ಚಿತ್ತೋಗ್ರಾಮ: ಭಾರತ ಮತ್ತು ಬಾಂಗ್ಲಾದೇಶ ನಡುವಣ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ದಿನದಾಟವು ಬಿಸಿ ಬಿಸಿ ವಾತಾವರಣಕ್ಕೆ ಸಾಕ್ಷಿಯಾಯಿತು.

ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ಎದುರಾಳಿ ತಂಡದ ಬ್ಯಾಟರ್ ಲಿಟನ್ ದಾಸ್ ನಡುವೆ ಚಕಮಕಿ ನಡೆಯಿತು.

ಬಳಿಕ ಲಿಟನ್ ದಾಸ್ ವಿಕೆಟ್ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾದರು. ಈ ಸಂದರ್ಭದಲ್ಲಿ ಸಿರಾಜ್‌ರನ್ನು ಕೆಣಕಲು ಬಂದ ಲಿಟನ್‌ಗೆ ವಿರಾಟ್ ಕೊಹ್ಲಿ ಸಹ ತಕ್ಕ ಉತ್ತರ ನೀಡಿದರು.

ಏನಿದು ಘಟನೆ?
ಬಾಂಗ್ಲಾದೇಶ ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಲಿಟನ್ ದಾಸ್‌ಗೆ ಬೌಲಿಂಗ್ ಮಾಡುತ್ತಿದ್ದ ಸಿರಾಜ್,ಸ್ಲೆಡ್ಜ್ ಮಾಡಲು ಪ್ರಯತ್ನಿಸಿದರು.

ಈ ವೇಳೆ ಕಿವಿಗೆ ಕೈಯಿಟ್ಟು ಸನ್ನೆ ಮಾಡಿದ ಲಿಟನ್, ನಿನ್ನ ಮಾತು ಕೇಳಿಸುತ್ತಿಲ್ಲ ಎಂಬ ರೀತಿಯಲ್ಲಿ ಉತ್ತರಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಅಂಪೈರ್ ವಾತಾವರಣವನ್ನು ಶಾಂತಗೊಳಿಸಿದರು.

ಆದರೆ ನಂತರದ ಎಸೆತದಲ್ಲಿ ಲಿಟನ್ ದಾಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಸಿರಾಜ್ ಸಂಭ್ರಮಿಸಿದರು. ಅಲ್ಲದೆ ಬಾಯಿ ಮುಚ್ಚಿ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು.

ಈ ವೇಳೆ ಸಿರಾಜ್ ಜೊತೆ ಸೇರಿದ ಕೊಹ್ಲಿ, ಲಿಟನ್ ಮಾಡಿದಂತೆಯೇ ಸನ್ನೆ ಮಾಡಿ ಹೀಯಾಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.