ಶುಕ್ರವಾರ, ಜೂನ್ 25, 2021
22 °C

ಭಾರತವೇ ಟಿ20 ವಿಶ್ವಕಪ್ ಫೆವರಿಟ್: ಇಂಗ್ಲೆಂಡ್ ಮಾಜಿ ಕ್ರಿಕೆಟಿಗರ ಅಭಿಮತ

ಪಿಟಿಐ‌ Updated:

ಅಕ್ಷರ ಗಾತ್ರ : | |

ಲಂಡನ್: ಉತ್ತಮ ಆಟಗಾರರು ಇರುವ ಭಾರತ ತಂಡವೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವಾಗಿದೆ. ಆತಿಥೇಯ ತಂಡವೂ ಆಗಿರುವುದರಿಂದ ಅವಕಾಶ ಹೆಚ್ಚು ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕ್ ಆಥರ್ಟನ್ ಅಭಿಪ್ರಾಯಪಟ್ಟಿದ್ದಾರೆ.

ಆಲ್‌ರೌಂಡರ್ ರವೀಂದ್ರ ಜಡೇಜ, ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಅವರಿಲ್ಲದಿದ್ದರೂ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 3–2ರಿಂದ ಜಯಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಆಥರ್ಟನ್, ’ಐಪಿಎಲ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಆಡುವುದರಿಂದ ಭಾರತ ತಂಡದಲ್ಲಿ ಪ್ರತಿಭಾವಂತ ಆಟಗಾರರ ದೊಡ್ಡ ಪಡೆಯೇ ಇದೆ. ಕೇವಲ ಮೂವರು ಬೌಲರ್‌ಗಳ ನೆರವಿನಿಂದಲೇ ಇಂಗ್ಲೆಂಡ್ ತಂಡವನ್ನು ಸೋಲಿಸಿರುವುದು ಇದಕ್ಕೆ ಉದಾಹರಣೆ‘ ಎಂದಿದ್ದಾರೆ.

’ಇದೆಲ್ಲದರ ಜೊತೆಗೆ ವಿಶ್ವಕಪ್ ಟೂರ್ನಿಯು ಭಾರತದಲ್ಲಿಯೇ ನಡೆಯಲಿದೆ. ತಮ್ಮದೇ ಅಂಗಳ ಮತ್ತು ವಾತಾವರಣವೂ ತಂಡದ ಗೆಲುವಿನ ಅವಕಾಶವನ್ನು ಮತ್ತಷ್ಟು ಹೆಚ್ಚಿಸುತ್ತದೆ‘ ಎಂದರು.

‘ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ದಿಟ್ಟ ಪೈಪೋಟಿ ನೀಡುವ ತಂಡಗಳು ಇವೆ. ಆದ್ದರಿಂದ ಸುಲಭದ ಹಾದಿಯಾಗಲಾರದು. ಇಂಗ್ಲೆಂಡ್, ವೆಸ್ಟ್ ಇಂಡೀಸ್  ತಂಡಗಳು ಉತ್ತಮವಾಗಿ ಆಡಬಲ್ಲ ಸಮರ್ಥ ತಂಡಗಳಾಗಿವೆ‘ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು