ಲೀಲಾಜಾಲವಾಗಿ ಬ್ಯಾಟ್ ಬೀಸಿದ ಡಕೆಟ್
ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಪ್ರಮುಖ ಬೌಲರ್‌ಗಳಾದ ವೇಗಿ ಜೋಶ್ ಹ್ಯಾಜಲ್‌ವುಡ್, ಮಿಚೇಲ್ ಸ್ಟಾರ್ಕ್ ಅವರ ಅನುಪಸ್ಥಿತಿಯಿಂದಾಗಿ ಹಿನ್ನಡೆ ಅನುಭವಿಸುತ್ತಿರುವ ಆಸಿಸ್ ಬೌಲರ್‌ಗಳೆದುರು ಬೆನ್ ಡಕೆಟ್ ಲೀಲಾಜಾಲವಾಗಿ ಬ್ಯಾಟ್ ಬೀಸಿದರು. 143 ಎಸೆತಗಳನ್ನು ಎದುರಿಸಿದ ಅವರು, 165 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು.