ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ ದಿಗ್ಗಜ ಡೆರೆಕ್ ಅಂಡರ್‌ವುಡ್ ನಿಧನ

Published 15 ಏಪ್ರಿಲ್ 2024, 16:24 IST
Last Updated 15 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಲಂಡನ್: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನ ಯಶಸ್ವಿ ಸ್ಪಿನ್ ಬೌಲರ್ ಡೆರೆಕ್ ಅಂಡರ್‌ವುಡ್ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಮಾಜಿ ಕೌಂಟಿ ಕೆಂಟ್ ಸೋಮವಾರ ಪ್ರಕಟಿಸಿದೆ.

ಎಡಗೈ ಸ್ಪಿನರ್ ಡೆರೆಕ್ 86 ಟೆಸ್ಟ್ ಪಂದ್ಯಗಳಲ್ಲಿ 297 ವಿಕೆಟ್‌ಗಳನ್ನು ಪಡೆದಿದ್ದಾರೆ. 1963 ರಿಂದ 1987 ರವರೆಗೆ ಪ್ರಥಮ ದರ್ಜೆ ವೃತ್ತಿಜೀವನದ ಬಹುಪಾಲು ಬಳಕೆಯಲ್ಲಿದ್ದ ಮಂಜಿನಿಂದ ಕಾಪಾಡಲು ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದ ಕಾಲದ (ಅನ್‌ಕವರ್ಡ್‌) ಪಿಚ್‌ಗಳಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿದ್ದರು.  

1968ರಲ್ಲಿ ಓವಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ಗೆಲುವು ಸಾಧಿಸಲು ಅಂಡರ್‌ವುಡ್ (50ಕ್ಕೆ7) ಪರಿಣಾಮಕಾರಿ ಬೌಲಿಂಗ್ ಮಾಡಿದ್ದರು. 1966ರಲ್ಲಿ 21ನೇ ವಯಸ್ಸಿನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಪದಾರ್ಪಣೆ ಮಾಡಿದರು ಮತ್ತು 1982ರಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಿದರು.

ಕ್ರಿಕೆಟ್ ವೃತ್ತಿಜೀವನ ಮುಗಿದ ನಂತರ ಅಂಡರ್‌ವುಡ್‌ 2009 ರಲ್ಲಿ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದ ಮಾಲೀಕರಾದ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಅಧ್ಯಕ್ಷರಾಗಿ ವಾರ್ಷಿಕ ಅವಧಿಗೆ ಸೇವೆ ಸಲ್ಲಿಸಿದರು.

‘ಡೆರೆಕ್ ಅವರು ಕೆಂಟ್ ಮತ್ತು ಇಂಗ್ಲೆಂಡ್ ಎರಡಕ್ಕೂ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಕ್ಲಬ್ ಮತ್ತು ದೇಶಕ್ಕಾಗಿ ಟ್ರೋಫಿಗಳನ್ನು ಗೆದ್ದಿದ್ದಾರೆ ಮತ್ತು ಇತಿಹಾಸದ ಪುಸ್ತಕಗಳಲ್ಲಿ ಅವರ ಹೆಸರು ಶಾಶ್ವತವಾಗಿದೆ’ ಎಂದು ಕೆಂಟ್ ಅಧ್ಯಕ್ಷ ಸೈಮನ್ ಫಿಲಿಪ್ ಕ್ಲಬ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಐಸಿಸಿ (ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ಹಾಲ್ ಆಫ್ ಫೇಮ್‌ಗೆ ಅವರ ಸೇರ್ಪಡೆಯು ವಿಶ್ವ ಕ್ರಿಕೆಟ್‌ನಲ್ಲಿ ಅವರು ಹೊಂದಿದ್ದ ಗೌರವ  ತೋರಿಸುತ್ತದೆ.

ಡೆರೆಕ್ ಅಂಡರ್‌ವುಡ್
ಡೆರೆಕ್ ಅಂಡರ್‌ವುಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT