ಬುಧವಾರ, ಜನವರಿ 22, 2020
18 °C

IND vs WI: ವಿಂಡೀಸ್ ಗೆಲುವಿಗೆ 288 ರನ್‌ ಟಾರ್ಗೆಟ್‌ ನೀಡಿದ ಟೀಂ ಇಂಡಿಯಾ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಯುವ ಆಟಗಾರರಾದ ಶ್ರೇಯಸ್‌ ಅಯ್ಯರ್ ಮತ್ತು ರಿಷಭ್‌ ಪಂತ್‌ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತಕ್ಕೆ ಆಸರೆಯಾದರು.

ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 287 ರನ್‌ ಗಳಿಸಿದೆ. 

ರೋಹಿತ್‌ ಶರ್ಮಾ ಅವರೊಂದಿಗೆ ಇನ್ನಿಂಗ್ಸ್‌ ಆರಂಭಿಸಿದ ಕೆ.ಎಲ್‌.ರಾಹುಲ್‌ ಕೇವಲ ಆರು ರನ್‌ ಗಳಿಸಿ ಶೆಲ್ಡನ್‌ ಕಾಟ್ರೆಲ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ, ಕ್ರೀಸ್‌ಗೆ ಬಂದ ನಾಯಕ ವಿರಾಟ್‌ ಕೊಹ್ಲಿ 4 ರನ್‌ ಗಳಿಸಿ ಕಾಟ್ರೆಲ್‌ ಬಲೆಗೆ ಬಿದ್ದರು. ತಾಳ್ಮೆಯ ಆಟವಾಡಿದ ರೋಹಿತ್ ಶರ್ಮಾ 36 ರನ್‌ ಗಳಿಸಿ ಔಟಾದರು.  

ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಶ್ರೇಯಸ್‌ ಐಯ್ಯರ್‌ (70) ಹಾಗೂ ಐದನೇ ಕ್ರಮಾಂಕದಲ್ಲಿ ಆಡಿದ ರಿಷಭ್‌ ಪಂತ್‌ (71) ರನ್‌ ಗಳಿಸಿ ತಂಡಕ್ಕೆ ಬಲ ತುಂಬಿದರು. ಬಳಿಕ ಕ್ರೀಸ್‌ಗೆ ಬಂದ ಕೇದಾರ್‌ ಜಾಧವ್‌ (40), ರವೀಂದ್ರ ಜಡೇಜ 21 ರನ್‌ ಗಳಿಸಿದರು. 

ವೆಸ್ಟ್‌ ಇಂಡೀಸ್‌ ಪರ: ಶೆಲ್ಡನ್‌ ಕಾಟ್ರೆಲ್‌ 2, ಕಿಮೊ ಪಾಲ್‌ 2,  ಅಲಜಾರಿ ಜೋಸೆಫ್‌ 2, ಕೀರನ್‌ ಪೊಲಾರ್ಡ್‌ 1 ವಿಕೆಟ್‌ ಪಡೆದು ಮಿಂಚಿದರು. 

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ವೆಸ್ಟ್‌ ಇಂಡೀಸ್‌ 5 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 12 ರನ್‌ ಗಳಿಸಿದೆ. 
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು