ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Sri Lanka Vs India, 1st ODI| ಶಿಖರ್–ಇಶಾನ್ ಆಟಕ್ಕೆ ಒಲಿದ ಜಯ

ಭಾರತ–ಶ್ರೀಲಂಕಾ ಏಕದಿನ ಪಂದ್ಯ: ಯಜುವೇಂದ್ರ, ಕುಲದೀಪ್ ಸ್ಪಿನ್ ಮೋಡಿ
Last Updated 18 ಜುಲೈ 2021, 18:28 IST
ಅಕ್ಷರ ಗಾತ್ರ

ಕೊಲಂಬೊ:ನಾಯಕನಾಗಿ ಚೊಚ್ಚಲ ಪಂದ್ಯವಾಡಿದ ಶಿಖರ್ ಧವನ್ ಮತ್ತು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಇಶಾನ್ ಕಿಶನ್ ಅವರ ಬ್ಯಾಟಿಂಗ್‌ನಿಂದ ಭಾರತ ತಂಡವು ಜಯಭೇರಿ ಬಾರಿಸಿತು.

ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳಿಂದ ಶ್ರೀಲಂಕಾ ವಿರುದ್ಧ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 262 ರನ್‌ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 36.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 263 ರನ್ ಗಳಿಸಿ ಜಯಿಸಿತು.

ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಶಿಖರ್‌, ಏಕದಿನ ಮಾದರಿಯಲ್ಲಿ ಆರು ಸಾವಿರ ರನ್‌ ಪೂರ್ಣಗೊಳಿಸಿದರು.

ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ (43; 24ಎ) ಮತ್ತು ಶಿಖರ್ (ಔಟಾಗದೆ 86; 95ಎ) ಮೊದಲ ವಿಕೆಟ್‌ಗೆ 58 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಆರನೇ ಓವರ್‌ನಲ್ಲಿ ಪೃಥ್ವಿ ಔಟಾದರು. ಈ ಸಂದರ್ಭದಲ್ಲಿ ಶಿಖರ್ ಜೊತೆಗೂಡಿದ ಇಶಾನ್ ಕಿಶನ್ (59; 42ಎ) ಬೌಲರ್‌ಗಳನ್ನು ದಂಡಿ ಸಿದರು. ಬೀಡುಬೀಸಾಗಿ ಬ್ಯಾಟಿಂಗ್ ಮಾಡಿದ ಇಶಾನ್ ಆಟಕ್ಕೆ ರನ್‌ಗಳು ಹರಿದು ಬಂದವು. ಇಶಾನ್, ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. ಶಿಖರ್ ಜೊತೆಗೆ ಎರಡನೇ ವಿಕೆಟ್‌ಗೆ 85 ರನ್ ಸೇರಿಸಿದರು.18ನೇ ಓವರ್‌ನಲ್ಲಿ ಇಶಾನ್ ಔಟಾದಾಗ ಕ್ರೀಸ್‌ಗೆ ಬಂದ ಮನೀಷ್ ಪಾಂಡೆ (26; 40ಎ) ಎಚ್ಚರಿಕೆಯಿಂದ ಆಡಿದರು. ತಂಡದ ಮೊತ್ತವು ಇನ್ನೂ ರರ ಗಡಿ ದಾಟುವಂತೆ ನೋಡಿಕೊಂಡರು. ಮನೀಷ್ ಔಟಾ ದರು. ತಮ್ಮ ಚೊಚ್ಚಲ ಏಕದಿನ ಪಂದ್ಯವಾಡಿದ ಸೂರ್ಯಕುಮಾರ್ ಯಾದವ್ (ಔಟಾಗದೆ 31) ಶಿಖರ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಚಾಹಲ್, ಕುಲದೀಪ್ ಮೋಡಿ: ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ತಮ್ಮ ಸ್ಪಿನ್ ಮೋಡಿ ತೋರಿಸಿದರು.ಶ್ರೀಲಂಕಾದ ಆರಂಭಿಕ ಜೋಡಿ ಅವಿಷ್ಕಾ ಫರ್ನಾಂ ಡೊ (33 ರನ್) ಮತ್ತು ಮಿನೋದ್ ಭಾನುಕಾ (27) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆ ಯಾಟದಲ್ಲಿ ಈ ಜೋಡಿಯು 49 ರನ್‌ ಗಳಿಸಿದ್ದಾಗ, ಚಾಹಲ್ 10ನೇ ಓವರ್‌ನಲ್ಲಿ ಈ ಜೊತೆಯಾಟ ಮುರಿದರು. ಇದೇ ಪಂದ್ಯದಲ್ಲಿ ಪದಾ ರ್ಪಣೆ ಮಾಡಿದ ಶನುಕಾ ರಾಜಪಕ್ಷ (24; 22ಎ) ಅವರು ಭಾನುಕಾ ಜೊತೆಗೂಡಿ ಇನಿಂಗ್ಸ್‌ಗೆ ಸ್ಥಿರತೆ ನೀಡುವ ಪ್ರಯತ್ನ ಮಾಡಿದರು. ಆದರೆ ಈ ಜೊತೆಯಾಟವನ್ನು ಭಾನುಕಾ ವಿಕೆಟ್ ಗಳಿಸಿದ ಕುಲದೀಪ್ ಸಂಭ್ರಮಿಸಿದರು. ಅದೇ ಓವರ್‌ನಲ್ಲಿ ಯಾದವ್ ಅವರು ಮಿನೊದ್ ವಿಕೆಟ್‌ ಅನ್ನು ಕೂಡ ಗಳಿಸಿದರು. ಮಧ್ಯಮಕ್ರಮಾಂಕದಲ್ಲಿ ಚರಿತ ಅಸ್ಲೆಂಕಾ (38) ಮತ್ತು ನಾಯಕ ದಸುನ್ ಶನಕಾ (39) ಉತ್ತಮವಾಗಿ ಆಡಿದರು. ಆದರೆ, ಕೊನೆಯ ಹಂತದಲ್ಲಿ ಬೀಸಾಟವಾಡಿದ ಚಾಮಿಕಾ ಕರುಣಾರತ್ನೆ (ಔಟಾಗದೆ 43; 35ಎ, 1ಬೌಂ, 2ಸಿ) ತಂಡವು ಹೋರಾಟದ ಮೊತ್ತ ಗಳಿಸಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT