ಸೌಥಾಂಪ್ಟನ್: ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರು ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಸವಾಲಿನ ಗುರಿ ನೀಡಿದೆ.
ಸೌಥಾಂಪ್ಟನ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರೋಹಿತ್ ಶರ್ಮ ಬಳಗ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 198 ರನ್ ಗಳಿಸಿತು.
ಹಾರ್ದಿಕ್ (51 ರನ್, 33 ಎ, 4X6, 6X1) ಅರ್ಧಶತಕದ ಮೂಲಕ ಮಿಂಚಿದರೆ, ಸೂರ್ಯಕುಮಾರ್ (39 ರನ್, 19 ಎ, 4X4, 6X2) ಮತ್ತು ದೀಪಕ್ ಹೂಡಾ (33 ರನ್, 17 ಎ, 4X3, 6X2) ಬಿರುಸಿನ ಆಟವಾಡಿದರು.
ನಾಯಕ ರೋಹಿತ್ (24 ರನ್, 14 ಎ, 4X5) ಮತ್ತು ಇಶಾನ್ ಕಿಶನ್ (8 ರನ್, 10 ಎ.) ಮೊದಲ ವಿಕೆಟ್‌ಗೆ 29 ರನ್ ಸೇರಿಸಿದರು. ಬಿರುಸಿನ ಆರಂಭ ಪಡೆದಿದ್ದ ರೋಹಿತ್ ಅವರು ಮೊಯೀನ್ ಅಲಿ ಬೌಲಿಂಗ್‌ನಲ್ಲಿ ಬಟ್ಲರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ತಮ್ಮ ಮುಂದಿನ ಓವರ್‌ನಲ್ಲಿ ಅಲಿ, ಇಶಾನ್ ವಿಕೆಟ್ ಪಡೆದರು.
ಈ ವೇಳೆ ಜತೆಯಾದ ಹೂಡಾ ಮತ್ತು ಸೂರ್ಯಕುಮಾರ್, ಎದುರಾಳಿ ಬೌಲರ್‌ಗಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಹೂಡಾ ಔಟಾದ ಬಳಿಕ ಬಂದ ಪಾಂಡ್ಯ, ಆಕ್ರಮಣಕಾರಿ ಆಟವಾಡಿದರು. ಸೂರ್ಯಕುಮಾರ್ ಜತೆ ನಾಲ್ಕನೇ ವಿಕೆಟ್‌ಗೆ 37 ರನ್ ಹಾಗೂ ಐದನೇ ವಿಕೆಟ್‌ಗೆ ಅಕ್ಷರ್ ಪಟೇಲ್ (17, 12ಎ) ಜತೆ 45 ರನ್‌ಗಳ ಜತೆಯಾಟ ನೀಡಿದರು.
ಕೊನೆಯ ಮೂರು ಓವರ್‌ಗಳಲ್ಲಿ ಭಾರತ 20 ರನ್ ಮಾತ್ರ ಗಳಿಸಿತು. ಇದರಿಂದ ಸ್ಕೋರ್ 200ರ ಗಡಿ ದಾಟಲಿಲ್ಲ.
ಸಂಕ್ಷಿಪ್ತ ಸ್ಕೋರ್: ಭಾರತ 8ಕ್ಕೆ 198 (20 ಓವರ್) ರೋಹಿತ್ ಶರ್ಮ 24, ಇಶಾನ್ ಕಿಶನ್ 8, ದೀಪಕ್ ಹೂಡಾ 33, ಸೂರ್ಯಕುಮಾರ್ ಯಾದವ್ 39, ಹಾರ್ದಿಕ್ ಪಾಂಡ್ಯ 51, ಅಕ್ಷರ್ ಪಟೇಲ್ 17, ದಿನೇಶ್ ಕಾರ್ತಿಕ್ 11, ಮೊಯೀನ್ ಅಲಿ 26ಕ್ಕೆ 2, ಕ್ರಿಸ್ ಜೋರ್ಡನ್ 23ಕ್ಕೆ 2
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.