ನವದೆಹಲಿ: ಇದೇ ತಿಂಗಳು ಒಮನ್ ಮತ್ತು ಯುಎಇಯಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆಯನ್ನು (ಡಿಆರ್ಎಸ್) ಪರಿಚಯಿಸಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ.

ಚುಟುಕು ವಿಶ್ವಕಪ್ ಟೂರ್ನಿಯು ಅಕ್ಟೋಬರ್17 ರಿಂದ ನವೆಂಬರ್ 14ರ ವರೆಗೆ ನಡೆಯಲಿದೆ.

ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಪ್ರಕಾರ,ಪ್ರತಿತಂಡವು ಒಂದು ಇನಿಂಗ್ಸ್ನಲ್ಲಿ ಗರಿಷ್ಠ ಎರಡು ಡಿಆರ್ಎಸ್ ತೆಗೆದುಕೊಳ್ಳಬಹುದಾಗಿದೆ.

ʼಕೋವಿಡ್-19 ಕಾರಣದಿಂದಾಗಿ ಕೆಲವೊಮ್ಮೆ ಪಂದ್ಯಗಳ ಸಂದರ್ಭದಲ್ಲಿಹೆಚ್ಚು ಅನುಭವ ಹೊಂದಿರದ ಅಂಪೈರ್ಗಳು ಕರ್ತವ್ಯ ನಿರ್ವಹಿಸಬಹುದುʼ ಎಂಬುದನ್ನು ಗಮನದಲ್ಲಿರಿಸಿಎಲ್ಲ ಮಾದರಿಯ ಪಂದ್ಯಗಳಲ್ಲಿಯೂ ಡಿಆರ್ಎಸ್ ಪಡೆದುಕೊಳ್ಳುವ ಅವಕಾಶವನ್ನು ತಂಡಗಳಿಗೆ ನೀಡುವುದಾಗಿ ಕಳೆದ ವರ್ಷ ಜೂನ್ನಲ್ಲೇ ಐಸಿಸಿಪ್ರಕಟಿಸಿತ್ತು.

ಹಾಗಾಗಿ ನಿಗದಿತ ಓವರ್ಗಳ ಪಂದ್ಯದಲ್ಲಿ ಪ್ರತಿ ಇನಿಂಗ್ಸ್ಗೆ ಎರಡು ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮೂರು ಡಿಆರ್ಎಸ್ ನೀಡಲಾಗುವುದು.

ಈ ಹಿಂದಿನ (2016ರ) ಟಿ20 ವಿಶ್ವಕಪ್ ಟೂರ್ನಿವೇಳೆಡಿಆರ್ಎಸ್ ಅನ್ನು ಬಳಕೆ ಮಾಡಿರಲಿಲ್ಲ.

2018ರಲ್ಲಿ ನಡೆದ ಮಹಿಳಾಟಿ20 ಟೂರ್ನಿಯಲ್ಲಿ ಡಿಆರ್ಎಸ್ ಬಳಸಲಾಗಿತ್ತು. ಐಸಿಸಿಯ ಅಂತರರಾಷ್ಟ್ರೀಯಚುಟುಕು ಕ್ರಿಕೆಟ್ನಲ್ಲಿ ಈ ವ್ಯವಸ್ಥೆಬಳಕೆ ಮಾಡಿದ್ದು ಅದೇ ಮೊದಲು.ಅದಾದ ನಂತರ2020ರಲ್ಲಿ ಆಸ್ಟ್ರೇಲಿಯಾದಲ್ಲಿಅಯೋಜನೆಗೊಂಡ ಮಹಿಳಾಟಿ20 ಟೂರ್ನಿಯಲ್ಲಿಯೂ ಅಳವಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.