ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್ ಅಂತರದ ಜಯ ಸಾಧಿಸಿರುವ ಭಾರತ, ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

ಪಂದ್ಯ ಗೆದ್ದು ಟ್ರೋಫಿ ಪಡೆದ ಭಾರತಕ್ಕೆ ₹20 ಕೋಟಿ ನಗದು (2.24 ಮಿಲಿಯನ್ ಡಾಲರ್) ಬಹುಮಾನ ದೊರಕಿದೆ.

2025ರ ಐಪಿಎಲ್ಗಾಗಿ ನಡೆದ ಹರಾಜಿನಲ್ಲಿ ರಿಷಭ್ ಪಂತ್ ಪಡೆದ ಸಂಭಾವನೆಗಿಂತ ಈ ಹಣ ಕಡಿಮೆಯಾಗಿದೆ. ಈ ಬಾರಿಯ ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾಗಿರುವ ಪಂತ್ ₹27 ಕೋಟಿ ಪಡೆದಿದ್ದಾರೆ ಎಂದು ಎನ್ಡಿಟಿವಿ ವರದಿ ತಿಳಿಸಿದೆ.
.IPL 2025: ಲಖನೌ ಸೂಪರ್ ಜೈಂಟ್ಸ್ ನಾಯಕರಾಗಿ ರಿಷಭ್ ಪಂತ್ ನೇಮಕ.
ಮತ್ತೊಂದೆಡೆ, ಪಂದ್ಯದಲ್ಲಿ ಎರಡನೇ ಸ್ಥಾನ ಪಡೆದ ನ್ಯೂಜಿಲೆಂಡ್ ತಂಡಕ್ಕೆ ₹9.72 ಕೋಟಿ ರೂ. (1.12 ಮಿಲಿಯನ್ ಡಾಲರ್) ಬಹುಮಾನ ನೀಡಲಾಗಿದೆ.

ದುಬೈನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 251 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 6 ವಿಕೆಟ್ಗೆ 254 ರನ್ ಗಳಿಸಿ ಜಯದ ನಗೆ ಬೀರಿತು.
.Champions Trophy Final | IND vs NZ: ಭಾರತದ ಮುಡಿಗೆ ಚಾಂಪಿಯನ್ಸ್ ಟ್ರೋಫಿ.Champions Trophy Final: IND vs NZ Highlights: 73 ಓವರ್ ಸ್ಪಿನ್ ದಾಳಿ!.Champions Trophy | IND vs NZ Final: ಬೀದರ್ ಮೂಲದ ಚಕ್ರವರ್ತಿಯ ಕೈಚಳಕ.Champions Trophy |12 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಕಿರೀಟ; ಸಂಭ್ರಮದ ಚಿತ್ರಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.