ದುಬೈ: ಮಹೇಂದ್ರ ಸಿಂಗ್ ಧೋನಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿರುವ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಘಟನೆ ನಡೆದಿತ್ತು.

ಇದನ್ನೂ ಓದಿ:ವಿಶ್ವಕಪ್ ಗೆಲುವನ್ನು ನೆನಪಿಸಿದ ಧೋನಿ ವಿಂಟೇಜ್ ಸಿಕ್ಸರ್; ಅಭಿಮಾನಿಗಳ ಸಂಭ್ರಮ

ವೀಕ್ಷಕ ವಿವರಣೆ ನೀಡುವ ವೇಳೆಯಲ್ಲಿ ಗಂಭೀರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಉಲ್ಲೇಖಿಸದೇ 'ಸೋ ಕಾಲ್ಡ್ ಫಿನಿಶರ್' ಎಂದು ಟಾಂಗ್ ಕೊಟ್ಟಿದ್ದರು.

ಗಂಭೀರ್ ಹೇಳಿದ್ದೇನು?
'ಆ್ಯಂಡ್ರೆ ರಸೆಲ್ ಅವರನ್ನು ಫಿನಿಶರ್ ಎಂದು ಕರೆಯಲಾಗುತ್ತದೆ. ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ ಕಳೆದೆರಡು ವರ್ಷಗಳಲ್ಲಿ ಬೆಸ್ಟ್ ಫಿನಿಶರ್ ಎನಿಸಿದ್ದಾರೆ. ಹಾಗಾಗಿ ಆಟಗಾರರಿಗೆ 'ಫಿನಿಶರ್' ಎನ್ನುವ ಪದ ನೀಡುವುದರಿಂದ ಫಿನಿಶರ್ ಎನಿಸಿಕೊಳ್ಳುವುದಿಲ್ಲ. 'ಸೋ ಕಾಲ್ಡ್ ಫಿನಿಶರ್' ಜೊತೆಗೆ (ಫಿನಿಶರ್ ಎಂದು ಕರೆಯಲ್ಪಡುವ) ವಿರಾಟ್ ಕೊಹ್ಲಿ ರನ್ ಗಳಿಕೆಯನ್ನು ಹೋಲಿಸಿ ನೋಡಿ' ಎಂದು ಹೇಳಿದ್ದರು.

ಧೋನಿ ಅವರನ್ನು ಗುರಿಯಾಗಿಸಿ ಗಂಭೀರ್ ನೀಡಿರುವ ಹೇಳಿಕೆಯು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಧೋನಿ ಅವರನ್ನು ಬೆಂಬಲಿಸಿಗಂಭೀರ್ಗೆ ತಿರುಗೇಟುನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.