ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಬಿಷ್ಣೋಯಿ, ತ್ರಿಪಾಠಿ ಅದ್ಭುತ ಕ್ಯಾಚ್; ಯಾವುದು ಬೆಸ್ಟ್?

Last Updated 26 ಏಪ್ರಿಲ್ 2021, 16:50 IST
ಅಕ್ಷರ ಗಾತ್ರ

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಸಾಕಷ್ಟು ರೋಚಕತೆಗೆ ಸಾಕ್ಷಿಯಾಗಿತ್ತು.

ಈ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ರವಿ ಬಿಷ್ಣೋಯಿ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ರಾಹುಲ್ ತ್ರಿಪಾಠಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದರು.

ಕೋಲ್ಕತ್ತ ಬ್ಯಾಟಿಂಗ್ ವೇಳೆಯಲ್ಲಿ ಸುನಿಲ್ ನಾರಾಯಣ್ ದಾಳಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ಮಯಂಕ್ ಅಗರವಾಲ್ ಹೊರದಬ್ಬುವಲ್ಲಿ ರಾಹುಲ್ ತ್ರಿಪಾಠಿ ನೆರವಾದರು.

ಮುಂದಕ್ಕೆ ಡೈವ್ ಹೊಡೆದು ಕ್ಯಾಚ್ ಹಿಡಿಯುವ ವೇಳೆಯಲ್ಲಿ ಚೆಂಡು ಇನ್ನೇನು ಕೈಜಾರಲಿದೆ ಎನ್ನುವಷ್ಟರಲ್ಲಿ ಉತ್ತಮ ಸಮತೋಲನ ಕಾಯ್ದುಕೊಂಡ ತ್ರಿಪಾಠಿ, ಚೆಂಡನ್ನು ಭದ್ರವಾಗಿ ಹಿಡಿಯುವಲ್ಲಿ ಯಶಸ್ವಿಯಾದರು. ಈ ವೇಳೆ ಮುಂದಕ್ಕೆ ಪಲ್ಟಿ ಹೊಡೆದರು.

ಬಳಿಕ ಪಂಜಾಬ್ ಇನ್ನಿಂಗ್ಸ್ ವೇಳೆಯಲ್ಲಿ ಅರ್ಶ್‌ದೀಪ್ ಸಿಂಗ್ ದಾಳಿಯಲ್ಲಿ ಸುನಿಲ್ ನಾರಾಯಣ್ ಹೊಡೆದ ಚೆಂಡನ್ನು ಬೌಂಡರಿ ಗೆರೆ ಬಳಿ ಓಡುತ್ತಾ ಬಂದ ರವಿ ಬಿಷ್ಣೋಯಿ ಅದ್ಭುತವಾಗಿ ಡೈವ್ ಹೊಡೆದು ಕ್ಯಾಚ್ ಹಿಡಿದರು. ಬಳಿಕ ಬಿಷ್ಣೋಯಿ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಗೇಲ್ 'ಗೋಲ್ಡನ್ ಡಕ್', ಅದ್ಭುತ ಫೀಲ್ಡಿಂಗ್...
ಏತನ್ಮಧ್ಯೆ ಕಿಂಗ್ಸ್ ತಂಡದ ಕ್ರಿಸ್ ಗೇಲ್ ಗೋಲ್ಡನ್ ಡಕ್‌ಗೆ ಬಲಿಯಾದರೂ ಅದ್ಭುತ ಫೀಲ್ಡಿಂಗ್ ಮಾಡುವ ಮೂಲಕ ಗಮನ ಸೆಳೆದರು. ಇದರಿಂದಾಗಿ ಸ್ವಲ್ಪದರಲ್ಲೇ ರಾಹುಲ್ ತ್ರಿಪಾಠಿ ರನೌಟ್ ಅಪಾಯದಿಂದ ಪಾರಾದರು.

ಒಂಟಿ ರನ್ ಕದಿಯಲೆತ್ನಿಸುವ ವೇಳೆ ಡೈವ್ ಹೊಡೆದ ಗೇಲ್ ಕ್ಷಣಾರ್ಧದಲ್ಲಿ ವಿಕೆಟ್‌ಗೆ ನೇರ ಥ್ರೋ ಮಾಡಿ ಬೇಲ್ಸ್ ಎಗರಿಸುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೊತ್ತಿಗೆ ಡೈವ್ ಹೊಡೆದ ತ್ರಿಪಾಠಿ ಕೂದಲೆಳೆಯ ಅಂತರದಲ್ಲಿ ರನೌಟ್‌ನಿಂದ ಪಾರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT