ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ರ‍್ಯಾಂಕಿಂಗ್‌ | ಸರಣಿಯಲ್ಲಿ ಅಮೋಘ ಪ್ರದರ್ಶನ; ಐದು ಸ್ಥಾನ ಮೇಲೇರಿದ ವಿರಾಟ್

ಟಿ20 ಕ್ರಿಕೆಟ್‌
Last Updated 13 ಡಿಸೆಂಬರ್ 2019, 6:18 IST
ಅಕ್ಷರ ಗಾತ್ರ

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್‌ ಕೊಹ್ಲಿ685 ಅಂಕಗಳೊಂದಿಗೆ ಐಸಿಸಿ ಟಿ20ರ‍್ಯಾಂಕಿಂಗ್‌ನಲ್ಲಿ ಐದು ಸ್ಥಾನಗಳು ಮೇಲೇರಿದ್ದು, ಹತ್ತನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಭಾರತ ತಂಡದ ನಾಯಕ ಕೊಹ್ಲಿಏಕದಿನ ಮತ್ತು ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್‌ನ ಮೂರು ಮಾದರಿಗಳಲ್ಲಿ 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಬ್ಯಾಟ್‌ ಬೀಸುತ್ತಿರುವ ಏಕೈಕ ಬ್ಯಾಟ್ಸ್‌ಮನ್‌ ಎನಿಸಿರುವ ಕೊಹ್ಲಿ, ವಿಂಡೀಸ್‌ಸರಣಿಯ ಮೂರು ಪಂದ್ಯಗಳಿಂದ 183 ರನ್‌ (ಕ್ರಮವಾಗಿ ಔಟಾಗದೆ 94, 19 ರನ್‌ ಹಾಗೂ ಔಟಾಗದೆ 70 ರನ್‌) ಗಳಿಸಿದ್ದರು. ಹೀಗಾಗಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು.

ಮೊದಲ ಹಾಗೂ ಮೂರನೇ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದ ಕನ್ನಡಿಗ ಕೆ.ಎಲ್‌ ರಾಹುಲ್‌ ಮೂರು ಸ್ಥಾನಗಳ ಏರಿಕೆ ಕಂಡಿದ್ದಾರೆ. ಒಟ್ಟು 734 ಪಾಯಿಂಟ್ಸ್‌ ಹೊಂದಿರುವ ರಾಹುಲ್6ನೇ ಸ್ಥಾನದಲ್ಲಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ರೋಹಿತ್‌ ಶರ್ಮಾ(686 ಪಾಯಿಂಟ್ಸ್‌), ಒಂದು ಸ್ಥಾನ ಕಳೆದುಕೊಂಡು 9ಕ್ಕೆ ಜಾರಿದ್ದಾರೆ.

ಪಾಕಿಸ್ತಾನದ ಬಾಬರ್‌ ಅಜಂ (879 ಪಾಯಿಂಟ್ಸ್), ಆಸ್ಟ್ರೇಲಿಯಾದ ಆ್ಯರನ್ ಫಿಂಚ್‌ (810 ಪಾಯಿಂಟ್ಸ್‌)ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿ, ರೋಹಿತ್‌ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಈ ಇಬ್ಬರೂ 2633 ರನ್‌ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಮಾತ್ರವಲ್ಲದೆ,ಸತತ ನಾಲ್ಕನೇ ವರ್ಷವೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವರ್ಷವೊಂದರಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಳ್ಳಲು ಕೊಹ್ಲಿ ಸಜ್ಜಾಗಿದ್ದಾರೆ.2016ರಲ್ಲಿ 2,595 ರನ್‌, 2017ರಲ್ಲಿ 2,818ರನ್‌ ಹಾಗೂ 2018ರಲ್ಲಿ 2,735 ರನ್‌ ಕಲೆ ಹಾಕಿದ್ದರು. ಈ ವರ್ಷ ಮೂರೂ ಮಾದರಿಯಿಂದ ಒಟ್ಟು 2,366 ರನ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT