ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL: ಭಾರತ-ಲಂಕಾ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಅಕ್ಷರ ಗಾತ್ರ

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಣ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯು ಜುಲೈ 18 ಭಾನುವಾರದಿಂದ ಆರಂಭವಾಗಲಿದೆ. ತಲಾ ಮೂರು ಏಕದಿನ ಹಾಗೂ ಟಿ20 ಸರಣಿ ಆಯೋಜನೆಯಾಗಲಿದೆ.

ಶ್ರೀಲಂಕಾ ತಂಡದಲ್ಲಿ ಕೋವಿಡ್ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಸರಣಿಯನ್ನು ಮರು ನಿಗದಿಗೊಳಿಸಲಾಗಿದೆ. ಭಾರತ ತಂಡವನ್ನು ಶಿಖರ್ ಧವನ್ ಮತ್ತು ಲಂಕಾ ತಂಡವನ್ನು ದಸುನ್ ಶನಕ ಮುನ್ನಡೆಸಲಿದ್ದಾರೆ.

ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತೀಯ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಈ ಸರಣಿಯು ಉತ್ತಮ ವೇದಿಕೆಯಾಗಲಿದೆ.

ವೇಳಾಪಟ್ಟಿ ಇಂತಿದೆ:

ಏಕದಿನ ಸರಣಿ:
ಮೊದಲ ಏಕದಿನ: ಜು.18 ಭಾನುವಾರ
ದ್ವಿತೀಯ ಏಕದಿನ: ಜು.20, ಮಂಗಳವಾರ
ಅಂತಿಮ ಏಕದಿನ: ಜು.23, ಶುಕ್ರವಾರ

ಟಿ20 ಸರಣಿ:
ಮೊದಲ ಟಿ20: ಜು.25, ಭಾನುವಾರ
ದ್ವಿತೀಯ ಟಿ20: ಜು.27, ಮಂಗಳವಾರ
ಅಂತಿಮ ಟಿ20: ಜು.29, ಗುರುವಾರ

*ಎಲ್ಲ ಪಂದ್ಯಗಳು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.
*ಸಮಯ: ಏಕದಿನ ಸರಣಿಯು ಭಾರತೀಯ ಕಾಲಮಾನದಂತೆ ಮಧ್ಯಾಹ್ನ 3ಕ್ಕೆ ಮತ್ತು ಟಿ20 ಸರಣಿಯು ರಾತ್ರಿ 8ಕ್ಕೆ ಆರಂಭವಾಗಲಿದೆ.

ತಂಡಗಳು ಇಂತಿದೆ:

ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್‌ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃುಣಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಇಶನ್ ಕಿಶಾನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ನವದೀಪ್ ಸೈನಿ ಮತ್ತು ಚೇತನ್ ಸಕರಿಯ.

ಶ್ರೀಲಂಕಾ: ದಸುನ್ ಶನಕ (ನಾಯಕ), ಧನಂಜಯ ಡಿ‘ಸಿಲ್ವ, ಆವಿಷ್ಕ ಫರ್ನಾಂಡೊ, ಭಾನುಕ ರಾಜಪಕ್ಸ, ಪಾತುಮ್ ನಿಸಾಂಕ, ಚರಿತ ಅಸಲಂಕ, ವನಿಂದು ಹಸರಂಗ, ಆಶೆನ್ ಬಂಡಾರ, ಮಿನೋದ್ ಭಾನುಕ, ಲಾಹಿರು ಉದರ, ರಮೇಶ್ ಮೆಂಡಿಸ್, ಚಮಿಕ ಕರುಣರತ್ನೆ, ಬಿನುರ ಫರ್ನಾಂಡೊ, ದುಷ್ಮಂತ ಚಮೀರ, ಲಕ್ಷಣ್ ಸಂಡಗನ್, ಅಕಿಲ ಧನಂಜಯ, ಶಿರಾನ್ ಫರ್ನಾಂಡೊ, ಧನಂಜಯ ಲಕ್ಷಣ್‌, ಇಶಾನ್ ಜಯರತ್ನೆ, ಪ್ರವೀಣ್ ಜಯವಿಕ್ರಮ, ಅಸಿತ ಫರ್ನಾಂಡೊ, ಕಾಸುನ್ ರಜಿತ, ಲಾಹಿರು ಕುಮಾರ, ಇಸುರು ಉಡಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT