ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ ಟಿ20 ಸರಣಿ | ಮೂರು ದಾಖಲೆಗಳ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

Last Updated 28 ಜನವರಿ 2020, 11:35 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿ ಸರಣಿಯಲ್ಲಿಯೂ ಒಂದಿಲ್ಲೊಂದು ದಾಖಲೆಗಳನ್ನು ಮುರಿಯುತ್ತಾ ಸಾಗಿರುವಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಈ ಬಾರಿ ನ್ಯೂಜಿಲೆಂಡ್‌ ಸರಣಿಯಲ್ಲಿ ಮತ್ತೆ ಮೂರು ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ.

ಭಾರತ ಪರ ಟಿ20ಯಲ್ಲಿ ನಾಯಕನಾಗಿ ಹೆಚ್ಚು ರನ್‌ ಗಳಿಸಿದ ಆಟಗಾರ, ಹೆಚ್ಚು ಅರ್ಧಶತಕ ಗಳಿಸಿದ ನಾಯಕ ಮತ್ತು ಚುಟುಕು ಕ್ರಿಕೆಟ್‌ನಲ್ಲಿ 25 ಅರ್ಧಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿರಾಟ್‌ ಕ್ರಮವಾಗಿ 45 ಮತ್ತು 16 ರನ್‌ ಗಳಿಸಿ ಔಟಾಗಿದ್ದರು.

ನಾಯಕನಾಗಿ ಹೆಚ್ಚು ರನ್‌
ಟಿ20ಯಲ್ಲಿ ಇದುವರೆಗೆ ಹೆಚ್ಚು ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಫಾಫ್‌ ಡು ಪ್ಲೆಸಿ (1273), ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸ್‌ನ್‌ (1148) ಹಾಗೂ ಭಾರತದ ಮಾಜಿ ನಾಯಕ ಎಂಎಸ್‌ ಧೋನಿ (1112) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಸದ್ಯ 1088 ರನ್‌ ಗಳಿಸಿರುವ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲಿ 25 ರನ್ ಗಳಿಸಿದರೆ ಹೆಚ್ಚು ರನ್‌ ಗಳಿಸಿದ ನಾಯಕರ ಪಟ್ಟಿಯಲ್ಲಿ ಭಾರತ ಪರ ಮೊದಲ ಸ್ಥಾನಕ್ಕೇರಲಿದ್ದಾರೆ. ಉಳಿದ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಒಟ್ಟಾರೆ ಮೊದಲ ಸ್ಥಾನಕ್ಕೇರುವ ಅವಕಾಶವೂ ಇದೆ.

ನಾಯಕನಾಗಿ ಅತಿಹೆಚ್ಚು ಅರ್ಧಶತಕ
ಕೊಹ್ಲಿ ಹಾಗೂ ಕೇನ್ ವಿಲಿಯಮ್ಸ್‌ನ್‌ ನಾಯಕರಾಗಿ ತಲಾ 8 ಅರ್ಧಶತಕಗಳನ್ನು ಸಿಡಿಸಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ಮತ್ತೊಮ್ಮೆ ಈ ಸಾಧನೆ ಮಾಡಿ ಹೆಚ್ಚು ಅರ್ಧಶತಕ ಗಳಿಸಿದ ನಾಯಕ ಎನಿಸಿಕೊಳ್ಳುವ ಅವಕಾಶ ಈ ಇಬ್ಬರಿಗೂ ಇದೆ.

25ನೇ ಅರ್ಧಶತಕ
ಇದುವರೆಗೆ 24 ಅರ್ಧಶತಕಗಳನ್ನು ಬಾರಿಸಿರುವ ವಿರಾಟ್‌ ಚುಟುಕು ಕ್ರಿಕೆಟ್‌ನಲ್ಲಿ 25ನೇ ಬಾರಿ ಐವತ್ತರ ಗಡಿ ದಾಟಲು ಸಜ್ಜಾಗಿದ್ದಾರೆ. ಒಂದು ವೇಳೆ ಮುಂದಿನ ಪಂದ್ಯದಲ್ಲಿ ಇದುಸಾಧ್ಯವಾದರೆ, ಟಿ20ಯಲ್ಲಿಈ ದಾಖಲೆ ಬರೆದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ.

ಹೆಚ್ಚು ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್‌ ಶರ್ಮಾ (23) ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT