ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಎದುರಿಸಿ ಮೊದಲ ಇನಿಂಗ್ಸ್ನಲ್ಲಿ 212 ರನ್ ಕಲೆಹಾಕಿದೆ.

ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ, ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸಿಸ್ಗೆ, ವೇಗಿ ಕಗಿಸೊ ರಬಾಡ ಆರಂಭದಲ್ಲೇ ಪೆಟ್ಟು ನೀಡಿದರು.

ಇದರ ನಡುವೆ ಸ್ಟೀವ್ ಸ್ಮಿತ್ (66) ಹಾಗೂ ಬ್ಯೂ ವೆಬ್ಸ್ಟರ್ (73) ಉಪಯುಕ್ತ ರನ್ಗಳ ನೆರವಿನಿಂದ ಆಸ್ಟ್ರೇಲಿಯಾ ಸಾಧಾರಣ ಮೊತ್ತ ಕೆಲಹಾಕಿತು. ಅಲೆಕ್ಸ್ ಕ್ಯಾರಿ (23), ಮಾರ್ನಸ್ ಲಾಬುಶೇನ್ (17), ಟ್ರಾವಿಸ್ ಹೆಡ್ (11) ರನ್ಗಳಿಸಿದರು. ಮೂವರು ಸೊನ್ನೆ ಸುತ್ತಿದರೆ, ನಾಯಕ ಪ್ಯಾಟ್ ಕಮಿನ್ಸ್ ಸೇರಿ ಇಬ್ಬರು ಬ್ಯಾಟರ್ಗಳು ತಲಾ 1 ರನ್ಗಳಿಸಿ ಪೆವಿಲಿಯನ್ ಸೇರಿದರು. ಕ್ಯಾಮರೂನ್ ಗ್ರೀನ್ 4 ರನ್ ಗಳಿಸಿದರು.

ಮಾರ್ನಸ್ ಲಾಬುಶೇನ್ ಜೊತೆ ಇನಿಂಗ್ಸ್ ಆರಂಭಿಸಿದ ಅನುಭವಿ ಉಸ್ಮಾನ್ ಖ್ವಾಜಾ ಸೊನ್ನೆ ಸುತ್ತಿದರು. ಔಟಾಗುವ ಮುನ್ನ 20 ಎಸೆತಗಳನ್ನು ಎದುರಿಸಿದ ಅವರು, ರಬಾಡ ಹಾಕಿದ ಇನಿಂಗ್ಸ್ನ 7ನೇ ಓವರ್ನಲ್ಲಿ ಡೇವಿಡ್ ಬೆಡಿಂಗಮ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ನಂತರ ಕ್ರೀಸ್ಗಿಳಿದ ಕ್ಯಾಮರೂನ್ ಗ್ರೀನ್ (4 ರನ್) ಕೂಡ ಅದೇ ಓವರ್ನಲ್ಲಿ ಔಟಾದರು.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಇತ್ತ, ಬವುಮಾ ಪಡೆ ಮೊದಲ ಬಾರಿಗೆ ಡಬ್ಲ್ಯುಟಿಸಿ ಚಾಂಪಿಯನ್ ಪಟ್ಟಕ್ಕೇರುವ ನಿರೀಕ್ಷೆಯಲ್ಲಿದೆ.

ಏಕದಿನ ಮಾದರಿಯ ವಿಶ್ವಕಪ್ ಇರಲಿ ಅಥವಾ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಇರಲಿ, ದೊಡ್ಡ ವೇದಿಕೆಗಳಲ್ಲಿ ಹಿಂದಿನಿಂದಲೂ ಪ್ರಾಬಲ್ಯ ಸಾಧಿಸಿರುವುದು ಆಸ್ಟ್ರೇಲಿಯಾ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ. ನಿರ್ಣಾಯಕ ಪಂದ್ಯಗಳಲ್ಲಿ ಪದೇ ಪದೇ ಎಡವಿರುವ ದಕ್ಷಿಣ ಆಫ್ರಿಕಾಗೆ 'ಚೋಕರ್ಸ್' ಹಣೆಪಟ್ಟಿ ಕಳಚಿಕೊಳ್ಳುವ ಸವಾಲು ಇದೆ.

ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ 20 ರನ್ಗಳಿಗೆ ಆರಂಭಿಕ 2 ವಿಕೆಟ್ಗಳನ್ನು ಕಳೆದುಕೊಂಡಿದೆ. ಏಡನ್ ಮರ್ಕರಂ ಸೊನ್ನೆಗೆ ಔಟಾದರೆ, ಮತ್ತೊಬ್ಬ ಆರಂಭಿಕ ರಿಯಾನ್ ರಿಕೆಲ್ಟನ್ (16) ಗಳಿಸಿ ಪೆವಲಿಯನ್ ಹಾದಿ ತುಳಿದರು. ವಿಯಾನ್ ಮುಲ್ಡರ್ ಹಾಗೂ ತೆಂಬಾ ಬವುಮಾ ಸದ್ಯ ಕ್ರೀಸ್ನಲ್ಲಿದ್ದಾರೆ.

ಹನ್ನೊಂದರ ಬಳಗ ಹೀಗಿದೆ

ಆಸ್ಟ್ರೇಲಿಯಾ: ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಕ್ಯಾಮರೂನ್ ಗ್ರೀನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್ಸ್ಟರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೋಶ್ ಹ್ಯಾಜಲ್ವುಡ್.

ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ, ರಿಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ತೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗಮ್, ಕೈಲ್ ವೆರಿಯನ್, ವಿಯಾನ್ ಮುಲ್ಡರ್, ಮಾರ್ಕೊ ಯಾನ್ಸನ್, ಕೇಶವ ಮಹಾರಾಜ್, ಕಗಿಸೊ ರಬಾಡ, ಲುಂಗಿ ಗಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.