ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | KKR vs CSK: ಜಯದ ವಿಶ್ವಾಸದಲ್ಲಿ ದೋನಿ, ಕಾರ್ತಿಕ್‌ಗೆ ಸವಾಲು

Last Updated 7 ಅಕ್ಟೋಬರ್ 2020, 10:19 IST
ಅಕ್ಷರ ಗಾತ್ರ

ಅಬುಧಾಬಿ: ಸತತ ಮೂರು ಸೋಲುಗಳ ನಂತರ ಜಯದ ಹಾದಿಗೆ ಮರಳಿರುವ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಬಳಗ ಬುಧವಾರ ಸಂಜೆದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವನ್ನು ಎದುರಿಸಲಿದೆ.

ಚೆನ್ನೈ ತಂಡವು ನಾಲ್ಕನೇ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಎದುರು 10 ವಿಕೆಟ್‌ಗಳಿಂದ ಭರ್ಜರಿ ಜಯಿಸಿತ್ತು. ತಂಡವು ಒಟ್ಟು 4ಪಂದ್ಯಗಳನ್ನು ಆಡಿದೆ. ದಿನೇಶ್ ಕಾರ್ತಿಕ್ ಬಳಗವು ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಆಡಿ ಎರಡರಲ್ಲಿ ಗೆದ್ದು ಉಳಿದಿದ್ದರಲ್ಲಿ ಸೋತಿದೆ.

ಚೆನ್ನೈನ ಆರಂಭಿಕ ಜೋಡಿ ಶೇನ್ ವಾಟ್ಸನ್ ಮತ್ತು ಫಾಫ್ ಡುಪ್ಲೆಸಿ ಇವರಿಬ್ಬರೊಂದಿಗೆ ಅಂಬಟಿ ರಾಯುಡು, ರವೀಂದ್ರ ಜಡೇಜ, ಮಹೇಂದ್ರಸಿಂಗ್ ಧೋನಿ ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಕಾಣಿಕೆ ಕೊಡಬಲ್ಲರು. ಬೌಲರ್ ಸ್ಯಾಮ್ ಕರನ್ ಕೂಡ ಕೆಳಕ್ರಮಾಂಕದಲ್ಲಿ ಕೆಲವು ರನ್‌ಗಳ ಕಾಣಿಕೆ ನೀಡಬಲ್ಲರು. ಆದರೆ ಇವರೆಲ್ಲರೂ ಕೆಕೆಆರ್‌ನ ಪ್ಯಾಟ್ ಕಮಿನ್ಸ್‌ ಮುಂದಾಳತ್ವದ ಬೌಲಿಂಗ್ ಪಡೆಯನ್ನು ಎದುರಿಸಿ ನಿಲ್ಲಬೇಕು.

ಚೆನ್ನೈ ಬೌಲರ್‌ಗಳಾದ ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಸ್ಪಿನ್ನರ್ ಪೀಯೂಷ್ ಚಾವ್ಲಾ, ಜಡೇಜ ಮತ್ತು ಡ್ವೇನ್ ಬ್ರಾವೊ ಅವರಿಗೆ ಕೆಕೆಆರ್ ಬ್ಯಾಟಿಂಗ್ ಪಡೆ ಕಠಿಣ ಸವಾಲೊಡ್ಡುವುದು ಖಚಿತ. ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ನಿತೀಶ್ ರಾಣಾ, ಆ್ಯಂಡ್ರೆ ರಸೆಲ್, ದಿನೇಶ್, ಸುನಿಲ್ ನಾರಾಯಣ ಮತ್ತು ಏಯಾನ್ ಮಾರ್ಗನ್ ಅವರಿಗೆ ಕಡಿವಾಣ ಹಾಕುವುದು ಪ್ರಮುಖ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT