ಶುಕ್ರವಾರ, ಜೂಲೈ 3, 2020
21 °C

19 ವರ್ಷದೊಳಗಿನವರ ವಿಶ್ವಕಪ್‌: ಸುಲಭ ಗೆಲುವಿನೊಡನೆ ಭಾರತ ಶುಭಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಬ್ಲೊಮ್‌ಫೊಂಟೀನ್‌: ಸಾಂಘಿಕ ಆಟವಾಡಿದ ಹಾಲಿ ಚಾಂಪಿಯನ್‌ ಭಾರತ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 90 ರನ್‌ಗಳಿಂದ ಸುಲಭವಾಗಿ ಸೋಲಿಸಿ ಶುಭಾರಂಭ ಮಾಡಿತು.

ಮಾಂಗ್ವಂಗ್ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ  ಭಾರತ ತಂಡ ನಿಗದಿತ 50 ಓವರುಗಳಲ್ಲಿ 4 ವಿಕೆಟ್‌ಗೆ 297 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಉತ್ತರವಾಗಿ ಶ್ರೀಲಂಕಾ 46ನೇ ಓವರ್‌ನಲ್ಲಿ 207 ರನ್‌ಗಳಿಗೆ ಕುಸಿಯಿತು.

ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ (59; 74 ಎಸೆತ, 8 ಬೌಂಡರಿ), ನಾಯಕ ಪ್ರಿಯಂ ಗರ್ಗ್ (56; 72 ಎ, 2 ಬೌಂ), ಧ್ರುವ್ ಜುರೇಲ್ (52; 48 ಎ, 3 ಬೌಂ, 1 ಸಿಕ್ಸರ್‌), ತಿಲಕ್ ವರ್ಮಾ (46, 53 ಎ, 3 ಬೌಂ) ಮತ್ತು ಸಿದ್ದೇಶ್ ವೀರ್ (27 ಎಸೆತಗಳಲ್ಲಿ 44) ಭಾರತ ಸವಾಲಿನ ಮೊತ್ತ ಗಳಿಸಲು ನೆರವಾದರು.

ಶ್ರೀಲಂಕಾ ಪರ ರವೀಂದು ರಸಂತ್‌ (70 ಎಸೆತಗಳಲ್ಲಿ 49) ಮತ್ತು ನಿಪುಣ್‌ ಧನಂಜಯ್‌ (59 ಎಸೆತಗಳಲ್ಲಿ 50) ಬಿಟ್ಟರೆ ಉಳಿದವರು ಹೋರಾಟದ ಆಟವಾಡಲಿಲ್ಲ. ಆಕಾಶ್‌ ಸಿಂಗ್‌, ಸಿದ್ದೇಶ್‌ ವೀರ್‌ ಮತ್ತು ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಭಾರತ 19 ವರ್ಷದೊಳಗಿನವರು: 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 297 (ಯಶಸ್ವಿ ಜೈಸ್ವಾಲ್ 59, ದಿವ್ಯಾಂಶ್ ಸಕ್ಸೇನ 23, ತಿಲಕ್ ವರ್ಮಾ 46, ಪ್ರಿಯಂ ಗರ್ಗ್‌ 56,  ಧ್ರುವ್ ಜುರೇಲ್‌ ಔಟಾಗದೆ 52, ಸಿದ್ದೇಶ್ ವೀರ್ ಔಟಾಗದೆ 44; ಅಂಶಿ ಡಿ ಸಿಲ್ವಾ 40ಕ್ಕೆ1, ಅಶಿನಾಯ್ ಡ್ಯಾನಿಯೆಲ್ 39ಕ್ಕೆ1, ದಿಲ್ಶನ್ ಮಧುಸಂಕ 69ಕ್ಕೆ1, ಕವಿಂದು ನದೀಶನ್ 58ಕ್ಕೆ1); ಶ್ರೀಲಂಕಾ 19 ವರ್ಷದೊಳಗಿನವರು: 45.2 ಓವರುಗಳಲ್ಲಿ 207 (ಕಾಮಿಲ್‌ ಮಿಶಾರ 39, ರವಿಂದು ರಸಂತ್‌ 49, ನಿಪುಣ್‌ ಧನಂಜಯ್ 50; ಆಕಾಶ್‌ ಸಿಂಗ್‌ 29ಕ್ಕೆ2, ಸಿದ್ದೇಶ್‌ ವೀರ್‌ 34ಕ್ಕೆ2, ರವಿ ಬಿಷ್ಣೋಯಿ 44ಕ್ಕೆ2).

ಭಾರತದ ಮುಂದಿನ ಪಂದ್ಯ: ಜನವರಿ 21ರಂದು, ಜಪಾನ್ ವಿರುದ್ಧ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು