ಭಾನುವಾರ, ಸೆಪ್ಟೆಂಬರ್ 19, 2021
27 °C

IND vs ENG: ಕೊಹ್ಲಿ ಮಾಡಿದ ಎಡವಟ್ಟು, ಕೈಚೆಲ್ಲಿದ ಡಿಆರ್‌ಎಸ್!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಲಾರ್ಡ್ಸ್‌: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯವು ನಡೆಯುತ್ತಿದೆ. ಈ ನಡುವೆ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ ವೇಳೆ ಭಾರತ ತಂಡವು ಪದೇ ಪದೇ ಡಿಆರ್‌ಎಸ್ ಎಡವಟ್ಟು ಮಾಡಿರುವುದು ಹಲವಾರು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು.

ಒಂದೇ ಓವರ್‌ನಲ್ಲಿ ಸತತ ಎರಡು ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್, ಅದ್ಭುತ ದಾಳಿ ಸಂಘಟಿಸಿದರು. ಆದರೆ ಅದಾದ ಬಳಿಕ ಟೀಮ್ ಇಂಡಿಯಾ, ಎರಡು ಬಾರಿ ಡಿಆರ್‌ಎಸ್ ಅವಕಾಶವನ್ನು ಕೈಚೆಲ್ಲಿತು.

ಇದನ್ನೂ ಓದಿ: 

ಇಂಗ್ಲೆಂಡ್ ಇನ್ನಿಂಗ್ಸ್‌ನ ವೇಳೆ ಸಿರಾಜ್ ಎಸೆದ ದಾಳಿ ನೇರವಾಗಿ ಜೋ ರೂಟ್ ಕಾಲಿಗೆ ಬಡಿದಿತ್ತು. ಆದರೆ ಬಲವಾದ ಎಲ್‌ಬಿಡಬ್ಲ್ಯು ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ತಕ್ಷಣ ನಾಯಕ ವಿರಾಟ್ ಕೊಹ್ಲಿ, ಡಿಆರ್‌ಎಸ್ ಮನವಿಗೆ ಮೊರೆ ಹೋದರು. ಆದರೆ ತೀರ್ಪು ಭಾರತದ ವಿರುದ್ಧವಾಗಿತ್ತು.

23ನೇ ಓವರ್‌ನಲ್ಲಿ ಮಗದೊಮ್ಮೆ ಇದಕ್ಕೆ ಸಮಾನವಾದ ಸನ್ನಿವೇಶವು ಸೃಷ್ಟಿಯಾಗಿತ್ತು. ಆದರೆ ಈ ಸಲ ಸಿರಾಜ್‌ಗೆ ಏನು ಮಾಡಬೇಕೆಂದು ತೋಚಲಿಲ್ಲ. ನಾಯಕನನ್ನು ಹೇಗೆ ಮನವೊಲಿಸಲಿ ಎಂಬ ಕೊರಗಿನಲ್ಲಿ ಬೇಸರದಿಂದ ಹಣೆಯ ಮೇಲೆ ಕೈಯನ್ನಿಟ್ಟರು.

 

 

 

ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಸಹ ನಗು ಮುಖದಿಂದಲೇ, ವಿಕೆಟ್ ಕೀಪರ್ ರಿಷಭ್ ಪಂತ್ ಸಲಹೆಯನ್ನು ಕೋರಿದರು. ಇದರಿಂದ ರಿಷಭ್ ಪಂತ್ ಸಹ ವಿಚಲಿತರಾದರು. ಕೊನೆಗೂ ಒಲ್ಲದ ಮನಸ್ಸಿನಿಂದ ಕೊಹ್ಲಿ ರಿವ್ಯೂ ಮೊರೆ ಹೋಗಲು ನಿರ್ಧರಿಸಿದರು. ಅಷ್ಟರ ವೇಳೆಗೆ ಪಂತ್ ಡಿಆರ್‌ಎಸ್ ರಿವ್ಯೂ ತೆಗೆದುಕೊಳ್ಳದಂತೆ ಸನ್ನೆ ಮಾಡುತ್ತಿರುವುದು ದೃಶ್ಯದಲ್ಲಿ ಕಂಡುಬಂತು.

 

ಈ ಬಾರಿಯೂ ರಿವ್ಯೂ ಭಾರತದ ಪರವಾಗಿರಲಿಲ್ಲ. ಪರಿಣಾಮ ಸತತ ಎರಡನೇ ಬಾರಿ ರಿವ್ಯೂ ಅವಕಾಶ ನಷ್ಟವಾಯಿತು. ಈ ಸಂದರ್ಭದಲ್ಲಿ ನಾಯಕ ಕೊಹ್ಲಿ ರೇಗಿಸುತ್ತಿರುವುದು ಕಂಡುಬಂತು.

ಇದೇ ಘಟನೆಯನ್ನೇ ಟ್ವೀಟ್ ಮಾಡಿರುವ ವಾಸೀಮ್ ಜಾಫರ್, ಡಿಆರ್‌ಎಸ್ ಅಂದರೆ 'ಡಾಂಟ್ ರಿವ್ಯೂ ಸಿರಾಜ್' ಎಂದು ತಮಾಷೆ ಮಾಡಿದ್ದಾರೆ.

 

 

 

ಒಟ್ಟಿನಲ್ಲಿ ಡಿಆರ್‌ಎಸ್ ವಿಷಯದಲ್ಲಿ ಟೀಮ್ ಇಂಡಿಯಾವು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇವೆಯನ್ನು ಮಿಸ್ ಮಾಡಿಕೊಳ್ಳುತ್ತಿದೆ. ಧೋನಿ ಆಡುವ ಕಾಲಘಟ್ಟದಲ್ಲಿ ಡಿಆರ್‌ಎಸ್ ಅಂದರೆ 'ಧೋನಿ ರಿವ್ಯೂ ಸಿಸ್ಟಂ' ಎಂದೇ ಜನಪ್ರಿಯವಾಗಿತ್ತು.

 

 

 

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು