ಇಂದೋರ್: ಆರಂಭ ಆಟಗಾರ್ತಿ ತಾಝ್ಮಿನ್ ಬ್ರಿಟ್ಸ್ ಅವರು ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕನೇ ಶತಕ ಸಿಡಿಸಿದರು. ಅವರ ಶತಕದ ಜೊತೆಗೆ ನೊನ್ಕುಲುಲೆಕೊ ಮ್ಲಾಬಾ ಅವರ ನಾಲ್ಕು ವಿಕೆಟ್ಗಳ ಗೊಂಚಲಿನಿಂದ ದಕ್ಷಿಣ ಆಫ್ರಿಕಾ ತಂಡ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸೋಮವಾರ ನ್ಯೂಜಿಲೆಂಡ್ ತಂಡದ ಮೇಲೆ ಆರು ವಿಕೆಟ್ಗಳ ಸುಲಭ ಗೆಲುವು ದಾಖಲಿಸಿತು.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 69 ರನ್ನಿಗೆ ಉರುಳಿದ್ದ ಹರಿಣಗಳ ಪಡೆ, ಎರಡನೇ ಪಂದ್ಯದಲ್ಲಿ ಟಿ20 ವಿಶ್ವ ಚಾಂಪಿಯನ್ ತಂಡವಾದ ನ್ಯೂಜಿಲೆಂಡ್ ವಿರುದ್ಧ ಸರ್ವಾಂಗೀಣ ಆಟದ ಪ್ರದರ್ಶನ ನೀಡಿತು. ಬೌಲರ್ಗಳ ಮತ್ತು ಕ್ಷೇತ್ರರಕ್ಷಕರ ಶ್ರಮ ವ್ಯರ್ಥವಾಗದಂತೆ ಅಗ್ರ ಕ್ರಮಾಂಕದ ಬ್ಯಾಟರ್ಗಳು ಉತ್ತಮವಾಗಿ ಆಡಿದರು.

ಟಾಸ್ ಗೆದ್ದು ಬ್ಯಾಟ್ ಮಾಡಲು ನಿರ್ಧರಿಸಿದ ನ್ಯೂಜಿಲೆಂಡ್ ತಂಡ, ಎಡಗೈ ಸ್ಪಿನ್ನರ್ ಮ್ಲಾಬಾ (40ಕ್ಕೆ4) ಅವರ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನಕ್ಕೆ ಸಿಲುಕಿ 47.5 ಓವರುಗಳಲ್ಲಿ 231 ರನ್ಗಳಿಗೆ ಉರುಳಿತು. ಒಂದು ರನ್ಔಟ್ಗೂ ಕಾರಣರಾದ ಅವರು ನಾಯಕಿ ಸೋಫಿ ಡಿವೈನ್ (85, 98ಎ, 4x9) ಮತ್ತು ಅಪಾಯಕಾರಿಯಾಗಿ ಕಾಣುತ್ತಿದ್ದ ಬ್ರೂಕ್ ಹ್ಯಾಲಿಡೆ (45, 37ಎ, 4x6) ಅವರ ವಿಕೆಟ್ಗಳನ್ನು ಕಬಳಿಸಿ ನ್ಯೂಜಿಲೆಂಡ್ ಮಧ್ಯಮ ಸರದಿಯ ಕುಸಿತಕ್ಕೆ ಕಾರಣರಾದರು. ಹೀಗಾಗಿ 250 ರನ್ ದಾಟುವ ಕಿವೀಸ್ ಪಡೆಯ ಗುರಿ ಈಡೇರಲಿಲ್ಲ. ಮ್ಲಾಬಾ ಎರಡನೇ ಸ್ಪೆಲ್ನಲ್ಲಿ 5 ಓವರುಗಳಲ್ಲಿ 18 ರನ್ನಿತ್ತು 4 ವಿಕೆಟ್ ಪಡೆದಿದ್ದು ನಿರ್ಣಾಯಕವಾಯಿತು.

ಇದರ ನಂತರ ಬ್ರಿಟ್ಸ್ ಅಧಿಕಾರಯುತವಾಗಿ ಬ್ಯಾಟಿಂಗ್ ಮಾಡಿ 89 ಎಸೆತಗಳಲ್ಲಿ 101 ರನ್ ಹೊಡೆದರು. ಇದರಲ್ಲಿ ಒಂದು ಸಿಕ್ಸರ್, 15 ಬೌಂಡರಿಗಳಿದ್ದವು. ಇದು ಏಕದಿನ ಪಂದ್ಯಗಳಲ್ಲಿ ಅವರ ಏಳನೇ ಶತಕ ಹಾಗೂ ವಿಶ್ವಕಪ್ನಲ್ಲಿ ಮೊದಲನೆಯದ್ದು. ಅನುಭವಿ ಸುನೆ ಲೂಸ್ ಇನಿಂಗ್ಸ್ಗೆ ಲಂಗರು ಹಾಕಿ 114 ಎಸೆತಗಳಲ್ಲಿ 81 ರನ್ ಗಳಿಸಿ ಅಜೇಯರಾಗುಳಿದರು. ಬ್ರಿಟ್ಸ್ ಮತ್ತು ಸುನೆ ಲೂಸ್ ನಡುವಣ ಎರಡನೇ ವಿಕೆಟ್ ಜೊತೆಯಾಟದಲ್ಲಿ 159 ರನ್ಗಳು ಹರಿದುಬಂದು ಹರಿಣಗಳ ಗೆಲುವನ್ನು ಸುಲಭಗೊಳಿಸಿತು. ತಂಡ 55 ಎಸೆತಗಳು ಬಾಕಿವುಳಿದಿರುವಂತೆ ಗುರಿಮುಟ್ಟಿತು.

ಈ ಗೆಲುವು ದಕ್ಷಿಣ ಆಫ್ರಿಕಾ ತಂಡಕ್ಕೆ ಇದೇ 9ರಂದು ವಿಶಾಖಪಟ್ಟಣದಲ್ಲಿ ಆತಿಥೇಯ ಭಾರತ ಎದುರಿನ ಪಂದ್ಯಕ್ಕೆ ಆತ್ಮವಿಶ್ವಾಸದಿಂದ ಸಜ್ಜಾಗಲು ನೆರವಾಯಿತು. –3.773 ನೆಟ್ ರನ್ರೇಟ್ ಮೂಲಕ ತಳದಲ್ಲಿದ್ದ ದಕ್ಷಿಣ ಆಫ್ರಿಕಾ ಈ ಗೆಲುವಿನ ಮೂಲಕ –1.424 ನೆಟ್ ರನ್ ರೇಟ್ ದಾಖಲಿಸಿ ಐದನೇ ಸ್ಥಾನಕ್ಕೆ ಜಿಗಿಯಿತು. ಇನ್ನೊಂದೆಡೆ ನ್ಯೂಜಿಲೆಂಡ್ ಎರಡನೇ ಸೋಲಿನೊಡನೆ ಎಂಟು ತಂಡಗಳ ಟೂರ್ನಿಯಲ್ಲಿ ತಳಕ್ಕೆ ಸರಿಯಿತು.

300ನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ನಾಯಕಿ ಸೋಫಿ ಡಿವೈನ್ ಇದಕ್ಕೆ ಮೊದಲು ಒತ್ತಡದ ನಡುವೆಯೂ ಕೌಶಲಯುತವಾಗಿ ಆಡಿ 98 ಎಸೆತಗಳಲ್ಲಿ 85 ರನ್ ಬಾರಿಸಿದ್ದರು. ಇದು ಅವರಿಗೆ ಏಕದಿನ ಪಂದ್ಯಗಳಲ್ಲಿ 17ನೇ ಅರ್ಧ ಶತಕ. ಅವರು 9 ಬೌಂಡರಿಗಳನ್ನು ಬಾರಿಸಿದರು. ಅವರು ಬ್ರೂಕ್ ಹ್ಯಾಲಿಡೆ ಜೊತೆ ನಾಲ್ಕನೇ ವಿಕೆಟ್ಗೆ 86 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 47.5 ಓವರುಗಳಲ್ಲಿ 231 (ಜಾರ್ಜಿಯಾ ಪ್ಲಿಮ್ಮರ್ 31, ಅಮೇಲಿಯಾ ಕೆರ್ 23, ಸೋಫಿ ಡಿವೈನ್ 85, ಬ್ರೂಕ್ ಹ್ಯಾಲಿಡೆ 45; ನೊನ್ಕುಲುಲೆಕೊ ಮ್ಲಾಬಾ 40ಕ್ಕೆ4); ದಕ್ಷಿಣ ಆಫ್ರಿಕಾ: 40.5 ಓವರುಗಳಲ್ಲಿ 4ಕ್ಕೆ 234 (ತಾಝ್ಮಿನ್ ಬ್ರಿಟ್ಸ್ 101, ಸುನೆ ಲೂಸ್ ಔಟಾಗದೇ 83; ಅಮೇಲಿಯಾ ಕೆರ್ 62ಕ್ಕೆ2); ಪಂದ್ಯದ ಆಟಗಾರ್ತಿ: ತಾಝ್ಮಿನ್ ಬ್ರಿಟ್ಸ್:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.