ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಭಾರತ ತಂಡ 3–1 ಅಂತರದಿಂದ ಸೋತಿದೆ. ಆ ಮೂಲಕ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ. ಆದರೆ, ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾದ ನಾಯಕನಾಗಿದ್ದ ವೇಗಿ ಜಸ್ಪ್ರೀತ್ ಬೂಮ್ರಾ, ಸ್ಮರಣೀಯ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಬೂಮ್ರಾ, ಟೂರ್ನಿಯಲ್ಲಿ ಆಡಿದ 5 ಪಂದ್ಯಗಳ 9 ಇನಿಂಗ್ಸ್ಗಳಲ್ಲಿ 151.2 ಓವರ್ ಬೌಲಿಂಗ್ ಮಾಡಿದ್ದಾರೆ. 2.76ರ ದರದಲ್ಲಿ 908 ರನ್ ನೀಡಿದ್ದು, 13.06ರ ಸರಾಸರಿಯಲ್ಲಿ ಬರೋಬ್ಬರಿ 32 ವಿಕೆಟ್ ಕಬಳಿಸಿದ್ದಾರೆ. ಎರಡು ಸಲ ನಾಲ್ಕು ವಿಕೆಟ್ ಹಾಗೂ ಮೂರು ಸಲ ಐದು ವಿಕೆಟ್ ಗೊಂಚಲು ಸಾಧನೆ ಮಾಡಿರುವ ಅವರು, ಬಾರ್ಡರ್–ಗವಾಸ್ಕರ್ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಬೌಲರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, ವಿದೇಶಿ ಪಿಚ್ಗಳಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಪರ ಅತಿಹೆಚ್ಚು ವಿಕೆಟ್ ಪಡೆದ ಶ್ರೇಯಕ್ಕೂ ಭಾಜನರಾಗಿದ್ದಾರೆ. 47 ವರ್ಷಗಳ ಹಿಂದೆ (1977–78ರಲ್ಲಿ) ಬಿಷನ್ ಸಿಂಗ್ ಬೇಡಿ ಅವರು ಆಸ್ಟ್ರೇಲಿಯಾ ಎದುರು 31 ವಿಕೆಟ್ ಗಳಿಸಿದ್ದು, ಈವರೆಗೆ ದಾಖಲೆಯಾಗಿತ್ತು.

ಬೂಮ್ರಾ ಅವರು, ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 20ಕ್ಕಿಂತ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ, ನ್ಯೂಜಿಲೆಂಡ್ನ ರಿಚರ್ಡ್ ಹಡ್ಲೀ ಬಳಿಕ ಅತ್ಯುತ್ತಮ ಸರಾಸರಿ ಕಾಪಾಡಿಕೊಂಡಿದ್ದಾರೆ. ಹಡ್ಲೀ ಅವರು 1985ರಲ್ಲಿ 12.15 ಸರಾಸರಿಯಲ್ಲಿ ವಿಕೆಟ್ ಪಡೆದಿದ್ದರು.
.Border–Gavaskar Trophy: ಒಂದೇ ಆವೃತ್ತಿಯಲ್ಲಿ ಹೆಚ್ಚು ವಿಕೆಟ್; ಬೂಮ್ರಾ ದಾಖಲೆ.WTC 2025: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶಿಸಲು ಭಾರತ ವಿಫಲ.
ಈ ಎಲ್ಲ ಸಾಧನೆಗಳೊಂದಿಗೆ ಬೂಮ್ರಾ, ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಬೂಮ್ರಾ, ಬಾರ್ಡರ್–ಗವಾಸ್ಕರ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಎರಡನೇ ವೇಗಿಯೂ ಹೌದು. ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ 2007–08ರಲ್ಲಿ ಈ ಪ್ರಶಸ್ತಿ ಪಡೆದಿದ್ದರು.

ಇದರೊಂದಿಗೆ ಅವರು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಈವರೆಗೆ ಯಾವ ಭಾರತೀಯ ಆಟಗಾರನಿಗೂ, SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್) ರಾಷ್ಟ್ರಗಳ ಪೈಕಿ, ಯಾವುದೇ ಮೂರರಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ದಕ್ಕಿಲ್ಲ.

ಇಂಗ್ಲೆಂಡ್ನಲ್ಲಿ 2022–23ರಲ್ಲಿ 5 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದ ಬೂಮ್ರಾ, ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಎರಡು ಪಂದ್ಯಗಳಲ್ಲಿ 12 ವಿಕೆಟ್ ಉರುಳಿಸಿ ಈ ಪ್ರಶಸ್ತಿ ದಕ್ಕಿಸಿಕೊಂಡಿದ್ದರು.
.Sydney Test: ಗಾಯಗೊಂಡು ಕ್ರೀಡಾಂಗಣ ತೊರೆದ ಬೂಮ್ರಾ; ತಂಡದ ಹೊಣೆ ಕೊಹ್ಲಿ ಹೆಗಲಿಗೆ.ಸಿಡ್ನಿ ಟೆಸ್ಟ್ನಲ್ಲಿ ಭಾರತಕ್ಕೆ ಸೋಲು: ಕೈತಪ್ಪಿದ ಬಾರ್ಡರ್–ಗವಾಸ್ಕರ್ ಟ್ರೋಫಿ.

ಗಾಯಗೊಂಡ ಬೂಮ್ರಾ

ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ಬೂಮ್ರಾ, ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವಾಗಲೇ ಗಾಯಗೊಂಡಿದ್ದರು. ಅವರು ಎರಡನೇ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಲಿಲ್ಲ. ಅವರ ಬದಲು, ವಿರಾಟ್ ಕೊಹ್ಲಿ, ಉಳಿದ ಅವಧಿಗೆ ತಂಡ ಮುನ್ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.