ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO | ಟಿ20 ವಿಶ್ವಕಪ್ ಟೂರ್ನಿಯ ಗೀತೆ ಬಿಡುಗಡೆ: ಲಿವ್ ದ ಗೇಮ್, ಲವ್ ದ ಗೇಮ್...

Last Updated 23 ಸೆಪ್ಟೆಂಬರ್ 2021, 13:05 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಒಮನ್‌ನಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಗೀತೆಯನ್ನು ಗುರುವಾರ ಬಿಡುಗಡೆ ಮಾಡಲಾಯಿತು.

‘ಅವತಾರ್ಸ್‌’ ಆ್ಯನಿಮೇಷನ್ ಮಾದರಿಯಲ್ಲಿ ಈ ಗೀತೆಯ ವಿಡಿಯೊ ತಯಾರಿಸಲಾಗಿದೆ. ಅದರಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಕೀರನ್ ಪೊಲಾರ್ಡ್ ಅವರ ಆ್ಯನಿಮೇಟೆಡ್ ಪ್ರತಿಕೃತಿಗಳಿವೆ.

‘ಲಿವ್ ದ ಗೇಮ್..ಲವ್‌ ದ ಗೇಮ್‌..’ ಎಂಬ ಧ್ಯೇಯವಾಕ್ಯ ಪ್ರಧಾನವಾದ ಹಾಡು ಇದಾಗಿದೆ. ಇದಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ವಿಡಿಯೊದಲ್ಲಿ ವಿಶ್ವದ ಬೇರೆ ಬೇರೆ ದೇಶಗಳ ಯುವ ಅಭಿಮಾನಿಗಳು (ಆ್ಯನಿಮೇಟೆಡ್) ವಿಶ್ವಕಪ್ ಟೂರ್ನಿಗಾಗಿ ಕಾತುರದಿಂದ ಕಾಯುವ ರೂಪಕವನ್ನು ಚಿತ್ರಿಸಲಾಗಿದೆ. ಜಮೈಕಾ, ಮುಂಬೈ, ಕರಾಚಿ, ಆಕ್ಲಂಡ್ ಸೇರಿದಂತೆ ವಿವಿಧ ನಗರಗಳ ಯುವಕ–ಯುವತಿಯರು ತಮ್ಮ ಐಪಾಡ್, ಮೊಬೈಲ್, ಲ್ಯಾಪ್‌ಟ್ಯಾಪ್‌ಗಳಲ್ಲಿ ಪಂದ್ಯಗಳನ್ನು ವೀಕ್ಷಿಸುವಂತಹ ದೃಶ್ಯಾವಳಿಗಳನ್ನು ಹಾಕಲಾಗಿದೆ.

ಆಧುನಿಕ ಕಾಲದ ಯುವಸಮೂಹವನ್ನು ಕೇಂದ್ರಿಕರಿಸಿಕೊಂಡು ಮಾಡಿರುವ ವಿಡಿಯೊ ಗಮನ ಸೆಳೆಯುತ್ತದೆ. ತ್ರಿಡಿ ಮತ್ತು ಟುಡಿ ತಂತ್ರಜ್ಞಾನವನ್ನು ಬಳಸಲಾಗಿದೆ.

ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್‌, ಬಿಸಿಸಿಐ ಮತ್ತು ಐಸಿಸಿಯ ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಈ ವಿಡಿಯೊ ಬಿಡುಗಡೆಯಾಯಿತು. ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್‌ ತಂಡದ ನಾಯಕ ಕೀರನ್ ಪೊಲಾರ್ಡ್, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಅಫ್ಗಾನಿಸ್ತಾನದ ರಶೀದ್ ಖಾನ್ ಇದ್ದರು.

‘ವಿಶ್ವದಲ್ಲಿ ಕ್ರಿಕೆಟ್‌ಗೆ ಶತಕೋಟಿ ಅಭಿಮಾನಿಗಳು ಇದ್ದಾರೆ. ಅದರಲ್ಲಿ ಯುವ ಅಭಿಮಾನಿಗಳ ಬಳಗ ದೊಡ್ಡದು. ಅವರ ಮನ ಗೆಲ್ಲುವ ಪ್ರಯತ್ನ ಈ ಗೀತೆಯಲ್ಲಿದೆ’ ಎಂದು ಐಸಿಸಿ ಮಾರುಕಟ್ಟೆ ಮತ್ತು ಸಂವಹನ ವಿಭಾಗದ ಮಹಾಪ್ರಬಂಧಕ ಕ್ಲೇರ್ ಫರ್ಲಾಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT