ಮಂಗಳವಾರ, ಆಗಸ್ಟ್ 16, 2022
29 °C
ಹೊಟ್ಟೆನೋವಿನಿಂದ ಬಳಲಿದ್ದ ಆಟಗಾರರು: ಬೆನ್ ಸ್ಟೋಕ್ಸ್‌

ENG vs IND: ನಾಲ್ಕನೇ ಟೆಸ್ಟ್‌ನಲ್ಲಿ ತೂಕ ಕಳೆದುಕೊಂಡ ಇಂಗ್ಲೆಂಡ್ ಆಟಗಾರರು!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಮೊಟೇರಾದಲ್ಲಿ ಈಚೆಗೆ ನಡೆದ ಭಾರತದೆದುರಿನ ನಾಲ್ಕನೇ ಟೆಸ್ಟ್‌ನಲ್ಲಿ ಆಡಿದ್ದತಮ್ಮ ತಂಡದ ಕೆಲವು ಆಟಗಾರರು ದಿಢೀರನೆ ತಮ್ಮ ದೇಹತೂಕ ಕಳೆದುಕೊಂಡಿದ್ದಾರೆ ಎಂದು ಇಂಗ್ಲೆಂಡ್  ಅಲ್‌ರೌಂಡರ್ ಬೆನ್ ಸ್ಟೋಕ್ಸ್‌ ಹೇಳಿದ್ದಾರೆ.

‘ಅಹಮದಾಬಾದಿನಲ್ಲಿ ಸುಮಾರು 41 ಡಿಗ್ರಿ ಸೆಲ್ಸಿಯಸ್‌ನಲ್ಲಿ ತಾಪಮಾನವಿತ್ತು. ಅದರಿಂದಾಗಿ ನಾವು ಅನಾರೋಗ್ಯಕ್ಕೆ ಒಳಗಾದೆವು. ನಮ್ಮಲ್ಲಿ ಕೆಲವರಿಗೆ ಹೊಟ್ಟೆನೋವು ಕಾಡಿತ್ತು. ಅದರಿಂದಾಗಿ ದೇಹತೂಕ ಇಳಿಯಿತು’ ಎಂದು ಸ್ಟೋಕ್ಸ್‌ ಇಂಗ್ಲೆಂಡ್‌ನ ಡೇಲಿ ಮಿರರ್‌ ಪತ್ರಿಕೆಗೆ ಹೇಳಿದ್ದಾರೆ.

ಹೋದ ವಾರ ನಾನು ಐದು ಕೆಜಿ ತೂಕ ಕಳೆದುಕೊಂಡಿದ್ದೇನೆ. ಡಾಮ್ ಸಿಬ್ಲಿ ನಾಲ್ಕು ಕೆಜಿ ಮತ್ತು ಜಿಮ್ಮಿ ಆ್ಯಂಡರ್ಸನ್ ಮೂರು ಕೆಜಿ ತೂಕ ಕಳೆದುಕೊಂಡಿದ್ದಾರೆ. ಸ್ಪಿನ್ನರ್ ಜ್ಯಾಕ್ ಲೀಚ್ ತಮ್ಮ ಬೌಲಿಂಗ್ ಸ್ಪೆಲ್‌ಗಳ ಮಧ್ಯದ ಬಹುತೇಕ ಸಮಯವನ್ನು ಕ್ರೀಡಾಂಗಣದ ಹೊರಗೆ ಕಳೆದಿದ್ದಾರೆ. ಬಹಳಷ್ಟು ಸಲ ಶೌಚಾಲಯಕ್ಕೂ ಹೋಗಿದ್ದಾರೆ ಎಂದು ಬೆನ್ ಹೇಳಿದರು.

‘ನಾನು ಈ ಕಾರಣಗಳನ್ನು ನೀಡುತ್ತಿರುವುದು ನಮ್ಮ ಸೋಲನ್ನು ಸಮರ್ಥಿಸಿಕೊಳ್ಳಲು ಅಲ್ಲ.  ಭಾರತದ ಆಟಗಾರರು ಅದರಲ್ಲೂ ರಿಷಭ್ ಪಂತ್ ಅವರ ಅಮೋಘ ಆಟದ ಮುಂದೆ ನಾವು ಸೋತಿದ್ದೇವೆ. ನಮ್ಮೆಲ್ಲ ಕೊರತೆಗಳು ಮತ್ತು ಅನಾರೋಗ್ಯದ ನಡುವೆಯೂ ಆಡಲು ಕಣಕ್ಕಿಳಿದಿದ್ದೆವು. ಸಂಪೂರ್ಣ ಸಾಮರ್ಥ್ಯದೊಂದಿಗೆ ಆಡಿದೆವು’ ಎಂದು ಬೆನ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು