ಕರಾಚಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣವನ್ನು ನವೀಕರಣಗೊಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹರಸಾಹಸ ನಡೆಸುತ್ತಿದೆ. ಹೀಗಾಗಿ, ಇಲ್ಲಿ ನಿಗದಿಯಾಗಿದ್ದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಪಿಸಿಬಿ ಮುಂದಾಗಿದೆ.

ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಪಂದ್ಯವು ಫೆಬ್ರುವರಿ 19ರಂದು ಇದೇ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ.

'ನವೀಕರಣ ಹಾಗೂ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿದೆ. ಕೆಲಸವು ಇನ್ನಷ್ಟು ವಿಳಂಬವಾಗಲಿದ್ದು, ಆಟಗಾರರಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ (ಎನ್ಎಸ್ಕೆ) ಯಾವುದೇ ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ' ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಥಮ ದರ್ಜೆ ಟೂರ್ನಿ 'ಕ್ವಯೆದ್–ಎ–ಅಜಂ ಟ್ರೋಫಿ' ಫೈನಲ್ ಪಂದ್ಯವು ಇದೇ ಕ್ರೀಡಾಂಗಣದಲ್ಲಿ ನಿಗದಿಯಾಗಿತ್ತು. ಅದನ್ನು, ಯುಬಿಎಲ್ ಕಾಂಪ್ಲೆಕ್ಸ್ ಆವರಣಕ್ಕೆ ಸ್ಥಳಾಂತರಿಸಲಾಗಿದ್ದು, ಇಂದಿನಿಂದ (ಜನವರಿ 2ರಿಂದ) ಆರಂಭವಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧ ಇದೇ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯು ಮುಲ್ತಾನ್ನಲ್ಲಿ ನಡೆಯಲಿದೆ ಎಂದು ಪಿಸಿಬಿ ಪ್ರಕಟಿಸಿದೆ. ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯವು ಜನವರಿ 16ರಿಂದ 20ರ ವರೆಗೆ ಕರಾಚಿಯಲ್ಲಿ ಹಾಗೂ ಅಂತಿಮ ಟೆಸ್ಟ್ ಜನವರಿ 24ರಿಂದ 28ರ ವರೆಗೆ ಮುಲ್ತಾನ್ನಲ್ಲಿ ನಿಗದಿಯಾಗಿತ್ತು.
.ಹೈಬ್ರಿಡ್ ಮಾದರಿಗೆ ಒಪ್ಪದ PCB, ಪಾಕ್ಗೆ ಹೋಗಲ್ಲ ಎಂದ ಭಾರತ; ICC ಸಭೆ ಮುಂದಕ್ಕೆ.ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ: ಹೈಬ್ರಿಡ್ ಮಾದರಿ ಅಂತಿಮ.
ಕರಾಚಿಯಲ್ಲಿ ನಿಗದಿಯಾಗದ್ದ ಕೆಲಸಗಳು ಡಿಸೆಂಬರ್ 15ರ ಗಡುವಿನೊಳಗೆ ಮುಕ್ತಾಯವಾಗಿವೆ. ನಿರ್ಮಾಣ ಕಂಪೆನಿಗೆ ಹೊಸ ಸೂಚನೆಗಳನ್ನು ನೀಡಲಾಗಿದ್ದು, ಕೆಲಸದ ವೇಳಾಪಟ್ಟಿ ಮುಂದೂಡಿಕೆಯಾಗಿದೆ ಎನ್ನಲಾಗಿದೆ.

ಲಾಹೋರ್, ರಾವಲ್ಪಿಂಡಿ ಸೇರಿದಂತೆ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆಯಲಿರುವ ಮೂರು ಕ್ರೀಡಾಂಗಣಗಳಲ್ಲಿ 1,200 ಕೋಟಿ ಪಾಕಿಸ್ತಾನ ರೂಪಾಯಿ ವೆಚ್ಚದ ನವೀಕರಣ ಮತ್ತು ನಿರ್ಮಾಣ ಕಾರ್ಯವನ್ನು ಪಿಸಿಬಿ ನಡೆಸುತ್ತಿದೆ.

ಎನ್ಎಸ್ಕೆಯಲ್ಲಿ ಮುಖ್ಯ ಕಟ್ಟಡ, ಹೊಸ ಡ್ರೆಸ್ಸಿಂಗ್ ಕೊಠಡಿಗಳು, ಮಾಧ್ಯಮ ಕೇಂದ್ರಗಳು, ಆತಿಥ್ಯ ಕೇಂದ್ರಗಳು ಹಾಗೂ ಮಂಡಳಿಗಳಿಗೆ ಪ್ರತ್ಯೇಕ ಕಚೇರಿಗಳ ನವೀಕರಣ/ನಿರ್ಮಾಣ ನಡೆಯುತ್ತಿದೆ.

ಕ್ರೀಡಾಂಗಣದಲ್ಲಿ ಹೊಸ ಆಸನಗಳ ಜೊತೆಗೆ, ವಿದ್ಯುನ್ಮಾನ ಸ್ಕೋರ್ಬೋರ್ಡ್ಗಳನ್ನು ಅಳವಡಿಸಲಾಗುತ್ತಿದೆ. ಮೈದಾನದ ಸುತ್ತಲಿನ ಬೇಲಿಯನ್ನೂ ಬದಲಿಸಲಾಗುತ್ತಿದೆ.
.ಆಸಿಸ್ ಎದುರಿನ ಅಂತಿಮ ಟೆಸ್ಟ್ನಲ್ಲಿ ಆಡುವರೇ ರೋಹಿತ್?: ಖಚಿತಪಡಿಸದ ಟೀಂ ಇಂಡಿಯಾ.IND vs AUS Test | ಭಾರತ ತಂಡ ನಿರ್ವಹಣೆಯಲ್ಲಿ ಗಂಭೀರ್ ವೈಫಲ್ಯ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.