ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡೆಯುವ ಕ್ರಿಕೆಟ್ ಪಂದ್ಯವು ಚಿತ್ರದರ್ಶಕವಿದ್ದಂತೆ. ಅಳಿಸಲಾಗದ ನೆನಪುಗಳು ಸಾಲುಗಟ್ಟುತ್ತವೆ.

1985ರಲ್ಲಿ ಇಲ್ಲಿ 125 ರನ್ಗಳನ್ನು ಭಾರತ ತಂಡವು ರಕ್ಷಿಸಿಕೊಂಡಿತ್ತು. ನಂತರದ ವರ್ಷದಲ್ಲಿ ಜಾವೇದ್ ಮಿಯಾಂದಾದ್ ಅವರು ಚೇತನ್ ಶರ್ಮಾ ಅವರ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆದು ತಮ್ಮ ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು. 1991ರಲ್ಲಿ ಅಕೀಬ್ ಜಾವೇದ್ ಮಾಡಿದ ಲೆಗ್ ಬಿಫೋರ್ ವಿಕೆಟ್ಗಳ ಹ್ಯಾಟ್ರಿಕ್. 1996ರಲ್ಲಿ ಮೊಹಮ್ಮದ್ ಅಜರುದ್ಧೀನ್ ಅವರು ಅತಾ ವುರ್ ರೆಹಮಾನ್ ಅವರನ್ನು ಕೊನೆಯ ಓವರ್ನಲ್ಲಿ ದಂಡಿಸಿದ್ದು. 2021ರ ಅಕ್ಟೋಬರ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿ ಅವರು ಇನಿಂಗ್ಸ್ನ ಮೊದಲ 13 ಎಸೆತಗಳ ಅಂತರದಲ್ಲಿ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರ ವಿಕೆಟ್ ಉರುಳಿಸಿದ್ದು ಪ್ರಮುಖವಾದವು. ಅವತ್ತು ರೋಹಿತ್ ಮೊದಲ ಓವರ್ನಲ್ಲಿಯೇ ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದರು.

ಅಲ್ಲಿಂದ ಇಲ್ಲಿಯವರೆಗೆ ಎಡಗೈ ವೇಗಿ ಆಫ್ರಿದಿ ತಮ್ಮ ವೃತ್ತಿಜೀವನದಲ್ಲಿ ಹಲವು ಸವಾಲುಗಳನ್ನು ಅನುಭವಿಸಿದ್ದಾರೆ. ಕುಸಿತ ಕಂಡಿದ್ದಾರೆ. ಒಮ್ಮೆ ಅವರಿಗೆ ನಾಯಕತ್ವ ನೀಡಿ ಕಿತ್ತುಕೊಳ್ಳಲಾಯಿತು. ಇಂತಹ ಎಡವಟ್ಟುಗಳು ಪಾಕಿಸ್ತಾನ ಕ್ರಿಕೆಟ್ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಈಗ ಅವರ ಬೌಲಿಂಗ್ ಕೂಡ ಮೊದಲಿನಷ್ಟು ಹರಿತವಾಗಿಯೂ ಉಳಿದಿಲ್ಲ. ಆದರೂ ವಿಶ್ವ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನ ತಂಡದ ಆಟಗಾರರ ಆಯ್ಕೆಯು ಅಲ್ಲಿಯ ಅಭಿಮಾನಿಗಳಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿಲ್ಲ. ಇದೀಗ ಆ ವಿಶ್ವಾಸ ಗಳಿಸಿಕೊಳ್ಳಲು ಪಾಕ್ ತಂಡಕ್ಕೊಂದು ಅವಕಾಶ ಇದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ನಾಯಕತ್ವದ ಬಳಗದ ಸವಾಲನ್ನು ಆತಿಥೇಯ ಪಾಕ್ ಮೆಟ್ಟಿ ನಿಂತರೆ ಅಭಿಮಾನಿಗಳ ಒಲವು ಗಳಿಸಬಹುದು.

