8ರಂದು ಬೆಂಗಳೂರಿಗೆ ಐಸಿಸಿ ವಿಶ್ವಕಪ್

7

8ರಂದು ಬೆಂಗಳೂರಿಗೆ ಐಸಿಸಿ ವಿಶ್ವಕಪ್

Published:
Updated:
Deccan Herald

ಮುಂಬೈ: ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಟ್ರೋಫಿಯನ್ನು ಡಿಸೆಂಬರ್ 8ರಂದು ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಶನಿವಾರವೇ ಟ್ರೋಫಿಯನ್ನು ಭಾರತಕ್ಕೆ ತರಲಾಗಿದೆ. ಭಾನುವಾರದಿಂದ ದೇಶದ ಒಂಬತ್ತು ಮಹಾನಗರಳಲ್ಲಿ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಮುಂಬೈನಲ್ಲಿ ಭಾನುವಾರ ವೆಸ್ಟ್‌ ಮಲಾಡ್‌ನ ಇನ್‌ಫಿನಿಟಿ ಮಾಲ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.

ಎಂಟರಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಫೋರಂ ಮಾಲ್‌ನಲ್ಲಿ  ಇಡಲಾಗುವುದು. 15ರಂದು ಕೋಲ್ಕತ್ತ, 23ರಂದು ದೆಹಲಿಯಲ್ಲಿ ಪ್ರದರ್ಶನಗೊಳ್ಳಲಿದೆ. ಟ್ರೋಫಿ ಪ್ರದರ್ಶನದ ಇನ್ನುಳಿದ ನಗರಗಳ ಹೆಸರುಗಳನ್ನು ಇನ್ನೂ ಬಹಿರಂಗ ಪಡಿಸಿಲ್ಲ.

2019ರ ಮೇ 30 ರಿಂದ ಜುಲೈ 14ರವರೆಗೆ ಇಂಗ್ಲೆಂಡ್ ನಲ್ಲಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !