ಶುಕ್ರವಾರ, ಏಪ್ರಿಲ್ 10, 2020
19 °C

ಭಾರತವು ಅದ್ಭುತವಾದ ದೇಶ, ಭಾರತೀಯರಿಗೆ ಯುದ್ಧ ಬೇಕಾಗಿಲ್ಲ: ಶೋಯಬ್ ಅಖ್ತರ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಲಾಹೋರ್: ಭಾರತವು ಅದ್ಭುತವಾದ ದೇಶವಾಗಿದ್ದು, ಆತಿಥ್ಯದ ಗುಣ ಹೊಂದಿರುವ ಭಾರತೀಯರು ಪಾಕಿಸ್ತಾನ ಜೊತೆಗಿನ ವೈರತ್ವವನ್ನು ಇಷ್ಟಪಡಲಾರರು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಖ್ತರ್‌, ‘ಭಾರತವು ಶ್ರೇಷ್ಠ ತಾಣವಾಗಿದೆ. ಅಲ್ಲಿ ಅದ್ಭುತವಾದ ಜನರಿದ್ದಾರೆ. ಅವರು ಪಾಕಿಸ್ತಾನದೊಂದಿಗೆ ವೈರತ್ವ ಸಾಧಿಸುತ್ತಿದ್ದಾರೆಂದು ಅಥವಾ ಯಾವುದೇ ತರಹದ ಯುದ್ಧವನ್ನು ಬಯಸುತ್ತಾರೆ ಎಂದು ನಾನು ಭಾವಿಸಿಯೇ ಇಲ್ಲ’ ಎಂದು ಹೇಳಿದ್ದಾರೆ.

ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವೀಕ್ಷಕ ವಿವರಣೆಗಾರನಾಗಿಯೂ ಕಾಣಿಸಿಕೊಂಡಿದ್ದ ಅಖ್ತರ್‌, ನಾನು ಟಿವಿ ಕಾರ್ಯಕ್ರಮಗಳು ಮತ್ತು ಇತರೆ ಉದ್ದೇಶಗಳ ಸಲುವಾಗಿ ಭಾರತಕ್ಕೆ ತೆರಳಿದ್ದೇನೆ. ಒಂದು ವೇಳೆ ಯುದ್ಧ ಆರಂಭವಾದರೇ? ಎಂದೆಲ್ಲ ಭಾವಿಸಿದ್ದೆ. ಭಾರತದ ಉದ್ದಗಲಕ್ಕೂ ಸಂಚರಿಸಿ, ಆ ದೇಶವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ, ಭಾರತವು ಪಾಕಿಸ್ತಾನದೊಂದಿಗೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದೆ ಎಂದು ನಾನು ಈ ದಿನ ವಿಶ್ವಾಸದಿಂದ ಹೇಳಬಲ್ಲೆ. ಭಾರತದ ಪ್ರಗತಿಯ ಹಾದಿಯು ಪಾಕಿಸ್ತಾನದ ಮೂಲಕವೇ ಸಾಗುತ್ತದೆ ಎಂಬುದು ನನಗೆ ಮನವರಿಕೆಯಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 

ಐಪಿಎಲ್‌ ಮುಂದೂಡಿಕೆ ಕುರಿತಂತೆ ಮಾತನಾಡಿರುವ ಅವರು, ‘ಇದರಿಂದಾಗುವ ನಷ್ಟವನ್ನು ಭರಿಸುವಲ್ಲಿ ಭಾರತ ಸಫಲವಾಗುತ್ತದೆ. ಅದರೆ, ಇದೆಲ್ಲವೂ (ಕೊರೊನಾ ವೈರಸ್‌ ಪರಿಣಾಮ) ದುರದೃಷ್ಟಕರ’ ಎಂದಿದ್ದಾರೆ.

ಕಳೆದ ವಾರ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿದ್ದ ಅಖ್ತರ್, ಕೊರೊನಾ ವೈರಸ್‌ ಭೀತಿ ಉಂಟಾಗಲು ಕಾರಣ ಚೀನಿಯರ ಆಹಾರ ಪದ್ದತಿ ಎಂದು ದೂರಿದ್ದರು. ಐಪಿಎಲ್‌ ಟೂರ್ನಿಯನ್ನು ಬಿಸಿಸಿಐ ಮುಂದೂಡಿಕೆ ಮಾಡಿದ್ದು ಮತ್ತು ಪಿಸಿಬಿಯು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಪಂದ್ಯಗಳನ್ನು ಆಯೋಜಿಸುವ ತೀರ್ಮಾನ ಕೈಗೊಂಡಿದ್ದರ ಕುರಿತು ಬೇಸರ ವ್ಯಕ್ತಪಡಿಸಿದ್ದರು.

‘ನನ್ನ ಕೋಪಕ್ಕೆ ಮುಖ್ಯ ಕಾರಣ ಪಿಎಸ್‌ಎಲ್‌ಗೆ ಸಂಬಂಧಿಸಿದ ನಿರ್ಧಾರ. ಹಲವು ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲಾಗುತ್ತಿದೆ. ಸಂಕಷ್ಟದ ಸನ್ನಿವೇಶದ ನಡುವೆಯೂ ಇದೇ ಮೊದಲ ಸಲ ಪಾಕಿಸ್ತಾನದಲ್ಲಿ ಪಿಎಸ್‌ಎಲ್‌ ನಡೆಯುತ್ತಿದೆ. ಇದೀಗ ಆ ಟೂರ್ನಿಯ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ನೋಡಲು ಪ್ರೇಕ್ಷಕರಿಗೆ ಅವಕಾಶ ನಿರಾಕರಿಸುವ ಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 

‘ನೀವು ಯಾಕಾದರೂ ಬಾವಲಿಗಳನ್ನು ತಿನ್ನುವಿರೊ, ಅವುಗಳ ರಕ್ತ ಮತ್ತು ಮೂತ್ರ ಕುಡಿಯುತ್ತೀರೊ, ಇದರಿಂದಾಗಿ ವಿಶ್ವದಾದ್ಯಂತ ವೈರಸ್‌ ಸೋಂಕು ಹರಡುತ್ತಿದೆ. ನಾನು ಮಾತನಾಡುತ್ತಿರುವುದು ಚೀನಾ ಪ್ರಜೆಗಳ ಬಗ್ಗೆ. ಅವರು ಜಗತ್ತನ್ನೇ ಆತಂಕಕ್ಕೆ ದೂಡಿದ್ದಾರೆ. ಅದ್ಹೇಗೆ ನೀವು ಬಾವಲಿಗಳು, ಬೆಕ್ಕು ಮತ್ತು ನಾಯಿಗಳನ್ನು ತಿನ್ನುತ್ತೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾನಂತು ಕೋಪಗೊಂಡಿದ್ದೇನೆ’ ಎಂದು ಕಿಡಿಕಾರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು