ಜಿಮ್ನಾಸ್ಟಿಕ್ಸ್: ಪ್ರಣತಿಗೆ ಕಂಚು
ನವದೆಹಲಿ: ಭಾರತದ ಜಿಮ್ನಾಸ್ಟ್ ಪ್ರಣತಿ ನಾಯಕ್, ಟರ್ಕಿಯ ಅಂತ್ಯಾಲದಲ್ಲಿ ನಡೆಯುತ್ತಿರುವ ಎಫ್‌ಐಜಿ ಕಲಾತ್ಮಕ ಜಿಮ್ನಾಸ್ಟಿಕ್ಸ್ ಅಪಾರೆಟಸ್ ವಿಶ್ವಕಪ್‌ನಲ್ಲಿ ಶನಿವಾರ ಕಂಚಿನ ಪದಕ ಗೆದ್ದುಕೊಂಡರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ 29 ವರ್ಷ ವಯಸ್ಸಿನ ಪ್ರಣತಿ 13.417 ಸ್ಕೋರ್‌ನೊಡನೆ ಮೂರನೇ ಸ್ಥಾನ ಪಡೆದರು. ಅಮೆರಿಕದ ಜಾಯ್ಲಾ ಹಂಗ್ (13.667) ಮತ್ತು ಕ್ಲಾರ್ ಪೇಸ್ (13.567) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.