ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IPL: ಆರ್‌ಸಿಬಿ ಹೀಯಾಳಿಸಿದ ಅಂಬಟಿ ರಾಯುಡು; ಸಿಎಸ್‌ಕೆ ಆಟಗಾರರಿಂದಲೂ ಕಾಮೆಂಟ್

Published 24 ಮೇ 2024, 7:08 IST
Last Updated 24 ಮೇ 2024, 7:08 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಲು ವಿಫಲರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಹೀಯಾಳಿಸಿದ್ದಾರೆ.

ಈ ಕುರಿತು 'ಎನ್‌ಡಿಟಿವಿ' ವರದಿ ಮಾಡಿದೆ.

ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಮಾರ್ಮಿಕ ಪೋಸ್ಟ್ ಮಾಡಿರುವ ರಾಯುಡು, 'ಐದು ಬಾರಿಯ ಚಾಂಪಿಯನ್ ತಂಡದಿಂದ 'ಜೆಂಟಲ್ ರಿಮೈಂಡರ್'. ಕೆಲವೊಮ್ಮೆ ಸೌಮ್ಯವಾಗಿ ನೆನಪಿಸುವುದು ಅಗತ್ಯವಾಗಿರುತ್ತದೆ' ಎಂದು ಬರೆದಿದ್ದಾರೆ.

ರಾಯುಡು ಅವರ ಪೋಸ್ಟ್‌ಗೆ ಸಿಎಸ್‌ಕೆ ಆಟಗಾರರಾದ ದೀಪಕ್ ಚಾಹರ್ ಹಾಗೂ ಮತೀಶ ಪತಿರಣ, ಇಮೋಜಿ ಮೂಲಕ ಕಾಮೆಂಟ್ ಮಾಡಿದ್ದಾರೆ.

ಈ ಮೊದಲು ಆರ್‌ಸಿಬಿ ಸೋಲಿನ ಬಳಿಕ ಪ್ರತಿಕ್ರಿಯಿಸಿದ್ದ ರಾಯುಡು, 'ನೀವು ಆರ್‌ಸಿಬಿ ಬಗ್ಗೆ ಮಾತನಾಡುವುದಾದರೆ ಪ್ಯಾಷನ್ ಹಾಗೂ ಆಕ್ರಮಣಕಾರಿ ಸೆಲೆಬ್ರೇಷನ್‌ಗಳಿಂದ ನಿಮಗೆ ಟ್ರೋಫಿ ಗೆಲ್ಲಲಾಗದು. ಇದಕ್ಕಾಗಿ ರಣನೀತಿಯ ಅಗತ್ಯವಿದೆ. ಪ್ಲೇ-ಆಫ್‌ಗೆ ತಲುಪಿದ ಮಾತ್ರಕ್ಕೆ ಐಪಿಎಲ್ ಟ್ರೋಫಿ ಸಿಗುವುದಿಲ್ಲ. ಗೆಲುವಿನ ಹಸಿವಿನೊಂದಿಗೆ ಆಟವಾಡಬೇಕಾಗುತ್ತದೆ' ಎಂದು ಹೇಳಿದ್ದರು.

ಮಂಗಳವಾರ ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಮಣಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಿಂದಲೇ ಹೊರಬಿದ್ದಿತ್ತು. ಇದಕ್ಕೂ ಮೊದಲು ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡವನ್ನು ಮಣಿಸಿ ಪ್ಲೇ-ಆಫ್‌ಗೆ ಪ್ರವೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT