ಶುಕ್ರವಾರ, ಮೇ 7, 2021
26 °C

IPL 2021: ಗೇಲ್ vs ಚಾಹಲ್ ಬಾಡಿ ಬಿಲ್ಡಿಂಗ್ ಸ್ಪರ್ಧೆ; ಗೆದ್ದವರು ಯಾರು?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಐಪಿಎಲ್‌ ಪಂದ್ಯದ ಬಳಿಕ ಮೈದಾನದಲ್ಲೇ ವೆಸ್ಟ್‌ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ ಹಾಗೂ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ದೇಹಧಾರ್ಡ್ಯ ಸ್ಪರ್ಧೆಗಳಿದಿದ್ದಾರೆ. ಇದು ಅಭಿಮಾನಿಗಳಿಂದಲೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಲು ಕಾರಣವಾಗಿದೆ.

ಅಹಮದಾಬಾದ್‌ನಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ಬಳಿಕ ಈ ಪ್ರಸಂಗ ನಡೆದಿತ್ತು.

ಪಂದ್ಯದಲ್ಲಿ ಕೆ.ಎಲ್ ರಾಹುಲ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ತಂಡವು 34 ರನ್ ಅಂತರದ ಜಯಭೇರಿ ಮೊಳಗಿಸಿತ್ತು. ಬ್ಯಾಟಿಂಗ್‌ನಲ್ಲಿ ಮಿಂಚಿದ ಗೇಲ್, ಕೇವಲ 24 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದ್ದರು.

ಆರ್‌ಸಿಬಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ದಾಳಿಯಲ್ಲಿ ಎರಡು ಸಿಕ್ಸರ್ ಬಾರಿಸಿ ಅಬ್ಬರಿಸಿದ್ದರು. ಆದರೂ ಚಾಹಲ್ ಜೊತೆಗೆ ಉತ್ತಮ ಗೆಳೆತನವನ್ನು ಕಾಯ್ದುಕೊಂಡಿರುವ ಗೇಲ್, ಪಂದ್ಯದ ಬಳಿಕ ಮೋಜಿಗಾಗಿ ದೇಹಧಾರ್ಡ್ಯ ಪ್ರದರ್ಶನ ನಡೆಸಿದರು.

ಯೂನಿವರ್ಸ್ ಬಾಸ್ ಖ್ಯಾತಿಯ ಗೇಲ್, 41ರ ಹರೆಯದಲ್ಲೂ ದಷ್ಟಪುಷ್ಟವಾದ ದೇಹವನ್ನು ಕಾಪಾಡಿಕೊಂಡಿದ್ದಾರೆ. ಇದರಿಂದಾಗಿ ದೇಹಧಾರ್ಡ್ಯ ಸ್ಪರ್ಧೆಯಲ್ಲೂ ಚಾಹಲ್ ಸವಾಲೆನಿಸಲಿಲ್ಲ.

ಒಟ್ಟಿನಲ್ಲಿ ಗೇಲ್ ಹಾಗೂ ಚಾಹಲ್ ಶರ್ಟ್ ಕಳಚಿ ಫೋಟೊಗೆ ಕೊಟ್ಟಿರುವ ಫೋಸ್ ವೈರಲ್ ಆಗಿದೆ. ಅತ್ತ ಇದೇ ಚಿತ್ರವನ್ನು ಇಟ್ಟುಕೊಂಡು ಪಂಜಾಬ್ ತಂಡವು ಆರ್‌ಸಿಬಿಯನ್ನು ಟ್ರೋಲ್‌ಗೆ ಗುರಿಯಾಗಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು