ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀ‍‍ಪ್ತಿ, ಪೂಜಾ ಆಲ್‌ರೌಂಡ್‌ ಆಟ

ಕ್ರಿಕೆಟ್‌: ಲಂಕಾ ವಿರುದ್ಧ ಭಾರತ ಮಹಿಳೆಯರಿಗೆ 4 ವಿಕೆಟ್‌ ಜಯ
Last Updated 1 ಜುಲೈ 2022, 12:38 IST
ಅಕ್ಷರ ಗಾತ್ರ

ಪಲ್ಲೆಕೆಲೆ (ಪಿಟಿಐ): ದೀಪ್ತಿ ಶರ್ಮ ಮತ್ತು ಪೂಜಾ ವಸ್ತ್ರಕರ್‌ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಭಾರತ ತಂಡ, ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿತು.

ಪಲ್ಲೆಕೆಲೆಯಲ್ಲಿ ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 48.2 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟಾಯಿತು. ಭಾರತ 38 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ ಪಡೆದಿದೆ.

ಸುಲಭ ಗುರಿ ಬೆನ್ನಟ್ಟಿದ ಭಾರತ, ಶಫಾಲಿ ವರ್ಮ (35), ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (44) ಮತ್ತು ಹರ್ಲೀನ್‌ ಡಿಯೊಲ್ (34) ಅವರ ಉತ್ತಮ ಆಟದಿಂದ ಗೆಲುವಿನೆಡೆಗೆ ದಾಪುಗಾಲಿಟ್ಟಿತ್ತು. ಆದರೆ 3 ವಿಕೆಟ್‌ಗೆ 123 ರನ್‌ ಗಳಿಸಿದ್ದ ತಂಡ, 138 ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು.

ಈ ವೇಳೆ ಜತೆಯಾದ ದೀಪ್ತಿ (ಅಜೇಯ 22) ಮತ್ತು ಪೂಜಾ (ಅಜೇಯ 21) ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಬೌಲಿಂಗ್‌ನಲ್ಲೂ ಮಿಂಚಿದ್ದ ಇವರಿಬ್ಬರು ತಮ್ಮೊಳಗೆ 5 ವಿಕೆಟ್‌ ಹಂಚಿಕೊಂಡಿದ್ದರು.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: 171 (48.2 ಓವರ್) ಹಸಿನಿ ಪೆರೇರಾ 37, ಹರ್ಷಿತಾ ಸಮರವಿಕ್ರಮ 28, ನೀಲಾಕ್ಷಿ ಡಿ‘ಸಿಲ್ವ 43, ಅನುಷ್ಕಾ ಸಂಜೀವನಿ 18, ರೇಣುಕಾ ಸಿಂಗ್ 29ಕ್ಕೆ 3, ದೀಪ್ತಿ ಶರ್ಮ 25ಕ್ಕೆ 3, ರಾಜೇಶ್ವರಿ ಗಾಯಕ್ವಾಡ್‌ 33ಕ್ಕೆ 1, ಹರ್ಮನ್‌ಪ್ರೀತ್ ಕೌರ್‌ 13ಕ್ಕೆ 1, ಪೂಜಾ ವಸ್ತ್ರಕರ್‌ 26ಕ್ಕೆ 2)

ಭಾರತ: 6ಕ್ಕೆ 176 (38 ಓವರ್) ಶಫಾಲಿ ವರ್ಮ 35, ಹರ್ಮನ್‌ಪ್ರೀತ್‌ ಕೌರ್‌ 44, ಹರ್ಲೀನ್‌ ಡಿಯೊಲ್ 34, ದೀಪ್ತಿ ಶರ್ಮ ಔಟಾಗದೆ 22, ಪೂಜಾ ವಸ್ತ್ರಕರ್‌ ಔಟಾಗದೆ 21, ಇನೊಕ ರಣವೀರ 39ಕ್ಕೆ 4, ಒಶದಿ ರಣಸಿಂಘೆ 34ಕ್ಕೆ 2)

ಫಲಿತಾಂಶ: ಭಾರತಕ್ಕೆ 4 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT