ವೆಲ್ಲಿಂಗ್ಟನ್:ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಪಾಯಿಂಟ್ ಹಂಚಿಕೆ ಪದ್ಧತಿಯ ಬಗ್ಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಇರುವ ನಿಯಮದ ಪ್ರಕಾರ ಟೆಸ್ಟ್ ಸರಣಿಯೊಂದಕ್ಕೆ 120 ಅಂಕ ನಿಗದಿ ಪಡಿಸಲಾಗಿದೆ.ಒಂದುವೇಳೆ ಎರಡು ಪಂದ್ಯದ ಸರಣಿಯಾದರೆ, ಒಂದು ಪಂದ್ಯದ ಗೆಲುವಿಗೆ ವಿಜಯಿ ತಂಡಕ್ಕೆ 60 ಅಂಕ ಲಭಿಸುತ್ತದೆ. ಆ್ಯಷಸ್ನಂತಹ (ಐದು ಪಂದ್ಯಗಳ) ಸರಣಿಯಲ್ಲಿ ಒಂದು ಪಂದ್ಯ ಗೆದ್ದರೆ ಸಿಗುವುದು ಕೇವಲ 24 ಅಂಕ ಮಾತ್ರ.

ಈ ಬಗ್ಗೆ ಮಾತನಾಡಿರುವ ಕೇನ್, ‘ಇದು ನ್ಯಾಯಸಮ್ಮತವಲ್ಲ’ ಎಂದು ಕಿಡಿಕಾರಿದ್ದಾರೆ. ಮುಂದುವರಿದು, ‘ಕೆಲವು ತಂಡಗಳು ಎರಡು ಪಂದ್ಯಗಳ ಸರಣಿಯಲ್ಲಿ ಆಡುತ್ತವೆ. ಇನ್ನೂ ಕೆಲವು ಮೂರು ಪಂದ್ಯಗಳ ಸರಣಿಯಲ್ಲಿ ಆಡುತ್ತವೆ. ಬೇರೆಬೇರೆ ತಂಡಗಳುವಿರುದ್ಧ ಬೇರೆಬೇರೆ ಪ್ರದೇಶಗಳಲ್ಲಿ ಆಡುತ್ತವೆ.ಹೀಗಾಗಿ ಅಂಕ ಹಂಚಿಕೆಯಲ್ಲಿ ಸಮಾನ ಮಾನದಂಡವನ್ನು ಕಾಣಲಾಗದು ಎಂದಿದ್ದಾರೆ.

‘ಆದರೆ, ನಾವೆಲ್ಲರೂ ಈಗಾಗಲೇ ಒಪ್ಪಿಗೆ ಸೂಚಿಸಿದ್ದೇವೆ. ಅದನ್ನು ಹೇಗೆಪರಿಹರಿಸಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಮುಂದಿನ ದಿನಗಳಲ್ಲಿ ಇದನ್ನು ಬದಲಿಸಲಾಗುತ್ತದೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.

ಕಿವೀಸ್ ಮತ್ತು ಭಾರತ ತಂಡಗಳ ನಡುವಣಎರಡು ಪಂದ್ಯಗಳ ಟೆಸ್ಟ್ ಸರಣಿ ನಾಳೆಯಿಂದ ಆರಂಭವಾಗಲಿದೆ.

ಇದನ್ನೂ ಓದಿ:ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್: ಕೊಹ್ಲಿ ಬಳಗಕ್ಕೆ ಕೇನ್ ಪಡೆಯ ‘ಟೆಸ್ಟ್’

ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ಮನ್
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ.

‘ಖಂಡಿತವಾಗಿಯೂ, ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಎಂಬುದರಲ್ಲಿ ಅನುಮಾನವೇ ಇಲ್ಲ’ ಎಂದಿದ್ದಾರೆ.

ವಿರಾಟ್ ಕೊಹ್ಲಿ ಐಸಿಸಿಯ ಟೆಸ್ಟ್ ಹಾಗೂ ಏಕದಿನ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.