ಮೆಲ್ಬರ್ನ್: ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ 200 ವಿಕೆಟ್ಗಳ ಸಾಧನೆ ಮಾಡಿದ್ದಾರೆ.

ಮೆಲ್ಬರ್ನ್ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಬೂಮ್ರಾ ಸ್ಮರಣೀಯ ಸಾಧನೆ ಮಾಡಿದರು.

ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದ ಬೂಮ್ರಾ, ಟೆಸ್ಟ್ ಕ್ರಿಕೆಟ್ನಲ್ಲಿ 200ನೇ ವಿಕಟ್ ಗಳಿಸಿದರು. 44ನೇ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಗಳಿಸಿದ ವಿಶ್ವದ ನಾಲ್ಕನೇ ಬೌಲರ್ ಎಂಬ ಗೌರವಕ್ಕೆ ಬೂಮ್ರಾ ಭಾಜನರಾಗಿದ್ದಾರೆ.

ವೇಗದಲ್ಲಿ 200 ವಿಕೆಟ್ ಸಾಧನೆ (ಎಸೆತ)

ವಕಾರ್ ಯೂನಿಸ್: 7,725

ಡೇಲ್ ಸ್ಟೇನ್: 7,948

ಕಗಿಸೊ ರಬಾಡ: 8,153

ಜಸ್ಪ್ರೀತ್ ಬೂಮ್ರಾ: 8,484

ಒಟ್ಟಾರೆಯಾಗಿ ಜಸ್ಪ್ರೀತ್ ಬೂಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಗಳಿಸಿದ ಭಾರತದ 12ನೇ ಬೌಲರ್ ಎನಿಸಿದ್ದಾರೆ.

200 ವಿಕೆಟ್ ಗಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಬೂಮ್ರಾ ಅತ್ಯುತ್ತಮ ಬೌಲಿಂಗ್ ಸರಾಸರಿಯನ್ನು (19.56) ಕಾಪಾಡಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವೆಸ್ಟ್ಇಂಡೀಸ್ನ ಮಾರ್ಷಲ್ (20.94) ದಾಖಲೆಯನ್ನು ಮೀರಿಸಿದ್ದಾರೆ.
.PHOTOS | ಬೂಂ..ಬೂಂ..ಬೂಮ್ರಾ, ಮೆಲ್ಬರ್ನ್ ಮೈದಾನದಲ್ಲಿ ಸ್ಮರಣೀಯ ಸಾಧನೆ.IND vs AUS: ಕೊನ್ಸ್ಟಸ್ ಸ್ಟಂಪ್ ಹಾರಿಸಿ ಅದೇ ಧಾಟಿಯಲ್ಲಿ ಉತ್ತರ ನೀಡಿದ ಬೂಮ್ರಾ.ಸ್ಕೂಪ್ ಸಿಕ್ಸರ್: 4,483 ಎಸೆತಗಳ ಬಳಿಕ ಸಿಕ್ಸರ್ ಬಿಟ್ಟುಕೊಟ್ಟ ಬೂಮ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.