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತ ತಂಡವನ್ನು ಸೋಲಿಸಿದ್ದ ಸವಿನೆನಪು ಪಾಕ್ ಬಳಗಕ್ಕೆ ಇದೆ. ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಆಗಿನ ನಾಯಕ ವಿರಾಟ್ ಕೊಹ್ಲಿಯ ನಿರ್ಧಾರ ಹಾಗೂ ಫಕರ್ ಜಮಾನ್ (114ರನ್) ಶತಕಗಳು ಭಾರತ ತಂಡ ಸೋಲಿಗೆ ಕಾರಣವಾಗಿದ್ದವು. ಆದರೆ ಕಳೆದ ಬುಧವಾರ ನಡೆದಿದ್ದ ನ್ಯೂಜಿಲೆಂಡ್ ಪಂದ್ಯದಲ್ಲಿ ಪಾಕ್ ತಂಡವು ಸೋತಿತ್ತು. ಅದಾದ ನಂತರ ಜಮಾನ್ ಅವರು ಗಾಯದಿಂದಾಗಿ ಇಡೀ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಕಿವೀಸ್ ಎದುರಿನ 60 ರನ್ಗಳ ಸೋಲು ಪಾಕ್ ತಂಡವನ್ನು ಸಂಕಷ್ಟದ ಪ್ರಪಾತಕ್ಕೆ ತಳ್ಳಿರುವುದು ಸುಳ್ಳಲ್ಲ. ಅದರಿಂದಾಗಿ ಭಾರತ ತಂಡದ ಎದುರು ಗೆದ್ದರೆ ಮಾತ್ರ ಮೊಹಮ್ಮದ್ ರಿಜ್ವಾನ್ ಪಡೆಗೆ ಸೆಮಿಫೈನಲ್ ಅವಕಾಶ ಸಿಗಲಿದೆ. ಹಾಲಿ ಚಾಂಪಿಯನ್ ಕೂಡ ಆಗಿರುವ ಪಾಕ್ ತಂಡಕ್ಕೆ ಇದು ಪ್ರತಿಷ್ಠೆಯ ಪಂದ್ಯವೂ ಹೌದು.

ಇತ್ತ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಜಯಿಸಿದೆ. ಆದರೆ ಆ ಪಂದ್ಯವು ತಂಡದ ಕೆಲವು ಗಂಭೀರ ಲೋಪಗಳಿಗೆ ಕನ್ನಡಿಯನ್ನೂ ಹಿಡಿದಿತ್ತು. ಒಂದು ಹಂತದಲ್ಲಿ ಸುಲಭವಾಗಿ ಜಯಿಸಬಹುದಾಗಿದ್ದ ಪಂದ್ಯವನ್ನು ರೋಹಿತ್ ಬಳಗವೇ ಜಟಿಲಗೊಳಿಸಿಕೊಂಡಿತ್ತು. ಆ ಪಂದ್ಯದಲ್ಲಿ ಬಾಂಗ್ಲಾ ತಂಡವು 35 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ ಚೇತರಿಸಿಕೊಂಡ 228 ರನ್ಗಳ ಮೊತ್ತವನ್ನು ಬಾಂಗ್ಲಾ ಗಳಿಸಿತ್ತು.

ಗುರಿ ಬೆನ್ನತ್ತಿದ ತಂಡಕ್ಕೆ ರೋಹಿತ್ ಆಕ್ರಮಣಕಾರಿ ಆರಂಭ ನೀಡಿದರು. ಶುಭಮನ್ ಗಿಲ್ ಪರಿಪಕ್ವವಾದ ಆಟವಾಡಿದರು. ಆದರೆ ಮಧ್ಯದಲ್ಲಿ ಬ್ಯಾಟರ್ಗಳು ಕುಸಿದರು. ಗಿಲ್ ತಾಳ್ಮೆಯ ಆಟದ ಮೂಲಕ ಶತಕ ಹೊಡೆದು ಗೆಲುವಿನ ಕಾಣಿಕೆ ನೀಡಿದರು. ಅದರಿಂದಾಗಿ ಮೊಹಮ್ಮದ್ ಶಮಿ ಅವರು 5 ವಿಕೆಟ್ ಗೊಂಚಲು ಪಡೆದ ಸಾಧನೆ ವ್ಯರ್ಥವಾಗಲಿಲ್ಲ. ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಗಿಲ್ ಅಮೋಘ ಲಯದಲ್ಲಿದ್ದಾರೆ.

ಆದರೆ ಮಾಜಿ ಅಗ್ರಶ್ರೇಯಾಂಕದ ಆಟಗಾರ ವಿರಾಟ್ ಕೊಹ್ಲಿ ಲಯಕ್ಕೆ ಮರಳುವ ಸವಾಲು ಎದುರಿಸುತ್ತಿದ್ದಾರೆ. ಈ ಹಿಂದೆಯೂ ಹಲವು ಬಾರಿ ಪಾಕ್ ಪಾಲಿಗೆ ಕೊಹ್ಲಿ ಗುಮ್ಮನಂತೆ ಕಾಡಿದ್ದಾರೆ. ಈ ಪಂದ್ಯದಲ್ಲಿ ಅವರು ಯಶಸ್ವಿಯಾದರೆ, ಈಚೆಗೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಅವರು ಅನುಭವಿಸಿದ ವೈಫಲ್ಯವನ್ನು ಅಭಿಮಾನಿಗಳ ಮನದಿಂದ ಕಿತ್ತೊಗೆಯಬಹುದು.

ಸ್ಪಿನ್ ಎಸೆತ ಅಭ್ಯಾಸ ಮಾಡಿದ ಕೊಹ್ಲಿ

ದುಬೈ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶನಿವಾರ ನೆಟ್ಸ್ನಲ್ಲಿ ಸ್ಪಿನ್ನರ್ಗಳ ಎಸೆತಗಳನ್ನು ಎದುರಿಸಲು ಹೆಚ್ಚು ಆದ್ಯತೆ ನೀಡಿದರು. ಭಾನುವಾರ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿರುವ ಪಿಚ್ ನಿಧಾನಗತಿಯ ಎಸೆತಗಳಿಗೆ ನೆರವಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸ್ಪಿನ್ನರ್ಗಳು ಪರಿಣಾಮಕಾರಿಯಾಗಬಹುದು. ಅಲ್ಲದೇ ಕೊಹ್ಲಿ ಅವರು ಇತ್ತೀಚೆಗೆ ಬಾಂಗ್ಲಾ ಎದುರಿನಪಂದ್ಯದಲ್ಲಿ ಲೆಗ್ಸ್ಪಿನ್ನರ್ ರಿಷದ್ ಹುಸೇನ್ ಎದುರು ಔಟಾಗಿದ್ದರು. ಇದೂ ಸೇರಿದಂತೆ ಕಳೆದ 6 ಪಂದ್ಯಗಳಲ್ಲಿ ಸ್ಪಿನ್ನರ್ಗಳ ಎದುರು ಔಟಾಗಿದ್ದರು.

ಪಾಕ್ ತಂಡದಲ್ಲಿ ಲೆಗ್ಸ್ಪಿನ್ನರ್ ಅಬ್ರಾರ್ ಅಹಮದ್ ಸಾಂದರ್ಭಿಕ ಸ್ಪಿನ್ನರ್ ಖುಷದಿಲ್ ಶಾ ಮತ್ತು ಸಲ್ಮಾನ್ ಆಘಾ ಅವರು ಕೊಹ್ಲಿಗೆ ಸವಾಲೊಡ್ಡಬಹುದು. ಭಾರತ ತಂಡದಲ್ಲಿಯೂ ಐದು ಸ್ಪಿನ್ನರ್ಗಳಿದ್ದಾರೆ. ಅದರಲ್ಲಿ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಆಲ್ರೌಂಡರ್ಗಳು. ಕುಲದೀಪ್ ಯಾದವ್ ಹಾಗೂ ವರುಣ ಚಕ್ರವರ್ತಿ ಅವರು ಪರಿಣತ ಸ್ಪಿನ್ ಬೌಲರ್ಗಳು.

ಪಂದ್ಯ ಆರಂಭ: ಮಧ್ಯಾಹ್ನ 2.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.