ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ 30ನೇ ಶತಕ; ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ರೋಹಿತ್

Last Updated 24 ಜನವರಿ 2023, 10:17 IST
ಅಕ್ಷರ ಗಾತ್ರ

ಇಂದೋರ್‌: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ. ಇದರೊಂದಿಗೆ, ಈ ಮಾದರಿಯಲ್ಲಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್‌ ದಿಗ್ಗಜ ರಿಕಿ ಪಾಂಟಿಂಗ್‌ ಅವರ ದಾಖಲೆ ಸರಿಗಟ್ಟಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 234ನೇ ಇನಿಂಗ್ಸ್‌ನಲ್ಲಿ ಬ್ಯಾಟ್‌ ಬೀಸುತ್ತಿರುವ ರೋಹಿತ್‌ಗೆ ಇದು 30ನೇ ಶತಕ. ರಿಕಿ ಪಾಂಟಿಂಗ್‌ ಅವರು 375 ಪಂದ್ಯಗಳ 365 ಇನಿಂಗ್ಸ್‌ಗಳಿಂದ ಇಷ್ಟೇ ಶತಕ ಗಳಿಸಿದ್ದಾರೆ.

2020ರ ಜನವರಿ ನಂತರ ರೋಹಿತ್‌ ಬ್ಯಾಟ್‌ನಿಂದ ಏಕದಿನ ಶತಕ ಮೂಡಿಬಂದಿರಲಿಲ್ಲ.

ರೋಹಿತ್‌ ಅವರೊಂದಿಗೆ ಜಿದ್ದಿಗೆ ಬಿದ್ದವರಂತೆ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್‌ ನಡೆಸಿದ ಶುಭಮನ್‌ ಗಿಲ್‌ ಅವರೂ ಶತಕ ಗಳಿಸಿ ವಿಕೆಟ್‌ ಒಪ್ಪಿಸಿದರು. ಅವರು ತಾವೆದುರಿಸಿದ 72ನೇ ಎಸೆತದಲ್ಲಿ ಮೂರಂಕಿಯ ಗಡಿ ದಾಟಿದರು.

ಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ (19) ಇನಿಂಗ್ಸ್‌ಗಳಲ್ಲಿ ಸಾವಿರ ರನ್‌ ಪೂರೈಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಇಮಾಮ್‌ ಉಲ್‌ ಹಕ್‌ ಅವರೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿರುವ ಗಿಲ್‌ಗೆ ಈ ಮಾದರಿಯಲ್ಲಿ ಇದು 4ನೇ ಶತಕವಾಗಿದೆ.

ರೋಹಿತ್‌ ಮತ್ತು ಗಿಲ್‌ ಮೊದಲ ವಿಕೆಟ್‌ಗೆ 212 ರನ್‌ಗಳ ಜೊತೆಯಾಟವಾಡಿದರು. ರೋಹಿತ್‌, 85 ಎಸೆತಗಳಲ್ಲಿ 6 ಬೌಂಡರಿ ಮತ್ತು 9 ಸಿಕ್ಸರ್‌ ಸಹಿತ 101 ರನ್‌ ಗಳಿಸಿ ಔಟಾದರು. ಗಿಲ್‌, 78 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್‌ ಸಹಿತ 112 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಸದ್ಯ ಭಾರತ ತಂಡದ ಮೊತ್ತ 30 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 243 ರನ್‌ ಆಗಿದೆ. ವಿರಾಟ್‌ ಕೊಹ್ಲಿ (20) ಮತ್ತು ಇಶಾನ್‌ ಕಿಶನ್‌ (0) ಕ್ರೀಸ್‌ನಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಐವರು
1. ಸಚಿನ್‌ ತೆಂಡೂಲ್ಕರ್‌ (ಭಾರತ) – 452 ಇನಿಂಗ್ಸ್‌ಗಳಲ್ಲಿ 49 ಶತಕ
2. ವಿರಾಟ್ ಕೊಹ್ಲಿ (ಭಾರತ) – 261 ಇನಿಂಗ್ಸ್‌ಗಳಲ್ಲಿ 46 ಶತಕ
3. ರೋಹಿತ್‌ ಶರ್ಮಾ (ಭಾರತ) – 234 ಇನಿಂಗ್ಸ್‌ಗಳಲ್ಲಿ 30 ಶತಕ
4. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ ) – 365 ಇನಿಂಗ್ಸ್‌ಗಳಲ್ಲಿ 30 ಶತಕ
5. ಸನತ್‌ ಜಯಸೂರ್ಯ (ಶ್ರೀಲಂಕಾ) – 433 ಇನಿಂಗ್ಸ್‌ಗಳಲ್ಲಿ 28 ಶತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT