಾಟ್ (40; 24ಎ) ಬೌಲರ್‌ಗಳಿಗೆ ಸಖತ್ ಚುರುಕು ಮುಟ್ಟಿಸಿದರು. ಎರಡು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸಿಡಿಸಿದರು. ಶಿಖರ್ ಅರ್ಧಶತಕ ಗಳಿಸಿದರು. 12ನೇ ಓವರ್‌ನಲ್ಲಿ ಶಿಖರ್ ಔಟಾದಾಗ ತಂಡದ ಮೊತ್ತವು 100ರ ಗಡಿ ದಾಟಿರಲಿಲ್ಲ.

ಸಂಜು ಸ್ಯಾಮ್ಸನ್ (15ರನ್) ಹೆಚ್ಚು ಹೊತ್ತು ನಿಲ್ಲಲಿಲ್ಲ. ಲಯದಲ್ಲಿದ್ದ ವಿರಾಟ್ 17ನೇ ಓವರ್‌ನಲ್ಲಿ ಡೇನಿಯಲ್ ಸ್ಯಾಮ್ಸ್‌ ಬೌಲಿಂಗ್‌ನಲ್ಲಿ ಔಟಾದರು. ಆಗ ಕ್ರೀಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶ್ರೇಯಸ್ ಅಯ್ಯರ್ ಜೊತೆಗೂಡಿದರು. ಐದನೇ ವಿಕೆಟ್ ಪಾಲುದಾರಿಕೆಯಲ್ಲಿ 46 ರನ್‌ಗಳನ್ನು ಸೇರಿಸಿದರು. ಅದರಲ್ಲಿ ಶ್ರೇಯಸ್ ಪಾಲು 12 ರನ್ ಮಾತ್ರ. ಉಳಿದೆದ್ದಲ್ಲವೂ ಹಾರ್ದಿಕ್ ಆಟದ ಗಮ್ಮತ್ತು.

ಚಾಹಲ್ ದುಬಾರಿ: ಮೊದಲ ಪಂದ್ಯದ ರೂವಾರಿ ಯಜುವೇಂದ್ರ ಚಾಹಲ್ (51ಕ್ಕೆ1) ಬ್ಯಾಟ್ಸ್‌ಮನ್‌ಗಳ ಬೀಸಾಟಕ್ಕೆ ಗುರಿಯಾದರು. ಆದರೆ, ಯಾರ್ಕರ್ ಪ್ರತಿಭೆ ಟಿ. ನಟರಾಜ್ (20ಕ್ಕೆ2) ಚೆಂದದ ಬೌಲಿಂಗ್ ಮಾಡಿದರು. ಆದರೆ, ಮೊದಲ ಪಂದ್ಯದಲ್ಲಿ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ ಕಾರಣಕ್ಕೆ ಕಂಕಷನ್ ನಿಯಮದಡಿಯಲ್ಲಿ ವಿಶ್ರಾಂತಿ ಪಡೆದಿದ್ದಾರೆ.

ಧೋನಿಯಷ್ಟು ಚುರುಕಲ್ಲ ನಾನು..!

ಸಿಡ್ನಿ: ವಿಕೆಟ್‌ಕೀಪಿಂಗ್‌ನಲ್ಲಿ ಮಿಂಚಿನ ವೇಗದ ಸ್ಟಂಪಿಂಗ್ ಮಾಡುವಲ್ಲಿ ಭಾರತದ ಮಹೇಂದ್ರಸಿಂಗ್ ಧೋನಿ ಅಪ್ರತಿಮರು. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೂ ಅವರ ಖ್ಯಾತಿ ಮಸುಕಾಗಿಲ್ಲ.

ಭಾನುವಾರ ಭಾರತ ಎದುರಿನ ಪಂದ್ಯದಲ್ಲಿ ಶಿಖರ್ ಧವನ್ ಅವರನ್ನು ಸ್ಟಂಪಿಂಗ್ ಮಾಡುವ ಯತ್ನದಲ್ಲಿ ವಿಫಲರಾದ ಆಸ್ಟ್ರೇಲಿಯಾ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್, ’ಓ ನಾನು ಧೋನಿಯನ್ನುಯಷ್ಟು ಚುರುಕಲ್ಲ‘ ಎಂದು ಉದ್ಗರಿಸಿದರು. ಅವರ ಮಾತು ಕೇಳಿದ ಶಿಖರ್ ನಕ್ಕರು. ವೇಡ್ ಕೂಡ ನಕ್ಕರು. ಈ ಸಂಭಾಷಣೆಯು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಮೆಚ್ಚುಗೆ ಗಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT