ಅಹಮದಾಬಾದ್: ಅಕ್ಷರ್ ಪಟೇಲ್ (32ಕ್ಕೆ 5 ವಿಕೆಟ್) ಹಾಗೂ ರವಿಚಂದ್ರನ್ ಅಶ್ವಿನ್ ಸ್ಪಿನ್ (48ಕ್ಕೆ 4 ವಿಕೆಟ್) ದಾಳಿಗೆ ತತ್ತರಿಸಿರುವ ಪ್ರವಾಸಿ ಇಂಗ್ಲೆಂಡ್ ತಂಡವು ದ್ವಿತೀಯ ಇನ್ನಿಂಗ್ಸ್ನಲ್ಲಿ ಕೇವಲ 81 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದೆ.

ಇದರೊಂದಿಗೆ ಅಹಮದಾಬಾದ್ನ ಮೊಟೆರಾದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಕೇವಲ 49 ರನ್ಗಳ ಅವಶ್ಯಕತೆಯಿದೆ.

ಇದನ್ನೂ ಓದಿ:IND vs ENG: ಅಶ್ವಿನ್ 400 ವಿಕೆಟ್ ಕ್ಲಬ್ಗೆ ಸೇರ್ಪಡೆ; ಭಾರತದ 4ನೇ ಬೌಲರ್

ದ್ವಿತೀಯ ದಿನದಾಟದ ಪ್ರಾರಂಭದಲ್ಲೇ ಜೋ ರೂಟ್ (8ರನ್ನಿಗೆ 5 ವಿಕೆಟ್) ದಾಳಿಗೆ ಕುಸಿದ ಭಾರತ ಕೇವಲ 145 ರನ್ನಿಗೆ ಸರ್ವಪತನಗೊಂಡಾಗ ಆಂತಕ ಮಡುಗಟ್ಟಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್ನಲ್ಲೂ ಅಕ್ಷರ್ ಹಾಗೂ ಅಶ್ವಿನ್ ಮಾರಕ ದಾಳಿ ಸಂಘಟಿಸುವ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಿದರು.

ದ್ವಿತೀಯ ಇನ್ನಿಂಗ್ಸ್ನಲ್ಲಿ ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಬಳಿಸಿದ ಅಕ್ಷರ್ ಪಟೇಲ್ ಪ್ರವಾಸಿಗರಿಗೆ ಆಘಾತ ನೀಡಿದರು. ಇಲ್ಲಿಂದ ಬಳಿಕ ಆಂಗ್ಲರು ಚೇತರಿಸಿಕೊಳ್ಳಲೇ ಇಲ್ಲ.

ಇದನ್ನೂ ಓದಿ:IND vs ENG: 8 ರನ್ನಿಗೆ 5 ವಿಕೆಟ್ ಪಡೆದ ರೂಟ್; ಭಾರತ 145ಕ್ಕೆ ಆಲೌಟ್

ಮೂವರು ಬ್ಯಾಟ್ಸ್ಮನ್ಗಳು ಎರಡಂಕಿಯನ್ನು ತಲುಪಿರುವುದನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟ್ಸ್ಮನ್ಗಳು ಹೋರಾಟದ ಮನೋಭಾವ ತೋರಲಿಲ್ಲ. ಜ್ಯಾಕ್ ಕ್ರಾಲಿ (0), ಡಾಮಿನಿಕ್ ಸಿಬ್ಲಿ (7), ಜಾನಿ ಬೈರ್ಸ್ಟೋ (0), ನಾಯಕ ಜೋ ರೂಟ್ (19), ಬೆನ್ ಸ್ಟೋಕ್ಸ್ (25), ಒಲ್ಲಿ ಪಾಪ್ (12), ವಿಕೆಟ್ ಕೀಪರ್ ಬೆನ್ ಫೋಕ್ಸ್ (8), ಜೋಫ್ರಾ ಆರ್ಚರ್ (0), ಜ್ಯಾಕ್ ಲೀಚ್ (9), ಸ್ಟುವರ್ಟ್ ಬ್ರಾಡ್ (1*) ಹಾಗೂ ಜೇಮ್ಸ್ ಆಂಡ್ರೆಸನ್ (0) ನಿರಾಸೆ ಮೂಡಿಸಿದರು.

ಪರಿಣಾಮ 30.4 ಓವರ್ಗಳಲ್ಲೇ 81 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಭಾರತದ ಪರ ಕೈಚಳಕ ತೋರಿದ ಸ್ಥಳೀಯ ಹೀರೊ ಅಕ್ಷರ್ ಪಟೇಲ್ 32 ರನ್ ತೆತ್ತು ಐದು ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಎರಡೂ ಇನ್ನಿಂಗ್ಸ್ಗಳಲ್ಲೂ ಐದು ವಿಕೆಟ್ ಜೊತೆಗೆ ಪಂದ್ಯದಲ್ಲಿ ಒಟ್ಟು 11 ವಿಕೆಟ್ ಸಾಧನೆ ಮಾಡಿದರು. ಅಕ್ಷರ್ ಪದಾರ್ಪಣಾ ಟೆಸ್ಟ್ ಪಂದ್ಯದಲ್ಲೂ ಐದು ವಿಕೆಟ್ ಪಡೆದಿದ್ದರು.

ಇದನ್ನೂ ಓದಿ:IND vs ENG: ಜೋ ರೂಟ್ 6.2-3-8-5: ಅವಿಸ್ಮರಣೀಯ ಸಾಧನೆ

ಇನ್ನೊಂದೆಡೆ ಅಕ್ಷರ್ಗೆ ತಕ್ಕ ಸಾಥ್ ನೀಡಿದ ಅಶ್ವಿನ್ 48 ರನ್ ತೆತ್ತು ನಾಲ್ಕು ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಕ್ಲಬ್ ಸೇರ್ಪಡೆಯಾದರು. ಮಗದೊಂದು ವಿಕೆಟ್ ವಾಷಿಂಗ್ಟನ್ ಸುಂದರ್ ಪಾಲಾಯಿತು.

8 ರನ್ನಿಗೆ 5 ವಿಕೆಟ್ ಪಡೆದ ರೂಟ್; ಭಾರತ 145ಕ್ಕೆ ಆಲೌಟ್...
ಈ ಮೊದಲು ರೂಟ್ ದಾಳಿಗೆ ತತ್ತರಿಸಿದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 145 ರನ್ಗಳಿಗೆ ಆಲೌಟಾಗಿತ್ತು. ಹಾಗಿದ್ದರೂ 33 ರನ್ಗಳ ಅಮೂಲ್ಯ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಅರೆಕಾಲಿಕ ಬೌಲರ್ ಆಗಿರುವ ಹೊರತಾಗಿಯೂ ಅದ್ಭುತ ದಾಳಿ ಸಂಘಟಿಸಿದ ರೂಟ್ ಕೇವಲ 8 ರನ್ ತೆತ್ತು ಐದು ವಿಕೆಟ್ ಪಡೆದು ಭಾರತ ನೆಲದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದರು.

ಮೂರು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತೀಯ ತಂಡದ ದಾಂಡಿಗರು ಎರಡನೇ ದಿನದಾಟದಲ್ಲಿ ಪೆವಿಲಿಯನ್ ಪೆರೇಡ್ ನಡೆಸಿದರು. ಉಪನಾಯಕ ಅಜಿಂಕ್ಯ ರಹಾನೆ (7) ನಿರಾಸೆ ಮೂಡಿಸಿದರು. ಅರ್ಧಶಕ ಗಳಿಸಿದ್ದ ರೋಹಿತ್ ಶರ್ಮಾ (66) ಸಂಪೂರ್ಣ ಪ್ರಯೋಜನ ಪಡೆಯುವಲ್ಲಿಸಫಲರಾಗಲಿಲ್ಲ. ಇವರಿಬ್ಬರು ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ದಾಳಿಯಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.

ವಿಕೆಟ್ ಕೀಪರ್ ರಿಷಭ್ ಪಂತ್ (1), ವಾಷಿಂಗ್ಟನ್ ಸುಂದರ್ (0) ಹಾಗೂ ಅಕ್ಷರ್ ಪಟೇಲ್ (0) ಅವರನ್ನು ಇಂಗ್ಲೆಂಡ್ ನಾಯಕ ಜೋ ರೂಟ್ ಹೊರದಬ್ಬಿದರು.

ರವಿಚಂದ್ರನ್ ಅಶ್ವಿನ್ (17) ಸ್ವಲ್ಪ ಹೊತ್ತು ಹೋರಾಟ ನೀಡಿದರೂ ಅವರು ಕೂಡಾ ರೂಟ್ ದಾಳಿಯಲ್ಲಿ ಔಟಾದರು. ಅಂತಿಮವಾಗಿ ಜಸ್ಪ್ರೀತ್ ಬೂಮ್ರಾರನ್ನು (1) ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸುವುದರೊಂದಿಗೆ ಜೋ ರೂಟ್ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು.

ಪರಿಣಾಮ ಭಾರತ 53.2 ಓವರ್ಗಳಲ್ಲೇ 145 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. 6.2 ಓವರ್ಗಳನ್ನು ಎಸೆದಿರುವ ರೂಟ್ ದಾಳಿಯಲ್ಲಿ ಮೂರು ಮೇಡನ್ ಓವರ್ಗಳು ಸೇರಿದ್ದವು.

ಅತ್ತ ಜ್ಯಾಕ್ ಲೀಚ್ 54 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಭಾರತವು ಕೊನೆಯ ಏಳು ವಿಕೆಟ್ಗಳನ್ನು ಕೇವಲ 31 ರನ್ ಅಂತರದಲ್ಲಿ ಕಳೆದುಕೊಂಡಿತ್ತು.

ಈ ಮೊದಲು ಮೊದಲ ದಿನದಾಟದಲ್ಲಿ ಸ್ಥಳೀಯ ಹೀರೊ ಅಕ್ಷರ್ ಪಟೇಲ್ (38ಕ್ಕೆ 6 ವಿಕೆಟ್) ದಾಳಿಗೆ ಕುಸಿದಿದ್ದ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ನಲ್ಲಿ 112 ರನ್ಗಳಿಗೆ ಆಲೌಟ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.