ಶುಕ್ರವಾರ, ಜುಲೈ 1, 2022
25 °C

IPL 2022 – ಹೊಸ ಆಟಗಾರರಿಗೆ ತಂಡದ ಅನುಭವಿಗಳೇ ಮಾರ್ಗದರ್ಶಕರು: ಪಾಂಟಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮೊದಲಿನಿಂದಲೂ ತಂಡದಲ್ಲಿರುವ ಆಟಗಾರರು ಈ ವರ್ಷ ಹೊಸದಾಗಿ ಸೇರ್ಪಡೆಯಾದವರಿಗೆ ಮಾರ್ಗದರ್ಶಕರಾಗುವರು. ಎಲ್ಲರೂ ತಂಡವಾಗಿ ಉತ್ತಮ ಫಲಿತಾಂಶ ನೀಡುವರು ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದರು. 

ಮಾರ್ಚ್‌ 26ರಿಂದ ಐಪಿಎಲ್ ಆರಂಭವಾಗಲಿದೆ. ಈಚೆಗೆ ನಡೆದಿದ್ದ ಹರಾಜು ಪ್ರಕ್ರಿಯೆಗೂ ಮುನ್ನ ಡೆಲ್ಲಿ ತಂಡವು ರಿಷಭ್ ಪಂತ್, ಪೃಥ್ವಿ ಶಾ, ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ದಕ್ಷಿಣ ಆಫ್ರಿಕಾದ ಎನ್ರಿಚ್ ನಾಕಿಯಾ ಅವರನ್ನು ಉಳಿಸಿಕೊಂಡಿತ್ತು.

 

‘ಹೋಟೆಲ್‌ನಲ್ಲಿ ಇರುವಾಗ ತಮ್ಮ ತಮ್ಮ ಕೋಣೆಗಳ ಬಾಗಿಲುಗಳನ್ನು ಸದಾ ತೆರೆದಿಡುವಂತೆ ತಂಡದ ಅಟಗಾರರಿಗೆ ಸೂಚಿಸಿದ್ದೇನೆ. ಇದರಿಂದಾಗಿ ಪರಸ್ಪರ ಎಲ್ಲರೂ ಸಂಪರ್ಕದಲ್ಲಿದ್ದು ಸ್ನೇಹ ಸೌಹಾರ್ದ ಬೆಳೆಯುವಂತಾಗಲಿ ಎಂದಿದ್ದೇನೆ. ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಂದರ್ಭದಲ್ಲಿ ಅನುಭವಿಗಳು ಯುವ ಆಟಗಾರರೊಂದಿಗೆ ಬೆರೆಯುತ್ತಾರೆ. ಇದು ತಂಡವು ಸಂಘಟಿತವಾಗಲು ನೆರವಾಗುತ್ತಾರೆ’ ಎಂದು ಫ್ರ್ಯಾಂಚೈಸಿಯು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಪಾಂಟಿಂಗ್ ಹೇಳಿದ್ದಾರೆ.

‘ಯುವ ಆಟಗಾರರೊಂದಿಗೆ ಕೋಚ್ ಮತ್ತು ಅನುಭವಿ ಆಟಗಾರರು ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು. ಆಗ ಅವರು ಖಂಡಿತವಾಗಿಯೂ ಉತ್ತಮ ಪ್ರತಿಫಲ ನೀಡುತ್ತಾರೆ. ಅದು ತಂಡದ ಯಶಸ್ಸಿಗೆ ಕಾರಣವಾಗುತ್ತದೆ’ ಎಂದಿದ್ದಾರೆ.

‘ನಾಯರ ರಿಷಭ್ ಪಂತ್ ತಂಡ ಕಟ್ಟುವ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಕೆಲವು ವರ್ಷಗಳಿಂದ ಬಳಗದಲ್ಲಿ ಇರುವ ಪೃಥ್ವಿ, ಅಕ್ಷರ್ ಮತ್ತು ನಾಕಿಯಾ ಅವರ ಹೊಣೆಯೂ ಮಹತ್ವದ್ದಾಗಿದೆ. ಹೊಸ ಹುಡುಗರಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ತುಂಬುವುದು ಮುಖ್ಯ’ ಎಂದು ಹೇಳಿದರು. 

ವಿಕ್ಕಿ ಓಸ್ವಾಲ್, ಚೇತನ್ ಸಕಾರಿಯಾ, ಯಶ್ ಧುಳ್, ಸರ್ಫರಾಜ್ ಖಾನ್ ಮತ್ತು ಕಮಲೇಶ್ ನಾಗರಕೋಟಿ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಮಾರ್ಚ್ 27ರಂದು ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ತಂಡವು ಮುಂಬೈ ಇಂಡಿಯನ್ಸ್‌ ಎದುರು ಸೆಣಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು